ಫ್ಯಾಕ್ಟ್‌ಚೆಕ್: ಮಲೇಷ್ಯಾ ವಿವಿಯ ಚಿತ್ರವನ್ನು ಬಿಲಾಸ್‌ಪುರದ AIIMS ಎಂದು ತಪ್ಪಾಗಿ ಹಂಚಿಕೆ

ಬಿಲಾಸ್‌ಪುರದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ (AIIMS) ಕಟ್ಟಡದ ಚಿತ್ರ ಎಂದು ಪೋಸ್ಟ್ ಒಂದನ್ನು ಪ್ರಸಾರ ಮಾಡಲಾಗುತ್ತಿದೆ. ಬಿಲಾಸ್‌ಪುರದ AIIMS ನ ಪೋಟೋ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋ ನಿಜವಾಗಿಯೂ ಬಿಲಾಸ್‌ಪುರದಲ್ಲಿ ಉದ್ಗಾಟನೆಗೊಂಡ AIIMS ನ ಚಿತ್ರವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಟೋದ ಕಟ್ಟಡದ ಮುಂದೆ ‘XMUM’ ಎಂಬ ಸಂಕ್ಷಿಪ್ತ ರೂಪವನ್ನು ಕೆತ್ತಲಾಗಿದೆ. ಇದರಿಂದ ಕ್ಲೂ ತೆಗೆದುಕೊಂಡು, ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ  XMUM ಎಂಬುದು, ಮಲೇಷ್ಯಾದ Xiamen ಯೂನಿವರ್ಸಿಟಿಯ ಹೆಸರಾಗಿದೆ ಎಂದು ಕಂಡುಬಂದಿದೆ. ಇದು 2016 ರಲ್ಲಿ ಚೈನೀಸ್ ಪಬ್ಲಿಕ್ ಯೂನಿವರ್ಸಿಟಿಯ ಅಡಿಯಲ್ಲಿ ಬರುವ ಮಲೇಷ್ಯಾದ ಖಾಸಗಿ ವಿಶ್ವವಿದ್ಯಾನಿಲಯವಾಗಿದೆ. ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಕರಪತ್ರಗಳಲ್ಲಿಯೂ ಅದೇ ಚಿತ್ರವನ್ನು ಹೊಂದಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಈ ವಿಶ್ವವಿದ್ಯಾಲಯದ ಉಪಗ್ರಹ ಚಿತ್ರಗಳನ್ನು ಇಲ್ಲಿ ನೋಡಬಹುದು.

ಈ ವಿಶ್ವವಿದ್ಯಾಲಯದ ಉಪಗ್ರಹ ಚಿತ್ರಗಳನ್ನು ಇಲ್ಲಿ ನೋಡಬಹುದು.

ಇತ್ತೀಚೆಗೆ ಉದ್ಘಾಟನೆಗೊಂಡ AIIMS ಬಿಲಾಸ್‌ಪುರದ ಚಿತ್ರಗಳನ್ನು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಮಲೇಷಿಯಾದ ವಿಶ್ವವಿದ್ಯಾಲಯದ ಚಿತ್ರವನ್ನು ಬಿಲಾಸ್‌ಪುರದ AIIMS ಪೋಟೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ‘ಲಯನ್ ಮ್ಯಾನ್’ ಶಿಲ್ಪವನ್ನು, ನರಸಿಂಹ ಶಿಲ್ಪ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights