ಫ್ಯಾಕ್ಟ್ಚೆಕ್: ದೇಶಕ್ಕಾಗಿ ಮೋದಿ ಪ್ರದಕ್ಷಿಣೆ ಎಂದು ಅರ್ಚಕ ಸಂತೋಷ್ ತ್ರಿವೇದಿಯ ವಿಡಿಯೊ ಹಂಚಿಕೆ
ವ್ಯಕ್ತಿಯೊಬ್ಬರು ಕೇದಾರನಾಥ ದೇಗುಲಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವಿಡಿಯೊದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಲಾಗಿದೆ. ಪ್ರಧಾನಿ ಮೋದಿಯು 26 ವರ್ಷ ಯುವಕನಾಗಿದ್ದಾಗ ಇಂತಹ ಕಸರತ್ತು ಮಾಡುತ್ತಿದ್ದರು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. “ಮೋದಿ ಜಿಯವರು 26 ನೇ ವಯಸ್ಸಿನಲ್ಲಿ ಕೇದಾರನಾಥದ ಪ್ರದಕ್ಷಿಣೆ. ರಾಷ್ಟ್ರದ ಪರವಾಗಿ ಭಗವಂತನಿದೆ ಭಕ್ತಿಯನ್ನು ಅರ್ಪಿಸುವ ಇಂತಹ ಭಕ್ತನನ್ನು ನೀವು ಎಂದಾದರೂ ನೋಡಿದ್ದೀರಾ? “ಎಂಬ ಒಕ್ಕಣೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್ಚೆಕ್ :
InVid ಟೂಲ್ ಬಳಸಿಕೊಂಡು, ವೈರಲ್ ವೀಡಿಯೊದ ಕೀಫ್ರೇಮ್ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ. ಜೂನ್ 21, 2021 ರಂದು ETV ಭಾರತ್ ಪ್ರಕಟಿಸಿದ ಸುದ್ದಿ ವರದಿಯು ಲಭ್ಯವಾಗಿದೆ, ವೈರಲ್ ವೀಡಿಯೊದಲ್ಲಿರುವ ವ್ಯಕ್ತಿಯನ್ನು ಕೇದಾರನಾಥ ದೇವಾಲಯದ ಅರ್ಚಕ ಸಂತೋಷ್ ತ್ರಿವೇದಿ ಎಂದು ಲೇಖನ ತಿಳಿಸಿದೆ. ತ್ರಿವೇದಿ ಅವರು ತಮ್ಮ ಕೈಗಳಿಂದ ಕೇದಾರನಾಥ ದೇವಾಲಯವನ್ನು ಪ್ರದಕ್ಷಿಣೆ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.

ವೈರಲ್ ವೀಡಿಯೊವನ್ನು ETV ಭಾರತ್ನ ಅಪ್ಲೋಡ್ ಮಾಡಿದ ವೀಡಿಯೊದೊಂದಿಗೆ ಹೋಲಿಸಕೆ ಮಾಡಿ ನೋಡಿದಾಗ ಅನೇಕ ಹೋಲಿಕೆಗಳನ್ನು ಕಂಡುಬಂದವು, ಇದೇ ರೀತಿಯ ವೀಡಿಯೊವನ್ನು ಇಂಡಿಯಾ ಟಿವಿ ಜೂನ್ 21, 2020 ರಂದು ಸಹ ನಡೆಸಿತು, ವಿವರಣೆಯೊಂದಿಗೆ “ಕೇದಾರನಾಥ ಧಾಮ್ ದೇವಾಲಯದ ಅರ್ಚಕ ಸಂತೋಷ್ ತ್ರಿವೇದಿ ಅವರು ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಅನನ್ಯ ಯೋಗವನ್ನು ಮಾಡಿದರು” ಎಂದು ವರದಿ ಮಾಡಿದೆ.

ಇದಲ್ಲದೆ ಈ ಬಗ್ಗೆ ಮತ್ತಷ್ಟು ಮಾಹಿತಿಗಳು ಇವೆಯೇ ಎಂದು ಕೀವರ್ಡ್ಗಳೊಂದಿಗೆ ಸರ್ಚ್ ಮಾಡಿದರೂ, ವೈರಲ್ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಯನ್ನು ಕಂಡುಹಿಡಿಯಲಾಗಲಿಲ್ಲ. ಇಂತಹ ಘಟನೆ ನಡೆದಿದ್ದರೆ ಅದನ್ನು ಮುಖ್ಯವಾಹಿನಿಯ ಮಾಧ್ಯಮಗಳು ದೊಡ್ಡ ಮಟ್ಟದಲ್ಲಿ ಸುದ್ದಿ ಪ್ರಕಟಿಸುತ್ತಿದ್ದವು ಆದರೆ ಹಂತಹ ವಿಶ್ವಾಸಾರ್ಹ ಮೂಲಗಳು ಕಂಡುಬಂದಿಲ್ಲ. ಹಾಗಾಗಿ ವೈರಲ್ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್ : ಶಾಲಾ ಮಕ್ಕಳ ಅಪಹರಣ ಎಂದು ಸ್ಕ್ರಿಪ್ಟೆಡ್ ವಿಡಿಯೊ ಹಂಚಿಕೆ


ಮೋದಿಯ 26 ನೇ ವಯಸ್ಸಿನಲ್ಲಿ ಅಂದರೆ 46 ವರ್ಷಗಳ ಹಿಂದೆ ಡಿಜಿಟಲ್ ವಿಡಿಯೋ ಕ್ಯಾಮರಾ ಎಲ್ಲಿತ್ತು ☺️?