ಫ್ಯಾಕ್ಟ್‌ಚೆಕ್: ಕೇಂದ್ರ ಸರ್ಕಾರದಿಂದ ಉಚಿತ ಸ್ಮಾರ್ಟ್ ಫೋನ್! ಇದು ನಿಜವೇ ?
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್ ಫೋನ್‌ಗಳನ್ನು ಒದಗಿಸಲು ಭಾರತ ಸರ್ಕಾರವು ಹೊಸ ಅಪ್ಲಿಕೇಶನ್ ಪೋರ್ಟಲ್ ಅನ್ನು ಪರಿಚಯಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ನೋಂದಣಿ ಲಿಂಕ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಚಾಲ್ತಿಯಲ್ಲಿರುವ ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ಯೋಜನೆಗೆ ಹೆಚ್ಚುವರಿಯಾಗಿ, GOI ವಿದ್ಯಾರ್ಥಿ ಸ್ಮಾರ್ಟ್‌ಫೋನ್ ಸ್ಕೀಮ್ 2022 ಅನ್ನು ಪರಿಚಯಿಸಿದೆ ಎಂದು ಈ ಪೋಸ್ಟ್‌ನಲ್ಲಿ ಹೇಳಲಾಗಿದೆ. ವಿದ್ಯಾರ್ಥಿಗಳು ಅಪ್ಲಿಕೇಶನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು ಸರ್ಕಾರದಿಂದ ನೀಡುತ್ತಿರುವ ಉಚಿತ ಸ್ಮಾರ್ಟ್‌ಫೋನ್‌ಗಳನ್ನು ಪಡೆಯಬಹುದು ಎಂದು ಪೋಸ್ಟ್ ಹೇಳುತ್ತದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:
ಪೋಸ್ಟ್‌ನಲ್ಲಿ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಅದು ಬಳಕೆದಾರರನ್ನು ಬ್ಲಾಗ್‌ಗೆ ಮರು ನಿರ್ದೇಶಿಸುತ್ತದೆ-“ https://smartph0nes-for-students22.scholarshub.online/” ಸರ್ಕಾರವು ಉಚಿತ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿದ್ದರೆ, ಅದು ಅಧಿಕೃತ ಪೋರ್ಟಲ್ ಮೂಲಕ ನೋಂದಣಿಯನ್ನು ಮಾಡುತ್ತದೆ, ಬ್ಲಾಗ್ ಮೂಲಕ ಅಲ್ಲ. ಮೊದಲ ನೋಂದಣಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿದ ನಂತರ, ಫೋನ್ ಸಂಖ್ಯೆ, ಮನೆ ವಿಳಾಸ ಮತ್ತು ಜನ್ಮ ದಿನಾಂಕದಂತಹ ಹೆಚ್ಚಿನ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಲು ಕೇಳುವ ಮತ್ತೊಂದು ಪೇಜ್‌ಗೆ ಹೋಗಲು ನಿರ್ದೇಶಿಸುತ್ತದೆ. ಅಂತಿಮವಾಗಿ, ಈ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಇದು ಅಂತಿಮ ಪುಟಕ್ಕೆ ಮರು ನಿರ್ದೇಶಿಸುತ್ತದೆ, ಅಲ್ಲಿ ಪುಟದ ಕೆಳಗೆ ಒದಗಿಸಲಾದ ನೀಲಿ ಪಟ್ಟಿಯು ತುಂಬುವವರೆಗೆ ನೋಂದಣಿ ಲಿಂಕ್ ಅನ್ನು ಅವರ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಬಳಕೆದಾರರನ್ನು ಕೇಳಲಾಗುತ್ತದೆ. ಯಾವುದೇ ಸರ್ಕಾರಿ ಉಪಕ್ರಮ ಅಥವಾ ಯೋಜನೆಯು ನೋಂದಣಿಯನ್ನು ಪೂರ್ಣಗೊಳಿಸಲು WhatsApp ನಲ್ಲಿ ಲಿಂಕ್ ಅನ್ನು ಹಂಚಿಕೊಳ್ಳಲು ಜನರನ್ನು ಕೇಳುವುದಿಲ್ಲ. ಹಾಗಾಗಿ ಇದು ಜನರನ್ನು ಮೋಸಗೊಳಿಸುವ ವೆಬ್‌ಸೈಟ್ ಆಗಿದೆ.

ಮಾರ್ಚ್ 2020 ರಲ್ಲಿ ಇದೇ ರೀತಿಯ ವೆಬ್‌ಸೈಟ್ ಲಿಂಕ್ ವೈರಲ್ ಆಗಿದ್ದಾಗ ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ (PIB) ಈ ಹಿಂದೆ ಅದನ್ನು ನಂಬಬೇಡಿ ಸುಳ್ಳು ಎಂದು ಘೋಷಿಸಿತ್ತು. ಅಲ್ಲದೆ, ಇತ್ತೀಚೆಗೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಜಾಹೀರಾತು ಕೋವಿಡ್-19 ಹಿನ್ನಲೆಯಲ್ಲಿ ಶಿಕ್ಷಣದ ಉದ್ದೇಶಕ್ಕಾಗಿ, 8ನೇ ತರಗತಿಯಿಂದ ಪಿಯುಸಿ 1ರವರೆಗಿನ ವಿದ್ಯಾರ್ಥಿಗಳಿಗೆ ₹3,500ಕ್ಕೆ ಲ್ಯಾಪ್‌ಟಾಪ್ ನೀಡಲಾಗುವುದು ಎಂದು ಹೇಳಿಕೊಂಡಾಗಲೂ PIB ಅದನ್ನು ತಳ್ಳಿಹಾಕಿತ್ತು.
Claim: An advertisement allegedly from Ministry of Corporate Affairs (MCA) claims that under #COVID19 Online Education Purpose, students from 8th class to PUC 1 will be given laptops at ₹3,500. #PIBFactCheck:This claim is #Fake. MCA is not associated with any such programme. pic.twitter.com/8CSbSlvaoO
— PIB Fact Check (@PIBFactCheck) September 12, 2020
ಆಗಸ್ಟ್ 2021 ರಲ್ಲಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಒಂದು ಕೋಟಿ ಯುವಕರಿಗೆ ಉಚಿತ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. ಉತ್ತರ ಪ್ರದೇಶ ಸರ್ಕಾರವು 2021 ರ ಡಿಸೆಂಬರ್‌ನಲ್ಲಿ ‘ಉಚಿತ ಸ್ಮಾರ್ಟ್‌ಫೋನ್ ಯೋಜನೆ’ಯನ್ನು ಪ್ರಾರಂಭಿಸಿತು ಮತ್ತು ಉಚಿತ ಸ್ಮಾರ್ಟ್‌ಫೋನ್‌ಗಳನ್ನು ಪಡೆಯಲು ‘ಡಿಜಿ ಶಕ್ತಿ’ ಪೋರ್ಟಲ್‌ನಲ್ಲಿ ನೋಂದಾಯಿಸಲು ವಿದ್ಯಾರ್ಥಿಗಳನ್ನು ಕೇಳಿತ್ತು. ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಈ ಸ್ಮಾರ್ಟ್‌ಫೋನ್‌ಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ವಿತರಿಸುತ್ತಿದ್ದು, ಈ ಫೋನ್‌ಗಳನ್ನು ಪಿಎಂ ಮುದ್ರಾ, ಪಿಎಂ ಯುವ ಸ್ವರೋಜ್‌ಗಾರ್ ಮತ್ತು ಇತರ ಜಿಒಐ ಯೋಜನೆಗಳೊಂದಿಗೆ ಲಿಂಕ್ ಮಾಡಲಾಗಿದೆ ಎಂದು ಹೇಳಿದರು.

ಒಟ್ಟಾರೆಯಾಗಿ ಹೇಳುವುದಾದರೆ, ಸರ್ಕಾರದ ಯೋಜನೆಯ ಹೆಸರಿನಲ್ಲಿ ಉಚಿತ ಸ್ಮಾರ್ಟ್‌ಫೋನ್‌ಗಳನ್ನು ನೀಡಲಾಗುತ್ತಿದೆ ಎಂಬ ಜಾಹಿರಾತುಗಳು ಜನರನ್ನು ಆಕರ್ಷಿಸಲು ಕೆಲವು ಸುಳ್ಳು ಲಿಂಕ್‌ಗಳನ್ನು ನೀಡಿ ಜನರನ್ನು ಮೋಸಮಾಡು ಉದ್ದೇಶವನ್ನು ಹೊಂದಿವೆ ಎಂದು PIB ಉಲ್ಲೇಖಿಸಿದೆ. ಗಾಹಿರಾತನ್ನು ನಂಬಿ ಲಿಂಕ್ ಮೂಲಕ ತಮ್ಮ ವಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ ಎಂದು PIB ಎಚ್ಚರಿಸಿದೆ.
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕೊರೊನಾ ಸಾವುಗಳ ಕುರಿತು ರಾಹುಲ್ ಗಾಂಧಿ ಬಗ್ಗೆ ಸುಳ್ಳು ಹೇಳಿದ ಪೋಸ್ಟ್ ಕಾರ್ಡ್

