ಫ್ಯಾಕ್ಟ್‌ಚೆಕ್: ಸಮುದ್ರ ಮಧ್ಯದಲ್ಲಿ ದೈತ್ಯಾಕಾರದ ಹಾವು ಹೆಡೆ ಎತ್ತಿರುವುದು ನಿಜವಲ್ಲ
ಸಮುದ್ರದ ಅಲೆಗಳ ಮಧ್ಯದಲ್ಲಿ ಹೆಡೆ ಎತ್ತಿರುವ ದೈತ್ಯಾಕಾರದ ಸರ್ಪವೊಂದು, ಭಾರಿ ಜನಸ್ತೋಮದ ಕಡೆ ತಿರುಗಿ ಆಶಿರ್ವಾದ ಮಾಡುತ್ತಿರುವಂತೆ ಕಾಣುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ವೈರಲ್ ಆಗಿದೆ. ” ಇದನ್ನು ಬೇಗ ಶೇರ್ ಮಾಡಿ 10 ನಿಮಿಷದಲ್ಲಿ ನಿಮಗೆ ಶುಭವಾಗುತ್ತದೆ” ಎಂಬ ಒಕ್ಕಣೆಯೊಂದಿಗೆ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋಗೆ ಸುಮಾರು 10ಸಾವಿರಕ್ಕೂ ಅಧಿಕ ಲೈಕ್‌ಗಳು ಬಂದಿದ್ದು, 1200 ಕಮೆಂಟ್‌ಗಳು ದಾಖಲಾಗಿವೆ. ಹಾಗಿದ್ದರೆ ಈ ವಿಡಿಯೋ ದೃಶ್ಯಗಳಲ್ಲಿ ಕಾಣುತ್ತಿರುವ ದೈತ್ಯಾಕಾರದ ಹಾವು ಸತ್ಯವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.


ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದ ದೃಶ್ಯಗಳನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ವೈರಲ್ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. “ರೀಲ್ಸ್ ವೀಡಿಯೊ ಪಬ್ಲಿಷಿಂಗ್ ಅಪ್ಲಿಕೇಶನ್ ಟಿಕ್‌ಟಾಕ್‌ನಲ್ಲಿ ಈ ವೀಡಿಯೊಗಳನ್ನು ನೋಡಬಹುದು” ಈ ವೈರಲ್ ವಿಡಿಯೋ ಕಳೆದ 3-4 ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಇದು ಎಡಿಟ್ ಮಾಡಲಾದ ವಿಡಿಯೊ ಎಂದು ತಿಳಿದುಬಂದಿದೆ.
ಕೀ ವರ್ಡ್ ಬಳಸಿ ಸರ್ಚ್ ಮಾಡಿದಾಗ, ಇದೇ ಶೀರ್ಷಿಕೆಯೊಂದಿಗೆ 22 ಜನವರಿ 2020 ರಂದು ಜುಗಂತರ್‌ನಲ್ಲಿ ಆನ್‌ಲೈನ್‌ನಲ್ಲಿ ಪ್ರಕಟವಾದ ಸುದ್ದಿಯೊಂದು ಲಭ್ಯವಾಯಿತು, ಅದನ್ನು ಇಲ್ಲಿ ನೋಡಬಹುದು. ಟಿಕ್‌ಟಾಕ್ ಅಪ್ಲಿಕೇಷನ್ ಮೂಲಕ ಎಡಿಟ್ ಮಾಡಿದ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ಸಮುದ್ರತೀರದಲ್ಲಿ ಜನರ ಗುಂಪು ಸಮುದ್ರದ ಮಧ್ಯದಲ್ಲಿ ನಿಂತಿರುವ ದೈತ್ಯಾಕಾರದ ಹಾವನ್ನು ಕುತೂಹಲದಿಂದ ನೋಡುತ್ತ ಆಶ್ಚರ್ಯಚಕಿತರಾಗಿದ್ದಾರೆ ಎಂದು ತೋರಿಸುತ್ತದೆ. ಈ ವೈರಲ್ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ, ಆದರೆ ಈ ವಿಡಿಯೋದಲ್ಲಿ ಕಾಣುವ ದೃಶ್ಯಗಳು ಆಪ್‌ಗಳ ಮೂಲಕ ರಚಿಸಲಾಗಿರುವ ಎಡಿಟ್ ಮಾಡಿದ ವಿಡಿಯೋ ಎಂದು ಖಚಿತವಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹೆಡೆ ಎತ್ತಿರುವ ದೈತ್ಯಾಕಾರದ ಸರ್ಪ ದೃಶ್ಯಗಳು ನಿಜವಾದ ದೃಶ್ಯಗಳಲ್ಲ, ಅಷ್ಟು ದೈತ್ಯಾಕಾರದ ಹೆಡೆ ಎತ್ತಿದ ಹಾವುಗಳು ಸಮುದ್ರ ಮಧ್ಯದಲ್ಲಿ ಬರಲು ಸಾಧ್ಯವಿಲ್ಲ ಮತ್ತು ಬೃಹದಾಕಾರದ ಹಾವುಗಳು ಇರುವುದರ ಬಗ್ಗೆ ಪುರಾವೆಗಳಿಲ್ಲ. ಹಾಗಾಗಿ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಇನ್ನೊಂದು ಮುಖ್ಯ ವಿಷಯ ಏನೆಂದರೆ ಜನಸಾಮಾನ್ಯರ ನಂಬಿಕೆ, ಅಸಹಾಯಕತೆ ಮತ್ತು ದೌರ್ಬಲ್ಯವನ್ನೆ ಬಂಡವಾಳ ಮಾಡಿಕೊಂಡ ಕೆಲವರು ಅದನ್ನು ದುರುಪಯೋಗ ಮಾಡಿಕೊಳ್ಳಲು ಮತ್ತು ಅವರು ರಚಿಸಿದ ವಿಡಿಯೊ ಹೆಚ್ಚು ವೀಕ್ಷಣೆ ಪಡೆಯುವಂತೆ ಮಾಡಲು ಈ ವಿಡಿಯೋವನ್ನು ಹೆಚ್ಚು ಶೇರ್ ಬೇಗ ಶೇರ್ ಮಾಡಿದರೆ ನಿಮಗೆ ಶುಭ ಸುದ್ದಿ ಬರುತ್ತದೆ, ಒಳ್ಳೆಯದಾಗುತ್ತದೆ ಎಂಬ (ಟ್ರಿಕ್ರ್ಸ್) ಸುಳ್ಳುಗಳನ್ನೇಳಿ ಹಂಚಿಕೊಳ್ಳುತ್ತಾರೆ. ಆದರೆ ಇವುಗಳನ್ನು ನಂಬುವ ಮುನ್ನ ಪರಿಶೀಲಿಸಿ ಎಂಬುದು ಏನ್‌ಸುದ್ದಿ.ಕಾಂನ ಆಶಯ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಬೂರ್ಖಾ ಧರಿಸಿದ್ದ ಮುಸ್ಲಿಂ ಮಹಿಳೆ ‘ಗಣೇಶನ ಮೂರ್ತಿ’ಗಳನ್ನು ಒಡೆದು ಹಾಕಿದ್ದು ನಿಜ ! ಆದರೆ

