ಫ್ಯಾಕ್ಟ್‌ಚೆಕ್: ಹಿಂದೂ ಯುವಕ ಮುಸ್ಲಿಂ ಯುವತಿಯನ್ನು ಮದುವೆಯಾದರೆ RSS 5ಲಕ್ಷ ಬಹುಮಾನ ನೀಡುತದೆಯೇ?

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಅಧಿಕೃತ ಲೆಟರ್‌ಹೆಡ್‌ನಲ್ಲಿ ಸ್ಪಷ್ಟವಾಗಿ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲೆಟರ್‌ಹೆಡ್‌ನ ಎರಡು ಪುಟಗಳ ಪತ್ರದಲ್ಲಿ ವಿವರವಾದ ಯೋಜನೆಯನ್ನು ಹಂಚಿಕೊಳ್ಳಲಾಗುತ್ತಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ರಹಸ್ಯ ಹೇಳಿಕೆ ಎಂಬ ಒಕ್ಕಣೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಪ್ರತಿ ವರ್ಷಕ್ಕೆ ಒಂದು ಮಿಲಿಯನ್ ಮುಸ್ಲಿಂ ಹೆಣ್ಣುಮಕ್ಕಳು ಹಿಂದೂ ಧರ್ಮಕ್ಕೆ ಮರಳುವ ಗುರಿಯನ್ನು ಹೊಂದಿದ್ದು,ಇದಕ್ಕಾಗಿ ನಿಮ್ಮೆಲ್ಲರಿಗೂ ಹದಿನೈದು ದಿನಗಳ ತರಬೇತಿಯನ್ನೂ ನೀಡಲಾಗುವುದು ಎಂದು ಹೇಳಲಾಗಿದೆ.

https://twitter.com/Journaltics/status/1644632006842806272?ref_src=twsrc%5Etfw%7Ctwcamp%5Etweetembed%7Ctwterm%5E1644632006842806272%7Ctwgr%5Ed888fc0d1f2196172a24ee100be1c381950eb2e4%7Ctwcon%5Es1_&ref_url=https%3A%2F%2Fdfrac.org%2Fen%2F2023%2F04%2F11%2Fwill-rss-pay-5-lakhs-if-hindu-boys-marry-muslim-girls-read-fact-check%2F

ಮುಸ್ಲಿಂ ಯುವತಿಯರನ್ನು ಹೇಗೆ ‘ಟ್ರ್ಯಾಪ್’ ಮಾಡುವುದು ಎಂಬುದರ ಕುರಿತು 12 ನಿರ್ದಿಷ್ಟ ಪಾಠಗಳನ್ನು ಒಳಗೊಂಡಿದೆ ಮತ್ತು ಮುಸ್ಲಿಂ ಮಹಿಳೆಯರನ್ನು ಹೇಗೆ ಪರಿವರ್ತಿಸುವುದು ಮತ್ತು ಅವರನ್ನು ‘ಸನಾತನ ಧರ್ಮ’ದ ವ್ಯಾಪ್ತಿಗೆ ತರುವುದು ಹೇಗೆ ಎಂಬುದರ ಕುರಿತು ಆರ್‌ಎಸ್‌ಎಸ್ ಹದಿನೈದು ದಿನಗಳ ತರಬೇತಿಯನ್ನು ನೀಡುತ್ತದೆ ಎಂದು ಬರೆಯಲಾಗಿದೆ. ಈ ರೀತಿ ಮುಸ್ಲಿಂ ಯುವತಿಯನ್ನು ಮದುವೆಯಾಗಿ ಸನಾತನ ಧರ್ಮಕ್ಕೆ ಮತಾಂತರ ಮಾಡಿದರೆ ಅವರ ಭವಿಷ್ಯದ ಜೀವನಕ್ಕಾಗಿ RSS 5ಲಕ್ಷ ಬಹುಮಾನ ನೀಡಲಿದೆ ಎಂದು ಹೇಳಲಾಗಿದೆ.

ಈ ಪತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಬಳಕೆದಾರರು, “ಹಿಂದೂ ಹುಡುಗರೇ, ಮುಸ್ಲಿಂ ಹುಡುಗಿ ಕಾಲೇಜು ಮತ್ತು ಕಚೇರಿಯಲ್ಲಿ ನಿಮ್ಮನ್ನು ಪ್ರೀತಿಸುವಂತೆ ಮಾಡಿ ಮತ್ತು ಅವಳೊಂದಿಗೆ ದೈಹಿಕ ಸಂಬಂಧವನ್ನು ಬೆಳಸಿ ಇದರಿಂದ ಅವಳು ತನ್ನ ಕುಟುಂಬವನ್ನು ತೊರೆದು ಓಡಿಹೋಗಲು ಸಿದ್ಧಳಾಗುತ್ತಾಳೆ. ಆಕೆಯೊಂದಿಗೆ ಜೀವನ ಮಾಡಲು ನಿಮಗೆ 5 ಲಕ್ಷ ನೆರವು ನೀಡಲಾಗುವುದು ಎಂದು  ಟ್ವೀಟ್‌ನಲ್ಲಿ ಬರೆಯಲಾಗಿದ್ದು ಅದರ ಜೊತೆಗೆ #bhagwalovetrap’ ಎಂಬ ಹ್ಯಾಶ್‌ಟ್ಯಾಗ್ ಕೂಡ ಬಳಸಲಾಗಿದೆ.

ಹಾಗಿದ್ದರೆ ನಿಜವಾಗಿಯೂ RSS ಇಂತಹ ಘೋಷಣೆ ಮಾಡಿದೆಯೇ ಎಂದು ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಅನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ವೈರಲ್ ಪತ್ರದಲ್ಲಿ ಕೆಲವು ವ್ಯತ್ಯಾಸಗಳಿದ್ದು. ಇದರಲ್ಲಿ ಯಾವುದೇ ದಿನಾಂಕ ಅಥವಾ ಕಳುಹಿಸುವವರ ಹೆಸರು ಅಧಿಕೃತವಾಗಿ ನಮೂದಾಗಿಲ್ಲ.  ಅಖಿಲ ಭಾರತೀಯ ಹಿಂದೂ ಸಮಾಜ, ಬಜರಂಗದಳ, ಹಿಂದೂ ಸೇನೆ, ಹಿಂದೂ ಯುವ ವಾಹಿನಿ, ಸಮಸ್ತ ಹಿಂದೂ ಸಮಾಜ” ಎಂದು ಹೇಳುವ ಮೂಲಕ ಅದು ಕೊನೆಗೊಳ್ಳುತ್ತದೆ.

ಕೆಲವು ಕೀವರ್ಡ್ ಮೂಲಕ ಟ್ವಿಟರ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ಪತ್ರವನ್ನು ಹೋಲುವ ಕೆಲವು ಲೆಟರ್ ಹೆಡ್‌ಗಳ ಪತ್ರವನ್ನು ತನ್ನ ಅಧಿಕೃತ ಟ್ವಿಟರ್‌ಗಳಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಅದರಲ್ಲಿರುವ ವಿವರಣೆಯಲ್ಲಿ ಕೆಲವು ಮೂಲಭೂತ ವ್ಯತ್ಯಾಸಗಳನ್ನು ಕಾಣಬಹುದು.

RSS ಪತ್ರವು ಲೋಗೋದ ಕೆಳಭಾಗದಲ್ಲಿ “ಸಂಘೇ ಶಕ್ತಿ: ಕಲಯುಗೆ” ಎಂಬ ಧ್ಯೇಯವಾಕ್ಯವನ್ನು ಹೊಂದಿದೆ, ಅದು ಚಲಾವಣೆಯಲ್ಲಿರುವ ಪತ್ರದಲ್ಲಿ ಕಾಣೆಯಾಗಿದೆ. ನೀಲಿ ಫಾಂಟ್‌ನಲ್ಲಿ ಬರೆಯಲಾದ ಲೆಟರ್‌ಹೆಡ್‌ನಲ್ಲಿರುವ ವಿಳಾಸವನ್ನು ಮೂಲ ಪತ್ರದಲ್ಲಿ ಬಲಕ್ಕೆ ಜೋಡಿಸಲಾಗಿದೆ, ಆದರೆ ವೈರಲ್ ಪತ್ರದಲ್ಲಿ ಇದು ಹಾಗಲ್ಲ. ಮೂಲ ಪತ್ರವು ಬ್ರಾಕೆಟ್‌ಗಳಲ್ಲಿ “ಭಾರತ್” ಪದವನ್ನು ಸಹ ಹೊಂದಿದೆ.
RSS ಹೊರಡಿಸಿದ ಪ್ರತಿಯೊಂದು ಪತ್ರವು ವಿಭಿನ್ನ ಶೈಲಿಯ ಬರವಣಿಗೆಯನ್ನು ಹೊಂದಿದ್ದರೂ ಅಲ್ಲಿ ದಿನಾಂಕವು ಮೇಲ್ಭಾಗದಲ್ಲಿ ಅಥವಾ ಕೆಳಭಾಗದಲ್ಲಿ ಕಾಣಿಸಬಹುದು, ಈ ವೈರಲ್ ಪತ್ರವು ಮೊದಲೇ ಗಮನಿಸಿದಂತೆ ಯಾವುದೇ ದಿನಾಂಕವನ್ನು ಹೊಂದಿಲ್ಲ.

2018 ಮತ್ತು 2019 ರಲ್ಲಿ, RSS ಹೆಸರಿನಲ್ಲಿ ಒಂದೇ ರೀತಿಯ ಪತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿದ್ದವು ಸೂಕ್ಷ್ಮವಾಗಿ ಗಮನಿಸಿದಾಗ, ಆ ಪತ್ರಗಳಲ್ಲಿ ಯಾವುದೇ ಪ್ರಕಟಣೆಯ ದಿನಾಂಕವನ್ನು ನಮೂದಾಗಿಲ್ಲ. ಹಾಗಾಗಿ ಈ ಪತ್ರವನ್ನು ಲೆಟರ್‌ಹೆಡ್ ಬಳಸಿಕೊಂಡು ಎಡಿಟ್ ಮೂಲಕ ರಚಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಸಂಬಂಧವಿಲ್ಲದ ವಿಡಿಯೋವನ್ನು ಸ್ವಾಮಿ ವಿವೇಕಾನಂದರದ್ದು ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights