ಫ್ಯಾಕ್ಟ್‌ಚೆಕ್ : ಗಾಂಧಿಯ ಈ ಫೋಟೋಗಳ ಬಗ್ಗೆ ನಿಮಗೆಷ್ಟು ಗೊತ್ತು ?
ಇಂದು ಅಕ್ಟೋಬರ್ 2, 2022. ಮಹಾತ್ಮ ಗಾಂಧಿಯವರ 153ನೇ ಜನ್ಮದಿನ. ಸತ್ಯಾಗ್ರಹದ ಜೊತೆಗೆ ಅಹಿಂಸೆಯ ತತ್ವವನ್ನು ಇಡೀ ಜಗತ್ತಿಗೆ ಸಾರಿದ ಸಂತ, ಮಹಾತ್ಮನ ಜನ್ಮ ದಿನವನ್ನು ಗಾಂಧಿ ಜಯಂತಿ ಎಂದು, ಈ ದಿನವನ್ನು ಅಹಿಂಸಾ ದಿನವಾಗಿ ಆಚರಿಸಲಾಗಿದೆ.

ಮಹಾತ್ಮಾ ಗಾಂಧಿ ಅವರ ಫೋಟೋ ವೈರಲ್ ಆಗಿದ್ದು, ಅದರಲ್ಲಿ ಅವರು ವಿದೇಶಿ ಹುಡುಗಿಯೊಂದಿಗೆ ಧೋತಿ ಧರಿಸಿ ನೃತ್ಯ ಮಾಡುತ್ತಿದ್ದಾರೆ. ಮಹಾತ್ಮ ಗಾಂಧಿ ಹೇಗೆ ಹುಡುಗಿಯೊಂದಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ ನೋಡಿ ಎಂಬ ಹೇಳಿಕೆಯೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಸ್ವಾತಂತ್ರ ಪೂರ್ವದಿಂದಲೂ ಗಾಂಧಿ ಬಗ್ಗೆ ಪರ ಮತ್ತು ವಿರೋದಗಳು ಇದ್ದಿದ್ದೆ ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಈ ಪೋಟೋಗಳು ಹರಿದಾಡುತ್ತಿದ್ದು ಇವುಗಳ ಸತ್ಯಾಸತ್ಯತೆಗಳು, ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.
ಫ್ಯಾಕ್ಟ್‌ಚೆಕ್ :
ಪೋಟೋ 1 :
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೋವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಈ ಫೋಟೋದ ಬಗ್ಗೆ ಕೆಲವು ಲೇಖನಗಳು ಕಂಡುಬಂದಿದ್ದು, ಈ ಲೇಖನಗಳ ಪ್ರಕಾರ, ಫೋಟೋದಲ್ಲಿ ಹುಡುಗಿಯೊಂದಿಗೆ ನೃತ್ಯ ಮಾಡುತ್ತಿರುವ ವ್ಯಕ್ತಿಯು ಆಸ್ಟ್ರೇಲಿಯನ್ ನಟ ಎಂದು ಧೃಡಪಟ್ಟಿದೆ. ಫೋಟೋವನ್ನು ಹತ್ತಿರದಿಂದ ಝೂಮ್ ಮಾಡಿ ನೋಡಿದಾಗ ಅದು ಗಾಂಧಿ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ ಆ ನಟನು ಗಾಂಧಿಯಂತೆಯೇ ಕಾಣುತ್ತಿರುವುದರಿಂದ ಫೋಟೋವನ್ನು ಮತ್ತಷ್ಟು ಕ್ರಾಪ್ ಮಾಡಿ ಹಂಚಿಕೊಳ್ಳಲಾಗಿದೆ.

ನಿಜವಾದ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಫೋಟೋದಲ್ಲಿರುವ ವ್ಯಕ್ತಿಯ ತೋಳುಗಳು ಶಕ್ತಿಶಾಲಿಯಾಗಿವೆ ಮತ್ತು ಬಲಶಾಲಿಯಾಗಿರುವಂತೆ ಕಾಣುತ್ತಿದೆ. ಫೋಟೋವನ್ನು ಗಮನಿಸಿ. ಹಾಗಾಗಿ ಈ ಚಿತ್ರದಲ್ಲಿರುವ ವ್ಯಕ್ತಿ ಗಾಂಧಿ ಅಲ್ಲ ಎಂದು ಸ್ಪಷ್ಟವಾಗಿದೆ.
ಫೋಟೋ 2:
ಹುಡುಗಿಯೊಂದಿಗೆ ಗಾಂಧಿ ಆತ್ಮೀಯವಾಗಿರುವ ಈ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ AP ಫೋಟೋ ಲೈಬ್ರರಿಯಲ್ಲಿ ಈ ಫೋಟೋಗೆ ಸಂಬಂಧಿಸಿದ ಮೂಲ ಚಿತ್ರ ಕಂಡುಬಂದಿದೆ. ಈ ಫೋಟೋ 1946ರಲ್ಲಿ ಮುಂಬೈನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ತೆಗೆದದ್ದು ಎಂದು ವಿವರಣೆಯಲ್ಲಿ ಹೇಳಲಾಗಿದೆ. ಆದರೆ ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಪೋಸ್ಟ್‌ನಲ್ಲಿ ಮಹಾತ್ಮ ಗಾಂಧಿಯವರು ಇನ್ನೂ ಅದೇ ಭಂಗಿಯಲ್ಲಿದ್ದಾರೆ, ಮೂಲ ಫೋಟೋದಲ್ಲಿ ನೆಹರು ಬದಲಿಗೆ ಹುಡುಗಿಯ ಫೋಟೋವನ್ನು ಡಿಜಿಟಲ್ ಮೂಲಕ ಅಂಟಿಸಲಾಗಿದೆ ಎಂದು ಖಚಿತವಾಗಿ ಹೇಳಬಹುದು.


ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್ ನಕಲಿ ಮತ್ತು ಫೋಟೋಶಾಪ್ ಮೂಲಕ ರಚಿಸಲಾಗಿದ್ದು, ಈ ರೀತಿ ಪೋಟೋಗಳನ್ನು ಎಡಿಟ್ ಮಾಡಿ ನಮ್ಮ ದೇಶದ ಮಹಾನ್ ನಾಯಕರನ್ನು, ಅದರಲ್ಲು ಮಹಾತ್ಮ ಗಾಂಧಿಯಂತವರನ್ನು ಅವಮಾನಿಸುವುದು ಅಕ್ಷಮ್ಯ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ‘ಪ್ರಾಜೆಕ್ಟ್ ಚೀತಾ’ ಕಾರ್ಯಕ್ರಮಕ್ಕಾಗಿ ಮರಗಳನ್ನು ನೆಲಸಮ ಮಾಡಿದ್ದು ನಿಜವೇ ?

