ಫ್ಯಾಕ್ಟ್ಚೆಕ್: ಚೀನಾ ಗಡಿ ರೇಖೆಯಲ್ಲಿ ರಕ್ಷಣಾ ಸಚಿವರು ನಿಂಬೆಹಣ್ಣು ಮೆಣಸಿನಕಾಯಿ ದಾರ ಕಟ್ಟಿದ್ದು ನಿಜವೇ?
ಮನೆಯ ಹೊರಗಿನ ಬಾಗಿಲ ಮೇಲೆ, ಅಂಗಡಿಯ ಹೊರಗೆ, ಕಾರು, ಬಸ್ಸು, ಲಾರಿಗಳಲ್ಲಿ ನಿಂಬೆಹಣ್ಣು ಜೊತೆಗೊಂದಿಷ್ಟು ಮೆಣಸಿನಕಾಯಿ ನೇತು ಹಾಕಿರುವ ದೃಶ್ಯ ಸಾಮಾನ್ಯ. ಆದರೆ ನಮ್ಮ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಚೀನಾ ಗಡಿಯಲ್ಲಿ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ಕಟ್ಟುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಚೀನಾ ಗಡಿಯಲ್ಲಿ ರಕ್ಷಣಾ ಸಚಿವರು ರಾಡಾರ್ ಅಳವಡಿಸುತ್ತಿದ್ದಾರೆ ಎಂಬ ವ್ಯಂಗ್ಯವಾದ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಫೋಟೊ ಪ್ರಸಾರವಾಗುತ್ತಿದೆ.
https://twitter.com/rajlingam78/status/1610247855595479040?s=20&t=j48kiviadhi7x3sDWAxmfQ
ನಿಂಬೆಹಣ್ಣು ಮತ್ತು ಹಸಿಮೆಣಸಿನಕಾಯಿಯನ್ನು ದಾರದಲ್ಲಿ ಕಟ್ಟಿ ಮನೆ ಮತ್ತು ವಾಹನಗಳಿಗೆ ಕಟ್ಟುವ ಪ್ರತೀತಿ ಹಿಂದೂ ಧರ್ಮದ ಆಚರಣೆಯ ಭಾಗವಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂತಹ ನಿಂಬೆಹಣ್ಣಿನ ಮಾಲೆಯನ್ನು ಹಿಡಿದಿರುವ ಚಿತ್ರ ಸಖತ್ ವೈರಲ್ ಆಗಿದೆ. ರಾಜನಾಥ್ ಸಿಂಗ್ ಸ್ಟೂಲ್ ಮೇಲೆ ನಿಂಬೆಹಣ್ಣು ಕಟ್ಟಲು ಪ್ರಯತ್ನಿಸಿತಿದ್ದು ಮತ್ತೊಬ್ಬ ವ್ಯಕ್ತಿ ಅವರಿಗೆ ಸಹಾಯ ಮಾಡುತ್ತಿದ್ದಾನೆ. ಚೀನಾ ಗಡಿಗೂ ನಿಂಬೆಹಣ್ಣು ಮೆಣಸಿನಕಾಯಿ ದಾರಕ್ಕೂ ಎಲ್ಲಿಂದ ಎಲ್ಲಿಗೆ ಸಂಬಂಧ.
ಹಾಗಿದ್ದರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ರೀತಿ ನಿಂಬೆಹಣ್ಣು ಕಟ್ಟಿರುವುದು ನಿಜವೇ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 9 ಅಕ್ಟೋಬರ್ 2019 ರಂದು ನ್ಯೂಸ್ 18ರಲ್ಲಿ ಪ್ರಕಟಿಸಿದ ಸುದ್ದಿಯಲ್ಲಿ ಇದೇ ರೀತಿಯ ಚಿತ್ರವನ್ನು ಸೇರಿಸಲಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2019 ಅಕ್ಟೋಬರ್ 08 ರಂದು ಭಾರತೀಯ ಸಂಪ್ರದಾಯದಂತೆ ಆಯುಧಗಳನ್ನು ಪೂಜಿಸುವ ವಿಧಿ ವಿಧಾನವಾದ ‘ಪೂಜೆ’ ನೆರವೇರಿಸಿದ ನಂತರ ಫ್ರಾನ್ಸ್ನ ಮೊದಲ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನವನ್ನು ಲೋಕಾರ್ಪಣೆ ಮಾಡಿದ್ದಾರೆ.ಸಾವಿರಾರು ವರ್ಷಗಳಿಂದ ಶಾಸ್ತ್ರ ಪೂಜೆ ಭಾರತೀಯ ಸಂಪ್ರದಾಯದ ಭಾಗವಾಗಿದೆ. ರಜಪೂತ ಯೋಧ-ರಾಜ ಮಹಾರಾಣಾ ಪ್ರತಾಪ್ ತನ್ನ ಶತ್ರುಗಳೊಂದಿಗೆ ಹೋರಾಡುವ ಮೊದಲು ಶಾಸ್ತ್ರ ಪೂಜೆಯನ್ನು ಮಾಡುತ್ತಿದ್ದರು. ವಿಜಯದಶಮಿ ದಿನದಂದು, ಆಚರಣೆಗಳನ್ನು ಅನುಸರಿಸಿ, ಜನರು ಇಂದಿಗೂ ಶಾಸ್ತ್ರಪೂಜೆಯನ್ನು ಮಾಡುತ್ತಾರೆ. ಈ ಫೋಟೋದಲ್ಲಿ ರಾಜನಾಥ್ ಸಿಂಗ್ ರಫೇಲ್ ಜೆಟ್ ವಿಮಾನದ ಉದ್ಗಾಟನೆಗೂ ಮುನ್ನ ‘ಪೂಜೆ’ ಮಾಡುತ್ತಿರುವುದು ಕಂಡುಬಂದಿದೆ. ಎಂದು ನ್ಯೂಸ್ 18 ವರದಿ ಮಾಡಿದೆ.
'Sarva Dharma Puja' conducted at the Rafale induction ceremony, at IAF airbase in Ambala
Defence Minister Rajnath Singh, Minister of the Armed Forces of France Florence Parly and Air Force Chief Air Chief Marshal RKS Bhadauria present. pic.twitter.com/Bu2A54z8HD
— ANI (@ANI) September 10, 2020
ಅಂಬಾಲಾದ ವಾಯುಪಡೆ ನೆಲೆಯಲ್ಲಿ ರಫೇಲ್ ಯುದ್ಧ ವಿಮಾನದ ಉದ್ಘಾಟನಾ ಸಮಾರಂಭದಲ್ಲಿ ‘ಸರ್ವ ಧರ್ಮ ಪೂಜೆ’ ನಡೆಸಲಾಗಿದೆ ಎಂದು ANI ವರದಿ ಮಾಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರೆಂಚ್ ಸಶಸ್ತ್ರ ಪಡೆಗಳ ಸಚಿವ ಫ್ಲಾರೆನ್ಸ್ ಪಾರ್ಲಿ, ವಾಯುಪಡೆ ಮುಖ್ಯಸ್ಥ ಮತ್ತು ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಬದೌರಿಯಾ ಉಪಸ್ಥಿತರಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಿದೆ.
For New India, tradition and power come hand-in-hand.
Defence Minister Shri @rajnathsingh performs Shastra Puja on the Rafale officially handed over to India in Merignac, France. pic.twitter.com/O0yVGXZSRu
— BJP (@BJP4India) October 8, 2019
ಬಿಜೆಪಿಯ ಅಧಿಕೃತ ಟ್ವಿಟರ್ ಪುಟದಲ್ಲಿ ಮೂಲ ಫೋಟೊವನ್ನು ಹಂಚಿಕೊಳ್ಳಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧಿಕೃತ ಪುಟದಲ್ಲಿ ಹಂಚಿಕೊಂಡಿರುವ ರಫೇಲ್ ಯುದ್ಧ ವಿಮಾನಗಳ ಶಾಸ್ತ್ರಪೂಜೆಯನ್ನು ಕೆಳಗೆ ನೋಡಬಹುದು. ಈ ಫೋಟೋವನ್ನು ಎಡಿಟ್ ಮಾಡುವ ಮೂಲಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚೀನಾ ಗಡಿಯಲ್ಲಿ ನಿಂಬೆಹಣ್ಣು, ಮೆಣಸಿನಕಾಯಿ ದಾರ ಕಟ್ಟುತಿದ್ದಾರೆ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2019 ಅಕ್ಟೋಬರ್ 08 ರಂದು ಭಾರತೀಯ ಸಂಪ್ರದಾಯದಂತೆ ಆಯುಧಗಳನ್ನು ಪೂಜಿಸುವ ವಿಧಿ ವಿಧಾನವಾದ ‘ಪೂಜೆ’ ನೆರವೇರಿಸಿದ ನಂತರ ಫ್ರಾನ್ಸ್ನ ಮೊದಲ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನವನ್ನು ಲೋಕಾರ್ಪಣೆ ಮಾಡಿದ ಫೋಟೋವನ್ನು ಎಡಿಟ್ ಮಾಡಿ ಚೀನಾ ಗಡಿಯಲ್ಲಿ ನಿಂಬೆಹಣ್ಣು, ಮೆಣಸಿನಕಾಯಿ ದಾರ ಕಟ್ಟುತಿರುವಂತೆ ಮಾರ್ಫ್ ಮಾಡಿ ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಭಾರತದಲ್ಲಿ ಉಪಹಗ್ರಹ ಉಡಾವಣೆ ಮತ್ತು ನೌಕಾ ಹಡಗು ಉಡಾವಣೆಯಾದಾಗಲೆಲ್ಲ ಕುಂಕುಮ ಹಚ್ಚಿ, ತೆಂಗಿನ ಕಾಯಿ ಒಡೆದು ಗಂಧದ ಕಡ್ಡಿ ಬೆಳಗಿ ಪೂಜೆ ಸಲ್ಲಿಸುವ ಪರಿಪಾಠವನ್ನು ರೂಡಿಸಿಕೊಂಡು ಬರಲಾಗಿದೆ. ವಿಜ್ಞಾನದ ಪ್ರಗತಿಯ ಹೊರತಾಗಿಯೂ, ಇಂತಹ ಆಚರಣೆಗಳ ಮುಂದುವರಿಕೆಯ ಬಗ್ಗೆ ಕೆಲವು ವಲಯಗಳ ವಿರೋದವೂ ಇದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಹಿಂದೂ ದೇವತೆ ಸರಸ್ವತಿ ಭಾವಚಿತ್ರವನ್ನು ಒದ್ದ ವ್ಯಕ್ತಿ ಮುಸಲ್ಮಾನನಲ್ಲ? ಹಾಗಿದ್ದರೆ ಮತ್ಯಾರು

