ಫ್ಯಾಕ್ಟ್ಚೆಕ್: ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಪರ ಘೋಷಣೆಯನ್ನು ವಿರುದ್ಧ ಪ್ರತಿಭಟನೆ ಎಂದು ಹಂಚಿಕೆ
ಬಾಲಿವುಡ್ ನಟ ಅಮೀರ್ ಖಾನ್ ನಟನೆಯ ‘ಲಾಲ್ಸಿಂಗ್ ಚಡ್ಡಾ’ ಪ್ರದರ್ಶಿಸಬಾರದು ಎಂದು ಆಗ್ರಹಿಸಿ ಸಿಖ್ ತಾಲಮೇಲ್ ಸಂಘಟನೆ ಸದಸ್ಯರು ಪಂಜಾಬ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಸೂಚಿಸುವ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ #BoycottLaalSinghChadha ಎಂದು ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿತ್ತು. ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋ ಪೋಸ್ಟ್ನ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.
https://twitter.com/beingarun28/status/1557919690252439552?ref_src=twsrc%5Etfw%7Ctwcamp%5Etweetembed%7Ctwterm%5E1557919690252439552%7Ctwgr%5E2f28bc4a6f3f642a6c95b79a2bff36ad712f456a%7Ctwcon%5Es1_&ref_url=https%3A%2F%2Fthelogicalindian.com%2Ffact-check%2Fsikh-group-in-punjab-protested-against-aamir-khans-lal-singh-chadda-36997
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಪೋಸ್ಟ್ನ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಘಟನೆಗೆ ಸಂಬಂಧಿಸಿದ ಮಾಧ್ಯಮ ವರದಿಗಳು ಲಭ್ಯವಾಗಿದ್ದು, ವೈರಲ್ ವಿಡಿಯೊದಲ್ಲಿ ಕಂಡುಬರುವ ದೃಶ್ಯಗಳಲ್ಲಿ ಸಿನಿಮಾದ ಪರವಾಗಿ ಬೆಂಬಲ ಸೂಚಿಸಿ ಘೋಷಣೆ ಕೂಗುತ್ತಿರುವುದು ಎಂದು ಖಚಿತವಾಗಿದೆ. ಆಗಸ್ಟ್ 12 ರಂದು ಇಂಡಿಯನ್ ಎಕ್ಸ್ಪ್ರೆಸ್ ಮಾಡಿದ ವರದಿಯಲ್ಲಿ ಇದೇ ಫೋಟೋವನ್ನು ಪ್ರಕಟಿಸಿ, ‘ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಚಿತ್ರದ ಪರವಾಗಿ ಜಲಂಧರ್ನಲ್ಲಿ ಸಿಖ್ಖ್ ಸಮುದಾಯದವರು ಘೋಷಣೆ ಕೋಗಿದ್ದಾರೆ.
ವಿಡಿಯೋ ಪೋಸ್ಟ್ಅನ್ನು ಪರಿಶೀಲನೆ ನಡೆಸಿರುವ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ಚೆಕ್ ವೇದಿಕೆ, ಈ ಪ್ರದರ್ಶನ ನಡೆದಿರುವುದು ಚಿತ್ರದ ಪರವಾಗಿ ಎಂದು ಮಾಹಿತಿ ನೀಡಿದೆ. ಜಲಂಧರ್ನಲ್ಲಿ ನಡೆದಿದ್ದ ಪ್ರದರ್ಶನದ ಬಗ್ಗೆ ಹಲವು ಪತ್ರಿಕೆಗಳು ಆಗಸ್ಟ್ 12ರಂದು ವರದಿ ಮಾಡಿದ್ದವು. ಸಿನಿಮಾ ಪ್ರದರ್ಶನ ವಿರೋಧಿಸಿರುವ ಸ್ಥಳೀಯ ಶಿವಸೇನಾ ಒತ್ತಡಕ್ಕೆ ಮಣಿಯಬಾರದು ಎಂದು ಆಗ್ರಹಿಸಿ ಸಂಘಟನೆ ಸದಸ್ಯರು ಪ್ರದರ್ಶನ ನಡೆಸಿದ್ದರು. ಆದರೆ, ಸಿನಿಮಾವನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ವೆಬ್ಸೈಟ್ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ 2015ರಲ್ಲಿ ಅಮೀರ್ ಖಾನ್ ಅಸಹಿಷ್ಟುತೆ ಪದ ಬಳಸಿದ್ದರು. ಅಲ್ಲದೆ ಅವರ ಪತ್ನಿ ಕಿರಣ್ ರಾವ್ ಭಾರತವನ್ನು ತೊರೆಯುವ ಬಗ್ಗೆ ಮಾತನಾಡಿದ್ದರು. ಹಾಗಾಗಿ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಚಿತ್ರದ ಬಗ್ಗೆ #BoycottLaalSinghChaddha ಎಂಬ ಹ್ಯಾಶ್ಟ್ಯಾಗ್ ಟ್ರೆಂಡಿಂಗ್ನೊಂದಿಗೆ ಸಿನಿಮಾವನ್ನು ಬಹಿಷ್ಟರಿಸುವಂತೆ ಜನರಿಗೆ ಕರೆ ನೀಡಲಾಗಿತ್ತು. ಅಲ್ಲದೆ 200,000ಕ್ಕೂ ಹೆಚ್ಚು ಟ್ವೀಟ್ಗಳನ್ನು ಹಂಚಿಕೊಳ್ಳಲಾಗಿದ್ದು ಇದರಲ್ಲಿ ಅತೀ ಹೆಚ್ಚು ಟ್ವೀಟ್ ಗಳು ಮೋದಿಯ ಬಿಜೆಪಿ ಪಕ್ಷದ ಬೆಂಬಲಿಗರಿಂದ ಆಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಪಾಕ್ನಲ್ಲಿ ಪ್ರವಾಹ ಎಂದು, ಜಪಾನ್ನ ಹಳೆಯ ವಿಡಿಯೊ ಹಂಚಿಕೆ

