ಫ್ಯಾಕ್ಟ್‌ಚೆಕ್ : ಜೀವಂತ ವ್ಯಕ್ತಿಯ ಎದೆ ಬಗೆದು ಹೃದಯವನ್ನು ಹೊರ ತೆಗೆಯುತ್ತಿರುವ ವಿಡಿಯೋ ಇಸ್ರೇಲ್ ಮತ್ತು ಹಮಾಸ್‌ ಘರ್ಷಣೆಗೆ ಸಂಬಂಧಿಸಿದಲ್ಲ!

ಇಸ್ರೇಲ್-ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ, ಹಮಾಸ್‌ ಉಗ್ರರ ಗುಂಪು ಇಸ್ರೇಲ್‌ನ ಪ್ರಜೆಯೊಬ್ಬನ ಎದೆಯನ್ನು ಚಾಕುವಿನಿಂದ ಸೀಳಿ ಹೃದಯವನ್ನು ಹೊರತೆಗೆದು ವಿಕೃತ ಮೆರೆಯುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಅಘಾತಕಾರಿ ವಿಡಿಯೋವೊಂದನ್ನು ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ವಿಡಿಯೋ ಭಯಾನಕವಾಗಿದ್ದು ವಿಡಿಯೋವನ್ನು ಬ್ಲರ್ ಮಾಡಲಾಗದೆ. ಎಂತಹ ಕಟುಕ ಜನ ಈ ವಿಡಿಯೋ ಹಮಾಸ್ ಉಗ್ರರ ನಿಜ ರೂಪವನ್ನು ತೋರಿಸಿದೆ ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. “ಹಮಾಸ್ ಟೆರರಿಸ್ಟ್ ಇಸ್ರೇಲಿ ಪ್ರಜೆಯನ್ನು ಕೊಂದು, ಅವನ ಹೃದಯವನ್ನು ಹೊರ ತೆಗೆದ ನಂತರ ಅದನ್ನು ತಿನ್ನುವುದನ್ನು ನೋಡಬಹುದು” ಎಂದು ವಿಡಿಯೋವನ್ನು ಅಪ್‌ಲೋಡ್ ಮಾಡಿದ ಎಕ್ಸ್ ಬಳಕೆದಾರರು ಹೇಳಿಕೊಂಡಿದ್ದಾರೆ. ಹಾಗಿದ್ದರೆ ಈ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಆಗಸ್ಟ್ 24, 2020 ರಂದು ಮೆಕ್ಸಿಕನ್ ಪತ್ರಿಕೆಯ ವರದಿ ಲಭ್ಯವಾಗಿದೆ. ಈ ವರದಿಯ ಪ್ರಕಾರ, ಈ ಘಟನೆಯು ಮೆಕ್ಸಿಕೋದ ಮೈಕೋವಾಕನ್ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.

video) Presunto sicario de CJNG le saca el corazón a su rival y se lo come  – CIudadanos al dia

ವರದಿಯ ಪ್ರಕಾರ, ಜಲಿಸ್ಕೋ ನ್ಯೂ ಜನರೇಷನ್ ಕಾರ್ಟೆಲ್ ಸದಸ್ಯರೊಬ್ಬರು ಟೆಪಾಲ್‌ಕ್ಯಾಟೆಪೆಕ್ ಕಾರ್ಟೆಲ್‌ಗೆ ಸೇರಿದ ಮಾದಕವಸ್ತು ಕಳ್ಳಸಾಗಣೆದಾರನೊಬ್ಬನ ಎದೆಯನ್ನು ಸೀಳಿ ಹೃದಯವನ್ನು ಹೊರತೆಗೆದು ತಿನ್ನುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಆಗಸ್ಟ್ 2020 ರಲ್ಲಿ ಹಲವಾರು ಸ್ಪ್ಯಾನಿಷ್ ಭಾಷೆಯ ಸುದ್ದಿ ಪ್ರಕಟಣೆಗಳು ಒಳಗೊಂಡಿವೆ. ಮೆಥಾಂಫೆಟಮೈನ್, ಕೊಕೇನ್, ಹೆರಾಯಿನ್ ಮತ್ತು ಇತರ ಕಾನೂನುಬಾಹಿರ ಮಾದಕ ದ್ರವ್ಯಗಳನ್ನು ಮೆಕ್ಸಿಕನ್ ಡ್ರಗ್ ಗ್ಯಾಂಗ್‌ಗಳು ಆಗಾಗ್ಗೆ US ಗೆ ಸರಬರಾಜು ಮಾಡುತ್ತವೆ. ಮೆಕ್ಸಿಕೋ ದೇಶದ ಮೂರನೇ ಎರಡರಷ್ಟು ಹೆಚ್ಚು ಕಾರ್ಯಾಚರಣೆಗಳನ್ನು ಹೊಂದಿದೆ., ಜಾಲಿಸ್ಕೋ ನ್ಯೂ ಜನರೇಷನ್ ಕಾರ್ಟೆಲ್ ರಾಷ್ಟ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಗಳಲ್ಲಿ ಒಂದಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2020ರಲ್ಲಿ ಮೆಕ್ಸಿಕೋದಲ್ಲಿ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಗುಂಪುಗಳ ನಡುವೆ ಇದ್ದ ವೈಷಮ್ಯದ ಹಿನ್ನಲೆಯಲ್ಲಿ ಎದುರಾಳಿಯ ಗುಂಪಿನ ಸದ್ಯನೊಬ್ಬನ್ನು ಜೀವಂತವಗಿ ಇರುವಾಗಲೇ ಎದೆಯನ್ನು ಸೀಳಿ ಹೃದಯವನ್ನು ಹೊರ ತೆಗೆದು ತಿಂದಿರುವ ಹಳೆಯ ಘಟನೆಯನ್ನು, ಇಸ್ರೇಲ್‌ನ ಪ್ರಜೆಯನ್ನು ಹಮಾಸ್ ಉಗ್ರರು ಜೀವಂತವಾಗಿ ಯರುವಾಗಲೇ ವ್ಯಕ್ತಿಯ ಎದೆಯನ್ನು ಸೀಳಿ ಕೊಂದಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಹಮಾಸ್ ಗುಂಪು ನಡೆಸಿದ ದಾಳಿಯಲ್ಲಿ ಇಸ್ರೇಲ್‌ನ ಈ ದಂಪತಿಗಳು ಸಾಪನಪ್ಪಿಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights