ಫ್ಯಾಕ್ಟ್‌ಚೆಕ್ : ಹಜ್ ಯಾತ್ರೆಗೆ ಕೋಟಿ ಹಣ ನೀಡುವ ಶಿರಡಿ ಸಾಯಿಬಾಬಾ ಟ್ರಸ್ಟ್ ರಾಮ ಮಂದಿರ ನಿರ್ಮಾಣಕ್ಕೆ ಹಣ ನೀಡುವುದಿಲ್ಲ

ಶಿರಡಿ ಸಾಯಿಬಾಬಾ ಟ್ರಸ್ಟ್ ಹಜ್ ಯಾತ್ರಾರ್ಥಿಗಳಿಗೆ ₹ 35 ಕೋಟಿ ದೇಣಿಗೆ ನೀಡಿದೆ ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒಂದು ರೂಪಾಯಿಯನ್ನು ನೀಡಿಲ್ಲ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

ಹಿಂದೂ ಧಾರ್ಮಿಕ ಕೆಲಸಗಳಿಗೆ ಹಣ ನೀಡುವ ಬದಲು ಹಜ್ ಯಾತ್ರೆಗೆ ದೇಣಿಗೆ ನೀಡುವ ಮೂಲಕ ಹಿಂದೂ ವಿರೋಧಿ ನಿಲುವನ್ನು ಪ್ರದರ್ಶಿಸುತ್ತಿದೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಹಜ್ ಯಾತ್ರಾರ್ಥಿಗಳಿಗೆ ದೇಣಿಗೆ ನೀಡುತ್ತಿದೆ ಎಂಬ ಹೇಳಿಕೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ನಡೆಸಿದಾಗ, ಶಿರಡಿ ಟ್ರಸ್ಟ್‌ನ ಹಜ್ ಯಾತ್ರಿಗಳಿಗೆ ದೇಣಿಗೆ ನೀಡುತ್ತಿರುವ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಲ್ಲಾಗಲಿ ಆಧಾರಗಳಲ್ಲಾಗಲಿ ಇಲ್ಲ. ಒಂದು ವೇಳೆ ಶಿರಡಿ ಟ್ರಸ್ಟ್‌ ದೇಣಿಗೆ ನೀಡುತ್ತಿರುವದೇ ಆಗಿದ್ದರೆ ಪ್ರಮುಖ ಸುದ್ದಿ ಮಾಧ್ಯಮಗಳು ವರದಿ ಮಾಡುತ್ತಿದ್ದವು.

ಅಲ್ಲದೆ ಶಿರಡಿ ಟ್ರಸ್ಟ್‌ನ ಅಧಿಕೃತ ಫೇಸ್‌ಬುಕ್ ಟ್ವಿಟರ್ ಮತ್ತು ವೆಬ್‌ಸೈಟ್‌ನಲ್ಲಿ ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಗಳಿಲ್ಲ. ಆದರೆ ಏಪ್ರಿಲ್‌ನಲ್ಲಿ ಇದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ವೈರಲ್ ಆಗಿದ್ದ ಸಂದರ್ಭದಲ್ಲಿ, ಟ್ರಸ್ಟ್‌ನ ಆಗಿನ ಸಿಇಒ ರಾಹುಲ್ ಜಾದವ್ ಅವರು ಈ ವಿಷಯವನ್ನು ಉದ್ದೇಶಿಸಿ ಹಜ್ ಯಾತ್ರಾರ್ಥಿಗಳಿಗೆ ಯಾವುದೇ ದೇಣಿಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಲ್ಲದೆ, ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಟ್ರಸ್ಟ್‌ಗೆ ಯಾವುದೇ ಮನವಿಗಳು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪರಿಣಾಮವಾಗಿ, ಸಂಸ್ಥಾನದ ನಿಯಮಾವಳಿಗಳಿಗೆ ಅನುಸಾರವಾಗಿ ಅಂತಹ ನಿಧಿಯನ್ನು ನೀಡಲು ನಿಬಂಧನೆಗಳಿರುವ ಕಾರಣ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ. ಹೆಚ್ಚುವರಿಯಾಗಿ, ಶಿರಡಿ ದೇವಸ್ಥಾನದ ಪ್ರತಿಷ್ಠೆಗೆ ಕಳಂಕ ತರುವಂತಹ ಇಂತಹ ಸುಳ್ಳು ಮಾಹಿತಿಯನ್ನು ಹರಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಅದರ ಮಾಜಿ ಸಿಇಒ ರಾಹುಲ್ ಜಾಧವ್ ಸ್ಪಷ್ಟಪಡಿಸಿದಂತೆ, ಹಜ್ ಯಾತ್ರಿಕರಿಗೆ ಯಾವುದೇ ದೇಣಿಗೆ ನೀಡಿಲ್ಲ. ಹೆಚ್ಚುವರಿಯಾಗಿ, ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆಗಾಗಿ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಮತ್ತು ಟ್ರಸ್ಟ್ ಅದರ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಜಾಧವ್ ಹೇಳಿರುವ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕೇದಾರನಾಥ ಹಿಂದೂ ಯಾತ್ರಿಗಳ ಮೇಲೆ ಹಲ್ಲೆ ನಡೆಸಿದ್ದು ಮುಸ್ಲಿಮರಲ್ಲ! ಮತ್ತ್ಯಾರು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights