ಫ್ಯಾಕ್ಟ್‌ಚೆಕ್: ಉತ್ತರ ಪ್ರದೇಶದಲ್ಲಿ ಮಹಿಳೆ ಬೆಂಕಿ ಹಚ್ಚಿಕೊಂಡ ವಿಡಿಯೋ ಹಳೆಯದು
ಉತ್ತರ ಪ್ರದೇಶ ರಾಜಧಾನಿ ಲಕ್ನೋದ ವಿಧಾನ ಸಭಾ ಕಟ್ಟಡದ ಮುಂದೆ ಅಮೇಥಿಯ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಎಂಟು ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆಡಳಿತ ಪಕ್ಷ, ಸ್ಥಳೀಯ ಗೂಂಡಾಗಳಿಂದ ಬೇಸತ್ತು ಮಹಿಳೆ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಬಿಜೆಪಿ ಸಂಸದೆ ಸ್ಮೃತಿ ಇರಾನಿ ಅಮೇಥಿ ಕ್ಷೇತ್ರವಾಗಿರುವುದರಿಂದ ಅವರನ್ನು ಗುರಿಯಾಗಿಸಿಕೊಂಡು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ವಿಡಿಯೋದ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :
ವೀಡಿಯೊದ ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಜುಲೈ 2020 ರ ಹಿಂದಿನ ಹಲವು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೆಲವು ಸುದ್ದಿ ಲೇಖನಗಳು ಪ್ರಕಟವಾಗಿದ್ದು, Dainik Bhaskar, Navodya Times, The Week, and Hindustan ನಂತಹ ವಿವಿಧ ಮಾಧ್ಯಮ ಸಂಸ್ಥೆಗಳು ಈ ಘಟನೆಯನ್ನು ವರದಿ ಮಾಡಿವೆ.

ಮತ್ತಷ್ಟು ಪರಿಶೀಲಿಸಿದಾಗ, ದಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಜುಲೈ 18, 2020 ರಂದು ಪ್ರಕಟವಾದ ಲೇಖನ ಕಂಡುಬಂದಿದ್ದು, ಭಯಾನಕ ಘಟನೆಯೊಂದರಲ್ಲಿ, ತಾಯಿ ಮತ್ತು ಆಕೆಯ ಮಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಲಕ್ನೋದ ಉತ್ತರ ಪ್ರದೇಶ ವಿಧಾನಸಭೆಯ ಮುಂಭಾಗದಲ್ಲಿಯೇ ಈ ಆಘಾತಕಾರಿ ಸನ್ನಿವೇಶ ನಡೆದಿದೆ. ಅಮೇಥಿಯಲ್ಲಿನ ಭೂ ವಿವಾದ ಪ್ರಕರಣದಲ್ಲಿ ಪೊಲೀಸರ ವರ್ತನೆಯಿಂದ ಬೇಸತ್ತ ತಾಯಿ ಮತ್ತು ಮಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇಬ್ಬರಿಗೂ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ತಾಯಿ ಸಾವನ್ನಪ್ಪಿದ್ದರು.
वर्ष 2020 के इस प्रकरण में तत्समय आवश्यक कार्यवाही कर @lkopolice द्वारा भ्रामक पोस्ट का खंडन किया जा चुका है। कृपया बिना सत्यापन के भ्रामक पोस्ट न करें।#UPPolice से सम्बंधित #FactCheck के लिए टैग करें @UPPViralCheck
FB- @UPPFactCheck
Insta- @uppfactcheckhttps://t.co/oLrHHoMO59 https://t.co/CnBUzozxNM pic.twitter.com/HKx45CqEVM— UPPOLICE FACT CHECK (@UPPViralCheck) July 30, 2022
ವೈರಲ್ ವೀಡಿಯೊದ ಬಗ್ಗೆ UP POLICE FACT CHECK (@UPPViralCheck) ನ ಅಧಿಕೃತ Twitter ಹ್ಯಾಂಡಲ್‌ನಿಂದ ಜುಲೈ 30, 2022 ರಂದು ಟ್ವೀಟ್ ಮಾಡಿದ್ದು, ಈ ವಿಷಯದ ಬಗ್ಗೆ ಸರಿಯಾದ ಸ್ಪಷ್ಟೀಕರಣವನ್ನು ಸಹ ನೀಡಿದೆ. ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಘಟನೆಯು 2020 ರಲ್ಲಿ ನಡೆದಿದ್ದು, ಇತ್ತೀಚೆಗೆ ಯಾವುದೇ ಘಟನೆ ನಡೆದಿಲ್ಲ ಎಂದು ಲಕ್ನೋ ಪೊಲೀಸರ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ. ಇದೊಂದು ಎರಡು ವರ್ಷಗಳ ಹಿಂದಿನ ಘಟನೆಯಾಗಿದ್ದು ದಯವಿಟ್ಟು ವದಂತಿಗಳನ್ನು ಹರಡಬೇಡಿ ಎಂದು ವಿನಂತಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, 2020ರಲ್ಲಿ ನಡೆದ ಮಹಿಳೆಯ ಆತ್ಮಹತ್ಯಯ ಘಟನೆಯನ್ನು, ಜುಲೈ 2022 ರಲ್ಲಿ ಲಕ್ನೋದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಂತೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ವೈರಲ್ ಪೋಸ್ಟ್ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಚಿನ್ನದ ಹಾವು ಇರುವುದು ನಿಜವೇ?

