ಫ್ಯಾಕ್ಟ್ಚೆಕ್: ದಸರಾ ಆಚರಣೆಯಲ್ಲಿ ಕೇಜ್ರಿವಾಲ್ ಬಿಲ್ಲನ್ನು ಉಲ್ಟಾ ಹಿಡಿದು ಪೋಸ್ ನೀಡಿದ್ದು ನಿಜವೇ?
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಚಿತ್ರದಲ್ಲಿ, ಅರವಿಂದ್ ಕೇಜ್ರಿವಾಲ್ ಬಿಲ್ಲನ್ನು ಉಲ್ಟಾ ಹಿಡಿದುಕೊಂಡು ಬಾಣವನ್ನು ತನ್ನತ್ತ ಗುರಿಯಾಗಿಸಿರುವುದನ್ನು ತೋರಿಸುತ್ತಿರುವುದನ್ನು ಕಾಣಬಹುದು. ಈ ಪೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಬಳಕೆದಾರರು ಅರವಿಂದ್ ಕೇಜ್ರಿವಾಲ್ ಅವರನ್ನು ಗೇಲಿ ಮಾಡುತ್ತಿದ್ದಾರೆ.
https://twitter.com/yogivishalnand6/status/1579760804253298689?s=20&t=gaTh_IYznek_FhI0dYoLyQ
“ತಲೆಕೆಳಗಾದ ಬಾಣ, ಅರವಿಂದ್ ಕೇಜ್ರಿವಾಲ್ಗೆ ಹೇಳಿ ಮಾಡಿಸಿದಂತಿದೆ” ಎಂಬ ವ್ಯಂಗ್ಯ ಹೇಳಿಕೆಯೊಂದಿಗೆ ‘ಯೋಗಿ ವಿಶಾಲಾನಂದ್ ಶ್ರೀವಾಸ್ತವ’ ಎಂಬ ಬಳಕೆದಾರರು ಈ ಪೋಟೋವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ವೈರಲ್ ವೀಡಿಯೊದ ಪೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ. business-standard.com ಪ್ರಸಾರ ಮಾಡಿದ ವರದಿಯೊಂದು ಲಭ್ಯವಾಗಿದೆ. ಉಪರಾಷ್ಟ್ರಪತಿ ಜಗದೀಪ್ ಧಂಖರ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದಸರಾ ಉತ್ಸವದಲ್ಲಿ ಭಾಗವಹಿಸಿದ್ದರು ಎಂದು ವರದಿ ಹೇಳಿದೆ.
ಈ ಚಿತ್ರದಲ್ಲಿ, ಕೇಜ್ರಿವಾಲ್ ಬಿಲ್ಲನ್ನು ನೇರವಾಗಿ ಹಿಡಿದಿರುವುದನ್ನು ಕಾಣಬಹುದು ಮತ್ತು ಬಾಣದ ಗುರಿಯು ನಿಖರವಾಗಿ ಮುಂಭಾಗದಲ್ಲಿದೆ. ಕೆಳಗೆ ನೀಡಿರುವ ಕೊಲಾಜ್ನಲ್ಲಿ ನೀವು ಎರಡೂ ಚಿತ್ರಗಳನ್ನು ನೋಡಬಹುದು.
ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯ ಆಧಾರದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ವೈರಲ್ ಚಿತ್ರವನ್ನು ಎಡಿಟ್ ಮಾಡುವ ಮೂಲಕ ಬಿಲ್ಲು ಮತ್ತು ಬಾಣವನ್ನು ಮೇಲಕ್ಕೆತ್ತಿ ಉಲ್ಟಾ ತಿರುಗಿಸಿರುವಂತೆ ತೋರಿಸಲಾಗಿದೆ ಮತ್ತು ಬಾಣವನ್ನು ಕೇಜ್ರಿವಾಲ್ ತನ್ನ ಕಡೆಗೆ ಗುರಿ ಇಟ್ಟುಕೊಂಡಂತೆ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಅರವಿಂದ್ ಕೇಜ್ರಿವಾಲ್ ದೆಹಲಿಯ ದಸರಾ ಆಚರಣೆಯಲ್ಲಿ ಬಿಲ್ಲು ಮತ್ತು ಬಾಣವನ್ನು ಉಲ್ಟಾ ತಿರುಗಿಸಿ ತನ್ನ ಕಡೆಗೆ ಗುರಿ ಇಟ್ಟುಕೊಂಡಂತೆ ಮೂಲ ಪೋಟೊವನ್ನು ಎಡಿಟ್ ಮಾಡಲಾಗಿದೆ. ಮೂಲ ಚಿತ್ರದಲ್ಲಿ ಬಿಲ್ಲು ಮತ್ತು ಬಾಣವನ್ನು ಸರಿಯಾಗಿ ಹಿಡಿದಿರುವುದು ಮಾಧ್ಯಮ ವರದಿಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್: ನಾನು ಪತ್ರಕರ್ತಳಲ್ಲ, ನಾನು BJPಯ ಅನಧಿಕೃತ ವಕ್ತಾರೆ ಎಂಬ ನಾಮಫಲಕದ ವಾಸ್ತವವೇನು?

