ಫ್ಯಾಕ್ಟ್ಚೆಕ್ : ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡುತ್ತಿರುವ ಮಹಿಳೆ ಯಾರು? ಘಟನೆ ಎಲ್ಲಿ ನಡೆದಿದೆ ಗೊತ್ತೆ?
ಮಹಿಳೆಯೊಬ್ಬರು ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ರಕ್ಕಸಿ ಪೊಲೀಸರ ಕೈಗೆ ಸಿಗೋವರೆಗೂ ಶೇರ್ ಮಾಡಿ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ಹುಡುಗಿಯೊಬ್ಬಳು ಧೂಮಪಾನ (ಸಿಗರೇಟ್ ಸೇದುತ್ತ) ಮಾಡುತ್ತ, ಪುಟ್ಟ ಮಗುವನ್ನು ನೆಲಕ್ಕೆ ಹಾಕಿ, ತಲೆ ಕೂದಲನ್ನು ಎಳೆದು, ಕಾಲಿನಿಂದ ತುಳಿಯುತ್ತಿರುವುದನ್ನು ಕಾಣಬಹುದು. ಆ ಪುಟ್ಟ ಮಗು ಆಕೆ ಕೊಡುವ ಚಿತ್ರಹಿಂಸೆಯನ್ನು ತಡೆಯಲಾಗದೆ, ಬಿಡುವಂತೆ ಅಂಗಲಾಚಿದರೂ ಮಗುವಿನ ಕೆನ್ನಗೆ ಹೊಡೆದ, ಸಿಗರೇಟ್ನಲ್ಲಿ ಸುಡುವುದನ್ನು ದೃಶ್ಯದಲ್ಲಿ ಕಾಣಬಹುದು.
ಹಾಗಿದ್ದರೆ ಈ ವಿಡಿಯೋದಲ್ಲಿ ಕಂಡುಬರುವ ದೃಶ್ಯಗಳು ಎಲ್ಲಿ ನಡೆದಿದೆ, ಈ ಘಟನೆಗೆ ಕಾರಣರಾದವರನ್ನು ಪೊಲೀಸರು ಬಂದಿಸಿದ್ದಾರಾ? ಎಂದು ತಿಳಿಸುವಂತೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್ಸುದ್ದಿ.ಕಾಂಗೆ ವಾಟ್ಸಾಪ್ ಮೂಲಕ ವಿನಂತಿಸಿದ್ದಾರೆ. ಹಾಗಿದ್ದರೆ ಈ ವಿಡಿಯೋ ದೃಶ್ಯಾವಳಿಗಳು ಎಲ್ಲಿ ನಡೆದಿದೆ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪುಟ್ಟ ಹೆಣ್ಣುವಗುವನ್ನು ನೆಲದಲ್ಲಿ ಹಾಕಿ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋವನ್ನು ಪರಿಶೀಸಲು ವಿಡಿಯೋದ ಕೀ ಫ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಘಟನೆಗೆ ಸಂಬಂಧಿಸಿದಂತೆ ಹಲವು ವರದಿಗಳು ಲಭ್ಯವಾಗಿದ್ದು, ನಿಕರಾಗುವಾದ, ಕಾಂಡೆಗಾ ಎಂಬ ಪಟ್ಟಣದಲ್ಲಿ ಈ ನಡೆದಿದೆ ಎಮದು ಉಲ್ಲೆಖಿಸಲಾಗಿದೆ.

ವಿಪರ್ಯಾಸವೆಂದರೆ ವಿಡಿಯೋ ದೃಶ್ಯಗಳಲ್ಲಿ ಹೀಗೆ ಮಗುವನ್ನು ಅಮಾನವೀಯವಾಗಿ ಹೊಡೆಯುತ್ತಿರುವ ಮಹಿಳೆ ಉವಾಲ್ಡ್ರಿನಾ ಸೈಲ್ಸ್ ಎಂದು ಗುರುತಿಸಲಾಗಿದೆ. ಆ ಪುಟ್ಟ ಮಗು ಮಹಿಳೆಯ ಸ್ವಂತ ಮಗು ಎಂದು ಉಲ್ಲೇಖಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ನಿಕರಾಗುವಾ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಮಹಿಳೆ ಮಾದಕ ವ್ಯಸನಿಯಾಗಿದ್ದಳು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ನಿಕರಾಗುವಾದಲ್ಲಿ ನಡೆದ ಈ ಘಟನೆಯನ್ನು ವರದಿ ಮಾಡುವ ಕೆಲವು ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಆದರೆ ಈ ಘಟನೆ ನಡೆದಿರುವುದು ನಮ್ಮ ದೇಶದಲ್ಲಿ ಎಂದು ಭಾವಿಸಿ ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಆದರೆ ಮೇಲಿನ ಮೂಲಗಳಿಂದ ಈ ವೀಡಿಯೊಗೂ ನಮ್ಮ ದೇಶಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಉವಾಲ್ಡ್ರಿನಾ ಸೈಲ್ಸ್ ಎಂಬ ಮಾದಕ ವ್ಯಸನಿ ತಾಯಿಯೊಬ್ಬಳು ತನ್ನ ಸ್ವತ ಮಗಳಿಗೆ ಕಿರುಕುಳ ನೀಡುವ ಘಟನೆ 5ತಿಂಗಳ ಹಿಂದೆ ಅಂದರೆ 2023 ಮೇ ನಲ್ಲಿ ನಿಕರಾಗುವಾ ಎಂಬ ಪಟ್ಟಣದಲ್ಲಿ ನಡೆದಿದ್ದು, ಆಕೆಯನ್ನು ನಿಕರಾಗುವಾ ಪೊಲೀಸರು ಬಂಧಿಸಿದ್ದಾರೆ. ಆ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರತದ್ದು ಎಂದು ವೈರಲ್ ಆಗುತ್ತಿದೆ. ಆದರೆ ಈ ವಿಡಿಯೋ ಭಾರತಕ್ಕೆ ಸಂಬಂಧಿಸಿಲ್ಲ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್ : ವ್ಯಕ್ತಿಯೊಬ್ಬ ಬಾಲಕನಿಗೆ ಅಮಾನವೀಯವಾಗಿ ಥಳಿಸುತ್ತಿರುವ ಘಟನೆ ಎಲ್ಲಿಯದು ಗೊತ್ತೇ?

