ಫ್ಯಾಕ್ಟ್‌ಚೆಕ್: ಜಗ್ಗಿ ವಾಸುದೇವ್ ಮತ್ತವರ ಮಗಳ ಫೋಟೊ ತಪ್ಪಾಗಿ ಹಂಚಿಕೆ
ಸದ್ಗುರು ಎಂದೇ ಖ್ಯಾತರಾಗಿರುವ ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಅವರ ಮಡಿಲಲ್ಲಿ ಯುವತಿಯೊಬ್ಬಳ್ಳು ಕುಳಿತಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
https://twitter.com/YasmeenKhan_786/status/1622055456461180928
ಸಾಮಾಜಿಕ ಮಾಧ್ಯಮಗಳಲ್ಲಿ ಜಗ್ಗಿ ವಾಸುದೇವ್ ಅವರ ಚಿತ್ರ ವೈರಲ್ ಆಗಿದ್ದು ಯುವತಿಯೊಬ್ಬಳನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡ ಸುಸಂಸ್ಕೃತ ಬಾಬಾ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಹಾಗಿದ್ದರೆ ಜಗ್ಗಿ ವಾಸುದೇವ್ ಅವರು ತಮ್ಮ ಮಡಿಲಲ್ಲಿ ಕೂರಿಸಿಕೊಂಡಿರುವ ಯುವತಿ ಮತ್ತು ಬಾಬಾ ಅವರ ನಡುವೆ ಇರುವ ಸಂಬಂಧ ಏನು? ಈ ಯುವತಿ ಯಾರು ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಜಗ್ಗಿ ವಾಸುದೇವ್ ಮತ್ತು ಯುವತಿಯ ಫೋಟೊವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಜೂನ್ 17, 2018 ರಂದು ಅಪ್‌ಲೋಡ್ ಮಾಡಲಾದ ಅದೇ ಚಿತ್ರವನ್ನು ಹೊಂದಿರುವ ಸದ್ಗುರುಗಳ ಅಧಿಕೃತ ಟ್ವಿಟರ್ ಖಾತೆಯ ಪೋಸ್ಟ್‌ವೊಂದು ಲಭ್ಯವಾಗಿದೆ.
A fortune to spend an hour with my dear father and they tell me it is #FathersDay . -Sg pic.twitter.com/9XJFWGtcsp
— Sadhguru (@SadhguruJV) June 17, 2018
ತಂದೆಯ ದಿನದ (Father’s Day) ಸಂದರ್ಭದಲ್ಲಿ ಸದ್ಗುರುಗಳು ಈ ಚಿತ್ರವನ್ನು ಟ್ವೀಟ್ ಮಾಡಿರುವುದನ್ನು ನಾವು ಗಮನಿಸಿದ್ದೇವೆ. ಫೋಟೋದೊಂದಿಗೆ ಇರುವ ಶೀರ್ಷಿಕೆಯಂತೆ, “ನನ್ನ ಪ್ರೀತಿಯ ತಂದೆಯೊಂದಿಗೆ ಒಂದು ಗಂಟೆ ಕಳೆಯುವ ಅದೃಷ್ಟ” ಎಂದು ಬರೆದುಕೊಂಡಿದ್ದಾರೆ.
ವೈರಲ್ ಫೋಟೊ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಮತ್ತು ಜಗ್ಗಿ ವಾಸುದೇವ್ ಅವರ ಮಗಳ ಕುರಿತು ಸರ್ಚ್ ಮಾಡಿದಾಗ, ಡೆಕ್ಕನ್ ಹೆರಾಲ್ಡ್ ನ್ಯೂಸ್ ವರದಿಯಲ್ಲಿ ಆಕೆಯ ಹೆಸರನ್ನು ರಾಧೆ ಜಗ್ಗಿ ಎಂದು ನಮೂದಿಸಲಾಗಿದೆ. ರಾಧೆ ಜಗ್ಗಿ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಪೋಸ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ, ಅಲ್ಲಿ ಅವರು ತಮ್ಮ ತಂದೆ ಜಗ್ಗಿ ವಾಸುದೇವ್ ಅವರೊಂದಿಗೆ ಸಂಭಾಷಣೆ ನಡೆಸುವುದನ್ನು ಕಾಣಬಹುದು.

“ವಾಸುದೇವ ಅವರು ತಮ್ಮ ಪ್ರಯಾಣದ ಆಹಾರ ಕ್ರಮವನ್ನು ತಮ್ಮ ಮಗಳು ರಾಧೆಯೊಂದಿಗೆ ಚರ್ಚಿಸುವ” ವಿಡಿಯೊ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಹಂಚಿಕೊಳ್ಳಲಾದ ಜಗ್ಗಿ ವಾಸುದೇವ್ ಮತ್ತು ಯುವತಿ ಫೋಟೊ ವಾಸ್ತವವಾಗಿ ವಾಸುದೇವ್ ಅವರ ಮಗಳು ರಾಧೆ ಜಗ್ಗಿ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅತ್ಯಾಚಾರಕ್ಕೆ ಯತ್ನಿಸಿ ತನ್ನ ತುಟಿಯನ್ನೆ ಕಳೆದುಕೊಂಡ ಆರೋಪಿ ಮುಸ್ಲಿಮನಲ್ಲ, ಬದಲಿಗೆ ಹಿಂದೂ

