ಫ್ಯಾಕ್ಟ್‌ಚೆಕ್: ಬ್ರೆಜಿಲ್‌ನಲ್ಲಿ ನಡೆದ ಯುವತಿ ಹತ್ಯೆಯನ್ನು ‘ಲವ್‌ ಜಿಹಾದ್‌’ ಎಂದು ತಪ್ಪಾಗಿ ಹಂಚಿಕೆ

ಮಹಿಳೆಯೊಬ್ಬಳ ಬಾಯಿಯನ್ನು ಬಟ್ಟೆಯಲ್ಲಿ ಕಟ್ಟಿ, ಕೈ ಕಾಲುಗಳನ್ನು ಕಟ್ಟಿ ಹಾಕಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹಿಂದೂ ಯುವತಿಯೊಬ್ಬಳು ಲವ್ ಜಿಹಾದ್‌ಗೆ ಬಲಿಯಾಗಿದ್ದಾಳೆ ಎಂಬ ಹೇಳಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.

Image

“ಹಿಂದೂ ಹುಡುಗಿಯರು ಲವ್ ಜಿಹಾದ್ ಬಲೆಗೆ ಬಿದ್ದ ನಂತರ ಅವರ ಸ್ಥಿತಿಯನ್ನು ನೋಡಿ. ಶಾಂತಿಪ್ರಿಯರು ತಮ್ಮ ಆಸೆ ತೀರಿಸಿಕೊಂಡ ನಂತರ ಹಿಂದೂ ಹುಡುಗಿಯರನ್ನುಏನು ಮಾಡುತ್ತಾರೆ ಎಂದು ತಿಳಿದುಕೊಳ್ಳಿ. ಶಾಂತಿಪ್ರಿಯ ಹುಡುಗರಿಗಾಗಿ ತಮ್ಮ ಧರ್ಮ ಮತ್ತು ಪೋಷಕರನ್ನು ಬಿಡುವ ಹುಡುಗಿಯರೇ ಎಚ್ಚರ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ವಿಡಿಯೋದ ದೃಶ್ಯಾವಳಿಗಳು ಹೆಚ್ಚು ಭಯಾನಕವಾಗಿದ್ದು ವಿಡಿಯೊ ಕಂಟೆಂಟ್‌ಅನ್ನು ತಡೆಹಿಡಿಯಲಾಗಿದೆ. ಆದರೆ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ವಿಡಿಯೋವನ್ನು ಲವ್ ಜಿಹಾದ್ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ‘ಲವ್ ಜಿಹಾದ್‌’ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗಿರುವ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ವಾಸ್ತವವಾಗಿ ಇದು ಭಾರತದಲ್ಲಿ ನಡೆದಿರುವ ಘಟನೆಯೇ ಅಲ್ಲ ಎಂದು ಆಲ್ಟ್‌ನ್ಯೂಸ್ ಮಾಡಿರುವ ಫ್ಯಾಕ್ಟ್‌ಚೆಕ್ ವರದಿ ಲಭ್ಯವಾಗಿದೆ.

ಆಲ್ಟ್‌ನ್ಯೂಸ್ ಮಾಡಿರುವ ವರದಿಯ ಪ್ರಕಾರ ಗೋರ್ ಬ್ರೆಜಿಲ್‌ ವೆಬ್‌ಸೈಟ್‌ನಲ್ಲಿ ವಿಡಿಯೊ ಲಭ್ಯವಾಗಿದೆ. ಆದರೆ ವೀಡಿಯೊದ ಕುರಿತು ಯಾವುದೇ ವಿವರಗಳು ಲಭ್ಯವಾಗಿಲ್ಲ. ಆದರೆ ಆಲ್ಟ್ ನ್ಯೂಸ್ ಪೋರ್ಚುಗೀಸ್ ಭಾಷೆಯಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ ‘ಮಲ್ಹೆರ್ ಮೊರ್ಟಾ ಕಾಮ್ ಮಚಾಡೊ’ “ಕೊಡಲಿಯಿಂದ ಕೊಲ್ಲಲ್ಪಟ್ಟ ಮಹಿಳೆ’ ಎಂಬ ಅನುವಾದದೊಂದಿಗೆ ವಿಡಿಯೊದ ವಿವರಣೆಗೆ ಹೊಂದಿಕೆಯಾಗುವ ಫಲಿತಾಂಶವನ್ನು Google ನಿಂದ ಪಡೆಯಲು ಸಾಧ್ಯವಾಗಿಲ್ಲ.

ನಂತರ Facebook ನಲ್ಲಿ ಸರ್ಚ್ ಮಾಡಿದಾಗ, ಬ್ರೆಜಿಲ್‌ನಲ್ಲಿ ಸ್ತ್ರೀಹತ್ಯೆಯ ಪ್ರಕರಣಗಳನ್ನು ಪ್ರಕಟಿಸುವ ‘Feminicídio – Parem de nos matar’ ಪುಟದಲ್ಲಿ ಪೋಸ್ಟ್‌ವೊಂದು ಲಭ್ಯವಾಗಿದೆ. ಫೋರ್ಟಲೆಜಾದ ಗ್ರಂಜಾ ಪೋರ್ಚುಗಲ್‌ನಲ್ಲಿ ಥಾಲಿಯಾ ಟೊರೆಸ್ ಡಿ ಸೋಜಾ (23) ಎಂಬ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಪೋಸ್ಟ್ ಸೂಚಿಸುತ್ತದೆ.

ಥಾಲಿಯಾ ಟೊರೆಸ್ ಡಿ ಸೋಜಾ ಎಂದು ಮಹಿಳೆಯ ಹೆಸರನ್ನು ಬಳಸಿ  ಕೀವರ್ಡ್ ಸರ್ಚ್ ಮಾಡಿದಾಗ ಪೋರ್ಚುಗೀಸ್‌ನ ಇತರ ಹಲವು ಫೇಸ್‌ಬುಕ್ ಪೋಸ್ಟ್‌ ಲಭ್ಯವಾಗಿವೆ. ‘ಅರಾಕಾಟಿ ಪೋಲಿಸಿಯಾ 24hs’ ವೈರಲ್ ವಿಡಿಯೊದಂತೆ ಅದೇ ಬಟ್ಟೆಯಲ್ಲಿ ಮಹಿಳೆಯ ಚಿತ್ರವನ್ನು ಅಪ್‌ಲೋಡ್ ಮಾಡಿದೆ. ಈ ಪೋಸ್ಟ್ ಆಗಸ್ಟ್ 30 ರಿಂದ ಬಂದಿದೆ.

ಈ ಹಿಂದೆಯೂ ಇದೇ ವಿಡಿಯೋವನ್ನು ಭಾರತದದ್ದು ಎಂದು ಹಂಚಿಕೊಳ್ಳಲಾಗಿತ್ತು, ಹಲವು ವರ್ಷಗಳಿಂದ ಇದೇ ವಿಡಿಯೋವನ್ನು ಬೇರೆ ಬೇರೆ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತದೆ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ. ಈ ಹಿಂದೆ ಭಾರತ ಎಂದು ವೈರಲ್ ಆಗಿದ್ದ ಬ್ರೆಜಿಲ್‌ನ  ವಿಡಿಯೋ ಇದೀಗ ‘ಲವ್ ಜಿಹಾದ್’ ಆ್ಯಂಗಲ್‌ನೊಂದಿಗೆ ಹಿಂದೂ ಮಹಿಳೆಯನ್ನು ಕೊಡಲಿಯಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ವಿಡಿಯೋ ಎಂದು ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬ್ರೆಜಿಲ್‌ನ ಥಾಲಿಯಾ ಟೊರೆಸ್ ಡಿ ಸೋಜಾ ಎಂಬ ಮಹಿಳೆಯನ್ನು ಕೊಡಲಿ ಮತ್ತು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಹಳೆಯ ವಿಡಿಯೋವನ್ನು ಭಾರತದಲ್ಲಿ ಹಿಂದೂ ಯುವತಿಯನ್ನು ಲವ್ ಜಿಹಾದ್ ಹೆಸರಿನಲ್ಲಿ ಹತ್ಯೆ ಮಾಡಲಾಗಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಬಾಬಾ ವೇಷ ಧರಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights