ಫ್ಯಾಕ್ಟ್‌ಚೆಕ್: ಕಬಿನಿಯ ಹಿನ್ನೀರಿನಲ್ಲಿ ಈ ಘಟನೆ ನಡೆದಿದೆಯೇ?

ಮೈಸೂರು ಜಿಲ್ಲೆಯ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದರಲ್ಲಿ ಜಿಂಕೆಯನ್ನು ಮೊಸಳೆಯೊಂದು ಅಟ್ಟಿಸಿಕೊಂಡು ಬರುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ದೃಶ್ಯಾವಳಿಗಳು ಮೈಸೂರು ಜಿಲ್ಲೆಯ ಹೆಚ್‌.ಡಿ. ಕೋಟೆಯ ಕಬಿನಿಯಲ್ಲಿ ನಡೆದಿದೆಯೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್  ಆಗಿರುವ ದೃಶ್ಯಗಳನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋದಲ್ಲಿ ಬಳಕೆ ಮಾಡಲಾದ ಲೋಗೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ‘latestsightings.com’ ಅದೇ ವೀಡಿಯೊ ಲಭ್ಯವಾಯಿತು. ಅದರ ವಿವರಣೆಯ ಪ್ರಕಾರ,  ಈ ವೀಡಿಯೊವನ್ನು ‘ಬಕ್ ಸ್ವಿಮ್ಸ್ ಫಾರ್ ಇಟ್ಸ್ ಲೈಫ್ ಫ್ರಂ ಕ್ರೊಕೊಡೈಲ್’ ಎಂದು ಹೆಸರಿಸಲಾಗಿದ್ದು,  ಈ ವೀಡಿಯೊವನ್ನು ಬೋಟ್ಸ್ವಾನ, ಚೋಬ್ ನದಿಯಲ್ಲಿ ಚಿತ್ರೀಕರಿಸಲಾಗಿದೆ. ಮತ್ತು ಇದನ್ನು 31 ಜನವರಿ 2023 ರಂದು ಅಪ್‌ಲೋಡ್ ಮಾಡಲಾಗಿದೆ.

‘latestsightings.com’ ವೆಬ್‌ಸೈಟ್‌ನಲ್ಲಿ ’24 ವರ್ಷದ ಪಶುವೈದ್ಯಕೀಯ ನರ್ಸ್ ಆಗಿರುವ ಕೈಟ್ಲಿನ್ ಇರ್‌ವೇಕರ್ ಮತ್ತು ಅವರ ಕುಟುಂಬವು ದೋಣಿ ವಿಹಾರದಲ್ಲಿದ್ದಾಗ ಈ ಅದ್ಭುತ ದೃಶ್ಯವನ್ನು ಚಿತ್ರೀಕರಿಸಿದೆ.’ ಅವರು ಈ ಕ್ಲಿಪ್ ಅನ್ನು ಇನ್‌ಸ್ಟಾಗ್ರಾಮ್ ಮೂಲಕ ಚಿತ್ರೀಕರಿಸಿದ ಅನುಭವದ ಬಗ್ಗೆ ಪೋಸ್ಟ್ ಬರೆದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವೀಡಿಯೊವನ್ನು ಬೋಟ್ಸ್ವಾನಾದ ಚೋಬ್ ನದಿಯಲ್ಲಿ ಚಿತ್ರೀಕರಿಸಲಾಗಿದೆ. ದೋಣಿ ವಿಹಾರದಲ್ಲಿದ್ದಾಗ ಚೋಬ್ ನದಿಯಲ್ಲಿ ಮೊಸಳೆಯೊಂದು ಜಿಂಕೆಯನ್ನು ಬೆನ್ನಟ್ಟುವ ಈ ದೃಶ್ಯವನ್ನು ಕುಟುಂಬವೊಂದು ಚಿತ್ರೀಕರಿಸಿದೆ. ಬೋಟ್ಸ್ವಾನಾದಲ್ಲಿ ಮೊಸಳೆಯು ಜಿಂಕೆಯನ್ನು ಬೆನ್ನಟ್ಟುವ ದೃಶ್ಯಗಳನ್ನು ಕರ್ನಾಟಕದ ಕಬಿನಿ ಹಿನ್ನೀರಿನಲ್ಲಿ ಚಿತ್ರೀಕರಿಸಿದ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಸಲ್ಮಾನ್ ರಶ್ದಿ ಇಸ್ಲಾಂ ವಿರೋಧಿ ಹೇಳಿಕೆ ನೀಡಿದ್ದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights