ಪಾಲಿಕೆ ಆಯುಕ್ತರ ಮೇಲೆ ಹಲ್ಲೆ; ಮೇಯರ್ ಸೇರಿ ಬಿಜೆಪಿ ಕೌನ್ಸಿಲರ್‌ಗಳ ಅಮಾನತು!
ಜೈಪುರ ಗ್ರೇಟರ್ ಮುನ್ಸಿಪಲ್ ಕಾರ್ಪೊರೇಶನ್ ಆಯುಕ್ತರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪಾಲಿಕೆಯ BJP ಮೇಯರ್ ಮತ್ತು ಮೂವರು ಕೌನ್ಸಿಲರ್‌ಗಳನ್ನು ರಾಜಸ್ಥಾನ ಸರ್ಕಾರ ಅಮಾನತುಗೊಳಿಸಿದೆ. ಇದಕ್ಕೆ ಬಿಜೆಪಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ವಿಷಯದಲ್ಲಿ ನ್ಯಾಯಾಂಗ ವಿಚಾರಣೆ ನಡೆಸಲು ರಾಜ್ಯಸ್ಥಾನದ ಕಾಂಗ್ರೆಸ್ ಸರ್ಕಾರವೂ ನಿರ್ಧರಿಸಿದೆ.
ಪಾಲಿಕೆಯ ಆಯುಕ್ತರನ್ನು ಮೇಯರ್ ಸೇರಿದಂತೆ ಮೂವರು ಕೌನ್ಸಿಲರ್‌ಗಳು ತಳ್ಳುವುದು, ನಿಂದಿಸುವುದು, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪದ ಆಧಾರದ ಮೇಲೆ ಸ್ಥಳೀಯ ಸ್ವ-ಆಡಳಿತ (ಲೋಕಲ್ ಸೆಲ್ಫ್ ಗೌರ್ನೆನ್ಸ್) ಇಲಾಖೆ ಭಾನುವಾರ ರಾತ್ರಿ ಮೇಯರ್ ಸೋಮಯಾ ಗುರ್ಜರ್, ಕೌನ್ಸಿಲರ್‌ಗಳಾದ ಅಜಯ್ ಸಿಂಗ್ ಚೌಹಾನ್, ಪರಾಸ್ ಜೈನ್ (ಮೂವರೂ ಬಿಜೆಪಿಗರು) ಮತ್ತು ಶಂಕರ್ ಶರ್ಮಾ (ಸ್ವತಂತ್ರ) ಅವರನ್ನು ಅಮಾನತುಗೊಳಿಸಲಾಗಿದೆ.
ಮನೆ-ಮನೆಗಳಿಂದ ಕಸ ಸಂಗ್ರಹಿಸುವ ಟೆಂಡರ್ ಪಡೆದಿರುವ ಕಂಪನಿಗೆ ಸಂಬಂಧಿಸಿದ ವಿಷಯದ ಕುರಿತು ಸಭೆಯಲ್ಲಿ ಈ ಘಟನೆ ನಡೆದಿದೆ.
ಸಭೆಯಲ್ಲಿ, ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಹೀಗಾಗಿ ಸಭೆಯ ಅರ್ಧದಲ್ಲಿಯೇ ಆಯುಕ್ತರು ಹೊರನಡೆಯಲು ಯತ್ನಿಸಿದರು. ಈ ವೇಳೆ ಕೌನ್ಸಿಲರ್‌ಗಳು ಅವರ ಮೇಲೆ ನಿಂದನೆ ಮತ್ತು ತಳ್ಳುವುದನ್ನು ಮಾಡಿದ್ದಾರೆ.
ನಾಲ್ವರನ್ನು ಅಮಾನತುಗೊಳಿಸಿರುವ ಕ್ರಮವನ್ನು ಬಿಜೆಪಿ ಖಂಡಿಸಿದೆ. “ಮೇಯರ್ ಮತ್ತು ಕೌನ್ಸಿಲರ್‌ಗಳನ್ನು ಅಮಾನತುಗೊಳಿಸುವುದು ದುರದೃಷ್ಟಕರ. ಇದು ಕಾಂಗ್ರೆಸ್ ಪತನಕ್ಕೆ ಕಾರಣವಾಗುತ್ತದೆ” ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.
Read Also: ಯಡಿಯೂರಪ್ಪ, ಸಿದ್ದರಾಮಯ್ಯಗೆ ಸೆಡ್ಡು ಹೊಡೆದಿದ್ದ ಹಿರಿಯ ನಾಯಕ ಪ್ರೊಫೆಸರ್ ಮುಮ್ತಾಜ್ ಅಲಿಖಾನ್ ನಿಧನ