ಫ್ಯಾಕ್ಟ್‌ಚೆಕ್: ಉತ್ತರ ಪ್ರದೇಶದಲ್ಲಿ ಥಳಿತಕ್ಕೊಳಗಾದ ವ್ಯಕ್ತಿ ದಲಿತ ಎಂಬುದು ನಿಜವೇ?

ಉತ್ತರ ಪ್ರದೇಶದಲ್ಲಿ ದಲಿತ ವ್ಯಕ್ತಿಯೊಬ್ಬನನ್ನು ಥಳಿಸಲಾಗುತ್ತಿದೆ ಎಂದು ಪೋಸ್ಟ್ ಮೂಲಕ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ವ್ಯಕ್ತಿಯೊಬ್ಬನಿಗೆ ಮನಸೋ ಇಚ್ಛೆ ಹೊಡೆಯುತ್ತಿರುವ ದೃಶ್ಯಾವಳಿಗಳನ್ನು ಕಾಣಬಹುದಾಗಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಹಾಗೂ ಘಟನೆಯ ಸತ್ಯಾಸತ್ಯೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ವೀಡಿಯೊವನ್ನು ಸಮಾಜವಾದಿ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ. ಅವರ ಟ್ವೀಟ್ ಪ್ರಕಾರ, ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಬಿಜೆಪಿ ನಾಯಕರೊಬ್ಬರು ವ್ಯಕ್ತಿಯನ್ನು ಥಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇವರು ಮಾಡಿರುವ ಟ್ವೀಟ್‌ನಲ್ಲಿ ಯಾವುದೇ ದಲಿತ ವ್ಯಕ್ತಿಯನ್ನು ಥಳಿಸಿರುವ ಉಲ್ಲೇಖವಿಲ್ಲ. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಷಹಜಹಾನ್‌ಪುರ ಪೊಲೀಸ್ ಅಧೀಕ್ಷಕರಾದ ಸಂಜಯ್‌ಕುಮಾರ್, ಆರೋಪಿ ಪ್ರತೀಕ್ ತಿವಾರಿ, ಮತ್ತು ಹಲ್ಲೆಗೊಳಗಾದ ವ್ಯಕ್ತಿ ರಾಜೀವ್ ಭಾರದ್ವಾಜ್ ಎಂದು, ಈ ಘಟನೆಯಲ್ಲಿ ಥಳಿತಕ್ಕೊಳಗಾದ ವ್ಯಕ್ತಿ ದಲಿತ ಅಲ್ಲ ಎಂದು ತಿಳಿಸಿದ್ದಾರೆ.

ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್‌ ಸರ್ಚ್ ಮಾಡಿದಾಗ, ಒಂದೇ ಘಟನೆಯ ಕುರಿತು ಅನೇಕ ಸುದ್ದಿ ಲೇಖನಗಳು ಕಂಡುಬಂದಿವೆ. ಯೋಗಿ ಸರ್ಕಾರದ ನಿಷ್ಕ್ರಿಯತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ರಾಜ್ಯದ ಕಾರ್ಯಕ್ಷಮತೆಯನ್ನು ಟೀಕಿಸುವ ವೀಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸುದ್ದಿ ಲೇಖನಗಳ ಪ್ರಕಾರ, ಸಂತ್ರಸ್ತನನ್ನು ಹೊಡೆಯುವ ವ್ಯಕ್ತಿ ಪ್ರತೀಕ್ ತಿವಾರಿ ಮತ್ತು ಬಲಿಪಶುವಿನ ಹೆಸರು ರಾಜೀವ್ ಭಾರದ್ವಾಜ್ ಎಂದು ಹೇಳಲಾಗಿದೆ. ಈ ಲೇಖನಗಳಲ್ಲಿ ಥಳಿತಕ್ಕೊಳಗಾದ ವ್ಯಕ್ತಿ ದಲಿತ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ.

ಘಟನೆಯ ಬಗ್ಗೆ 16 ಏಪ್ರಿಲ್ 2022 ರಂದು, ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಎಫ್ಐಆರ್ ಪ್ರಕಾರ, ಘಟನೆಯು ಒಂದು ತಿಂಗಳ ಹಿಂದೆ, ಅಂದರೆ 13 ಮಾರ್ಚ್ 2022 ರಂದು ನಡೆದಿದೆ. ಹಲ್ಲೆಗೊಳಗಾದ ರಾಜೀವ್ ಭಾರದ್ವಾಜ್ ದೂರು ನೀಡಿದ್ದು, ಪ್ರಮುಖ ಆರೋಪಿ ಹೆಸರನ್ನು ಪ್ರತೀಕ್ ತಿವಾರಿ ಎಂದು ಹೇಳಲಾಗಿದೆ. ಇದಲ್ಲದೆ ಸಂತ್ರಸ್ತ ರಾಜೀವ್ ಭಾರದ್ವಾಜ್ ದಲಿತನಲ್ಲ ಎಂದು ದೃಢಪಡಿಸಿದ್ದು ‘ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989’ ರ ಸೆಕ್ಷನ್‌ಗಳ ಅಡಿಯಲ್ಲಿ ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲ.

ಎಫ್‌ಐಆರ್ ಕಾಪಿಯನ್ನು ಇಲ್ಲಿ ನೋಡಬಹುದು

ಒಟ್ಟಾರೆಯಾಗಿ ಹೇಳುವುದಾದರೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ವ್ಯಕ್ತಿಯೊಬ್ಬ ಯೋಗಿ ಆದಿತ್ಯನಾಥ್ ಅವರ ಕಾರ್ಯ ವೈಕರಿಯನ್ನು ಟೀಕಿಸಿದ್ದ ಇದರಿಂದ ಕುಪಿತರಾದ ಕೆಲ ಬಿಜೆಪಿ ಕಾರ್ಯಕರ್ತರು ಟೀಕಿಸಿದ ವ್ಯಕ್ತಿಯನ್ನು ಥಳಿಸಿದ್ದಾರೆ. ಈ ವಿಡಿಯೋದಲ್ಲಿ ಥಳಿತಕ್ಕೊಳಗಾಗದ ವ್ಯಕ್ತಿಯು ದಲಿತ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹಂಚಿಕೊಳ್ಳಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿದ್ದು ಹಲ್ಲೆಗೊಳಗಾದ ವ್ಯಕ್ತಿಯು ದಲಿತ ಅಲ್ಲ ಎಂದು ದೃಢಪಡಿಸಿದ್ದಾರೆ. ಹಾಗಾಗಿ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳು.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ದೆಹಲಿ ಗಲಭೆಯೆಂದು ಹಳೆಯ ಫೋಟೋವನ್ನು ಹಂಚಿಕೊಂಡ ಬಿಜೆಪಿ ಮುಖಂಡರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights