ಫ್ಯಾಕ್ಟ್‌ಚೆಕ್ : ವ್ಯಕ್ತಿಯೊಬ್ಬ ಬಾಲಕನಿಗೆ ಅಮಾನವೀಯವಾಗಿ ಥಳಿಸುತ್ತಿರುವ ಘಟನೆ ಎಲ್ಲಿಯದು ಗೊತ್ತೇ?

RSS ಟ್ರೈನಿಂಗ್ ಕ್ಯಾಂಪ್‌ನಲ್ಲಿ ಮಕ್ಕಳಿಗೆ ಚಿತ್ರ ಹಿಂಸೆ ನೀಡುತ್ತಿರುವ ಭಯಾನಕ ದೃಶ್ಯ ಬಹಿರಂಗ, RSS ಉಗ್ರಗಾಮಿಗಳ ಸ್ಪೋಟಕ ಸುದ್ದಿ ಎಂಬ ಹೇಳಿಕೆಯೊಂದಿಗೆ ವಿದ್ಯಾರ್ಥಿಯನ್ನು ಅಮಾನವೀಯವಾಗಿ ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

ಹಲವು ಸಾಮಾಜಿಕ ಮಧ್ಯಮಗಳ ಬಳಕೆದಾರರು ಈ ವಿಡಿಯೋವನ್ನು ಏನ್‌ಸುದ್ದಿ.ಕಾಂ ಫ್ಯಾಕ್ಟ್‌ಚೆಕ್ ತಂಡಕ್ಕೆ ವಾಟ್ಸಾಪ್ ಮಾಡುವ ಮೂಲಕ ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಹಾಗಿದ್ದರೆ ಈ ವಿಡಿಯೋದಲ್ಲಿ ಥಳಿಸುತ್ತಿರುವ ವ್ಯಕ್ತಿ ಮತ್ತು ಬಾಲಕ ಯಾರು ಈ ಘಟನೆ ಎಲ್ಲಿ ನಡೆದಿದೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  ಲೈವ್ ಹಿಂದೂಸ್ತಾನ್ ಮತ್ತು ಆಜತಕ್  ಮಾಧ್ಯಮಗಳು ಮಾಡಿದ ವರದಿಗಳು ಲಭ್ಯವಾಗಿವೆ.

ಉತ್ತರ ಪ್ರದೇಶದ ಸೀತಾಪುರದ ಸಿಧೌಲಿಯಲ್ಲಿರುವ ಗುರುಕುಲ ಎಂಬ ಸಂಸ್ಕೃತ ಪಾಠಶಾಲೆಯೊಂದರ ಶಿಕ್ಷಕ ಸತೀಶ್ ಕುಮಾರ್ ಜೋಶಿ ದೀಪಕ್ ಎಂಬ ವಿದ್ಯಾರ್ಥಿಗೆ ಥಳಿಸಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೂ ಬೆದರಿಸಿದ ಕಾರಣ ಅವರು ತಡೆಯಲು ಧೈರ್ಯ ತೋರಿಸಿಲ್ಲ. ಆನಂತರ ವಿದ್ಯಾರ್ಥಿಯೊಬ್ಬ ವಿಡಿಯೋ ಮಾಡಿದ್ದರಿಂದ ಅದು ಎಲ್ಲೆಡೆ ಹರಿದಾಡಿದೆ. ಅದರ ಆಧಾರಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಲೈವ್ ಹಿಂದೂಸ್ತಾನ್ ಮತ್ತು ಆಜತಕ್ ಹಿಂದಿ ಮಾಧ್ಯಮಗಳು ವರದಿ ಮಾಡಿವೆ.

ಇದು ಉತ್ತರ ಪ್ರದೇಶದ ಸೀತಾಪುರದಲ್ಲಿರುವ ಗುರುಕುಲದಲ್ಲಿ ನಡೆದ ಘಟನೆ ಎಂದು ವರದಿ ಯಾಗಿದೆ. 2.12 ನಿಮಿಷದ ಈ ವಿಡಿಯೋದಲ್ಲಿ ಶಿಕ್ಷಕ ಸತೀಶ್ ಕುಮಾರ್ ಜೋಶಿ ಎಂಬಾತ ದೀಪಕ್ ಎಂಬ ವಿದ್ಯಾರ್ಥಿಗೆ ಮನಸೋ ಇಚ್ಚೆ ಥಳಿಸಿರುವುದು ದಾಖಲಾಗಿದೆ. ವಿಡಿಯೋ ವೈರಲ್ ಆದ ನಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಈ ಘಟನೆಯು ಸೀತಾಪುರದ ಸಿಧೌಲಿಯಲ್ಲಿರುವ ಗುರುಕುಲದಲ್ಲಿ (ಸಂಸ್ಕೃತ ಶಾಲೆ) ನಡೆದಿದೆ. ಇಲ್ಲಿ ಪಾಠ ಮಾಡುತ್ತಿದ್ದ ಆಚಾರ್ಯ ಸತೀಶ್ ಕ್ಷುಲ್ಲಕ ವಿಚಾರಕ್ಕೆ ವಿದ್ಯಾರ್ಥಿ ದೀಪಕ್ ಗೆ ಬರ್ಬರವಾಗಿ ಥಳಿಸಿದ್ದಾರೆ. ಈ ವಿಡಿಯೋ ನೋಡಿದ ಜನರು ಪೊಲೀಸರಿಗೆ ತಲುಪಿಸಿದ್ದಾರೆ ಎಂದು ವರದಿ ಮಾಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನೋಡಿದ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ವಿಡಿಯೋ ಸುಮಾರು 3 ತಿಂಗಳ ಹಳೆಯದು ಎನ್ನಲಾಗಿದೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ, ಆನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸಿಧೌಲಿ ಪೊಲೀಸ್ ಠಾಣಾ ಮುಖ್ಯಸ್ಥ ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಉತ್ತರ ಪ್ರದೇಶದ ಸೀತಾಪುರದ ಸಿಧೌಲಿಯಲ್ಲಿರುವ ಗುರುಕುಲದಲ್ಲಿ (ಸಂಸ್ಕೃತ ಶಾಲೆ) ನಡೆದಿದೆ. ಗುರುಕುಲ ಹೆಸರಿನಲ್ಲಿ ಈ ರೀತಿಯ ದೌರ್ಜನ್ಯ ಎಸಗುವುದನ್ನು ತಡೆಯಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಕೃಪೆ : ಕನ್ನಡ ಫ್ಯಾಕ್ಟ್‌ಚೆಕ್ 

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ನಿಧನ ಎಂದು ಸುಳ್ಳು ಸುದ್ದಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights