ಫ್ಯಾಕ್ಟ್‌ಚೆಕ್: ‘ ಕಾಶ್ಮೀರಿ ಫೈಲ್ಸ್’ ಸಿನಿಮಾ ವೀಕ್ಷಿಸಿ ರೈಲಿನಲ್ಲಿ ಮುಸ್ಲಿಂ ವ್ಯಕ್ತಿಯನ್ನು ಮಹಿಳೆ ಥಳಿಸಿದ್ದು ನಿಜವಲ್ಲ
” ದ ಕಾಶ್ಮೀರ್ ಫೈಲ್ಸ್” ಸಿನಿಮಾವನ್ನು ವೀಕ್ಷಿಸಿರುವ ಕೆಲವರು ತಮ್ಮ ಆಕ್ರೋಶವನ್ನು ಹೇಗೆ ಹೊರ ಹಾಕುತ್ತಿದ್ದಾರೆ ನೋಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಮುಸ್ಲಿಂ ವ್ಯಕ್ತಿಯನ್ನು ಥಳಿಸುವ ವಿಡಿಯೋದೊಂದಿಗೆ ಪೋಸ್ಟ್ ಅನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗಿದ್ದು, ಈ ಘಟನೆಯು ‘ ದ ಕಾಶ್ಮೀರ್ ಫೈಲ್ಸ್’ ಚಿತ್ರದ ಪರಿಣಾಮವಾಗಿದೆ ಎಂದು ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:
ಘಟನೆಗೆ ಸಂಬಂಧಿಸಿದ ಕೀ ವರ್ಡ್‌ಗಳ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಲಾಗಿದ್ದು , ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊ ಹಳೆಯದು ಮತ್ತು’ದ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ಬಿಡುಗಡೆಗೂ ಮುನ್ನ ನಡೆದಿರುವ ಘಟನೆ ಎಂಬ ಮಾಹಿತಿ ಲಭ್ಯವಾಗಿದೆ. ವಿಡಿಯೊದಲ್ಲಿ ವ್ಯಕ್ತಿಯೊಬ್ಬರಿಗೆ ಥಳಿಸುತ್ತಿರುವ ಮಹಿಳೆಯು ಹಿಂದೂ ಧಾರ್ಮಿಕ ಮುಖಂಡ ಯತಿ ನರಸಿಂಹಾನಂದ ಅವರ ಶಿಷ್ಯೆಯಾದ ಮಧು ಶರ್ಮಾ ಎಂದು ತಿಳಿದುಬಂದಿದೆ.
Hindutva leader “Maa Madhura,” a disciple of Yati Narsinghanand, ass@ulted a Muslim man in a train and made him touch her feet for allegedly pushing her. pic.twitter.com/ASBIMUeLiZ
— Alishan Jafri (@alishan_jafri) October 18, 2021
Google ಸರ್ಚ್ ಮಾಡಿದಾಗ ಈ ಘಟನೆಯು ಅಕ್ಟೋಬರ್ 2021 ರಲ್ಲಿ ಇದೇ ರೀತಿಯ ದೃಶ್ಯಗಳನ್ನು ವರದಿ ಮಾಡಿದ ಹಲವು ಸುದ್ದಿ ಲೇಖನಗಳನ್ನು ಲಭ್ಯವಾಗಿವೆ. ಈ ವರದಿಗಳ ಪ್ರಕಾರ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಧು ಶರ್ಮಾ ಎಂಬ ಮಹಿಳೆಯನ್ನು ಮುಸ್ಲಿಂ ವ್ಯಕ್ತಿಯೊಬ್ಬರು ಹಾಗೆ ಹಾದು ಹೋಗುವಾಗ ತಳ್ಳಿದ್ದಾರೆ ಎಂದು ಆರೋಪಿಸಿ ಕೋಪಗೊಂಡ ಮಹಿಳೆ ಮುಸ್ಲಿಂ ವ್ಯಕ್ತಿಯನ್ನು ಥಳಿಸಿದ್ದಾರೆ ಮತ್ತು ಆಕೆ ತನ್ನ ಕಾಲುಗಳನ್ನು ಹಿಡಿದು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾಳೆ ಎಂದು ವರದಿಯಾಗಿದೆ. ಈ ಘಟನೆಯನ್ನು ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ. ಇದೇ ವೀಡಿಯೋ ಈಗ ಬೇರೆ ಹೇಳಿಕೆಯೊಂದಿಗೆ ವೈರಲ್ ಆಗುತ್ತಿದೆ.

ದೃಶ್ಯಗಳನ್ನು ವರದಿ ಮಾಡುವ ಇತರ ಕೆಲವು ಸುದ್ದಿ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು. ಪ್ರಕಟವಾಗಿರುವ ಈ ಎಲ್ಲಾ ಸುದ್ದಿ ಮತ್ತು ವರದಿಗಳ ಆಧಾರದಲ್ಲಿ ಈ ಘಟನೆಯು ‘ದ ಕಾಶ್ಮೀರ್ ಫೈಲ್ಸ್’ ಚಿತ್ರದ ಬಿಡುಗಡೆಗೂ ಮುನ್ನ ನಡೆದ ಘಟನೆಯಾಗಿದೆ. ಆದರೆ ವೈರಲ್ ಪೋಸ್ಟ್‌ನಲ್ಲಿ ಹೇಳುವಂತೆ ಈ ಸಿನಿಮಾದಿಂದ ಪ್ರೇರಿತಗೊಂಡು ಮುಸ್ಲಿಂ ವ್ಯಕ್ತಿಯನ್ನು ಥಳಿಸಲಾಗಿದೆ ಎಂಬುದು ಸುಳ್ಳು. ಘಟನೆ ನಡೆದಿರುವುದು 2021ರಲ್ಲಿ, ಆದರೆ ಸಿನಿಮಾ ಬಿಡುಗಡೆ ಆಗಿರುವುದು 11 ಮಾರ್ಚ್ 2022 ರಂದು. ಈ ಎಲ್ಲ ಅಂಶಗಳನ್ನು ಪರಿಗಣಿಸುವುದಾದರೆ ವಿಡಿಯೊವನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಘಟನೆಗೆ ಸಂಬಂಧಿಸಿದಂತೆ ರೈಲಿನಲ್ಲಿ ಮಹಿಳೆಯೊಬ್ಬರು ಮುಸ್ಲಿಂ ಮುಸ್ಲಿಂ ವ್ಯಕ್ತಿಯನ್ನು ಥಳಿಸುತ್ತಿರುವುದು ತನ್ನ ಕಾಲನ್ನು ಆ ವ್ಯಕ್ತಯು ತುಳಿದಿದ್ದಾನೆ ಎಂಬ ಅಸಹನೆಯ ಕಾರಣಕ್ಕೆ ಹಾಗೆ ಮಾಡಿದ್ದಾಳೆ. ಥಳಿಸುವ ಈ ದೃಶ್ಯಗಳು ಕಾಶ್ಮೀರ ಫೈಲ್ಸ್ ಸಿನಿಮಾ ಬಿಡುಗಡೆಗೂ ಹಿಂದಿನದ್ದಾಗಿದ್ದು ಯಾವುದೇ ಸಂಬಂಧ ಹೊಂದಿಲ್ಲ.
ಕೃಪೆ:ಫ್ಯಾಕ್ಟ್‌ಲಿ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮುಸ್ಲಿಮರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಪೋಸ್ಟ್ ಕಾರ್ಡ್ ಕನ್ನಡ

