ಫ್ಯಾಕ್ಟ್‌ಚೆಕ್ : ಸೂಪರ್ ಮಾರ್ಕೆಟ್‌ನಲ್ಲಿ ಹಂದಿ ಮಾಂಸದ ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸಿದ್ದು ನಿಜವೇ?

ಡಚ್ ಸೂಪರ್ಮಾರ್ಕೆಟ್‌ನ ಹಂದಿಮಾಂಸ ವಿಭಾಗದಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೂತ್ರ ವಿಸರ್ಜಿಸುತ್ತಿರುವ ವ್ಯಕ್ತಿಯು ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ನೆದರ್ಲೆಂಡ್ಸ್‌ನಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಲಪಂಥೀಯ ಶಾಸಕ ಗೀರ್ಟ್ ವೈಲ್ಡರ್ಸ್, ವೈರಲ್ ಕ್ಲಿಪ್ ಅನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಕೋಮು ಹಿನ್ನಲೆಯಲ್ಲಿ  ಹಂಚಿಕೊಂಡಿದ್ದಾರೆ.

“ಹಾಲೆಂಡ್‌ನಲ್ಲಿರುವ ಮುಸ್ಲಿಂ ವಲಸಿಗರು ಸೂಪರ್‌ಮಾರ್ಕೆಟ್‌ನ ಹಂದಿಮಾಂಸದ ವಿಭಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತ ‘ನಾವು ಹಂದಿಮಾಂಸವನ್ನು ತಿನ್ನುವುದಿಲ್ಲ’ ಎಂದು ಹೇಳುತ್ತಾರೆ ಎಂದು ಮತ್ತೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಸಾಮಾಜಿ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದಿಸಿದಂತೆ ಸೂಪರ್ ಮಾರ್ಕೆಟ್‌ವೊಂದರಲ್ಲಿ ಹಂದಿ ಮಾಂಸದ ಮೇಲೆ ಮುಸ್ಲಿಂ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ್ದು ನಿಜವೇ ಎಂದು ಪರಿಶೀಲಿಸಿದಾಗ, ಡಚ್ ಮೂಲದ ಕಂಟೆಂಟ್ ಕ್ರಿಯೇಟರ್ ಡ್ಯಾನಿ ಡೆರಿಕ್ಸ್‌ಗೆ ಅವರು ತಮ್ಮ Instagramನಲ್ಲಿ ಡಿಸೆಂಬರ್ 14 ರಂದು ಇದೇ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದು ಕಂಡು ಬಂದಿದೆ.

 

View this post on Instagram

 

A post shared by Danny Derix (@buurtwachtt)

ವೈರಲ್ ವಿಡಿಯೋದಲ್ಲಿ ಹಂದಿ ಮಾಂಸದ ಮೇಲೆ ಮೂತ್ರ ಮಾಡಿರುವ ಕುರಿತು ಸತ್ಯಾಸತ್ಯತೆಗಳ್ನು ಪರಿಶೀಲಿಸಿದಾಗ ದೊಂದು ಪ್ರ್ಯಾಂಕ್ ವಿಡಿಯೋ ಎಂದು ಡ್ಯಾನಿ ಡೆರಿಕ್ಸ್‌ಗೆ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋವನ್ನು ಪರಿಶೀಲಿಸಿದಾಗ ತಿಳಿದುಬಂದಿದೆ. ‘ನಾನು ಇಡೀ ಜಗತ್ತನ್ನು ಮರುಳು ಮಾಡಿದ್ದೇನೆ’ ಎಂಬ ಶೀರ್ಷಿಕೆಯೊಂದಿಗೆ ಡಿಸೆಂಬರ್ 20, 2023 ರಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

 

ವಿಡಿಯೋ ವೈರಲ್ ಆಗಿರುವ ಬಗ್ಗೆ ಮಾತನಾಡಿರುವ ಯೂಟ್ಯೂಬರ್  ಇದನ್ನು ನಾನು ಪ್ರಾಂಕ್ ಕಂಟೆಂಟ್‌ಗಾಗಿ ಮಾಡಿದ್ದು ತಮ್ಮ ವಿಡಿಯೋದಿಂದ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಹೇಗೆ ಮರುಳು ಮಾಡಬಹದು. ಇಂಟರ್ನೆಟ್‌ ಇಂದು ಎಲ್ಲವನ್ನು ಮರಳು ಮಾಡುವುದನ್ನು ಕಲಿಸಿದೆ, ಸುಳ್ಳು ಸುದ್ದಿಗಳನ್ನು ಹರಡುವುದು ಎಷ್ಟು ಸುಲಭ ಎಂದು ನಾವು ಜನರಿಗೆ ಸ್ಪಷ್ಟಪಡಿಸಲು ಬಯಸುತ್ತೇವೆ” ಎಂದು ಅವರು ಹೇಳುವುದನ್ನು ಕೇಳಬಹುದು.

ವಾಸ್ತವವಾಗಿ ನಾನು ಇಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದೇನೆ ವಿಡಿಯೋದಲ್ಲಿ ಕಾಣುತ್ತಿರುವುದು ನನ್ನ ಸ್ನೇಹಿತ ಆತನ ನಟನೆ ನೈಜವಾಗಿದ್ದೆ ವಿಡಿಯೋವನ್ನು ಎಡಿಟ್ ಮಾಡುವಾಗ ಅದಕ್ಕೆ ಸೌಂಡ್ ಎಫೆಕ್ಟ್‌ ಬಳಸಿ ಮೂತ್ರ ಮಾಡುತ್ತಿರುವಂತೆ ವಿಡಿಯೋವನ್ನು ರಚಿಸಲಾಗಿದೆ. ಇದನ್ನು ಪರಿಶೀಲಿಸದೆ ಕೆಲವರು ನಿಜವಾಗಿಯೂ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ನಂಬಿದ್ದಾರೆ. ಜನರನ್ನು ಇಷ್ಟು ಸುಲಭವಾಗಿ ಮರಳು ಮಾಡಬಹುದು ಎಂದು ಇದು ಸಾಬೀತು ಮಾಡಿದೆ ಎಂದಿದ್ದಾರೆ.

ಶಾಸಕ ಗೀರ್ಟ್ ವೈಲ್ಡರ್ಸ್, ಈ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ತಾವೊಬ್ಬ ಕೋಮುವಾದಿ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಾಂಕ್ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಡಚ್‌ನ ಸೂಪರ್ ಮಾರ್ಕೆಟ್‌ನಲ್ಲಿ ಹಂದಿ ಮಾಂಸದ ಮೇಲೆ ಮೂತ್ರ ಮಾಡಿದ ಮುಸ್ಲಿಂ ವ್ಯಕ್ತಿ ಎಂದು ಕೋಮು ದ್ವೇಷದ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ.

ಕೃಪೆ: ಬೂಮ್& Alt news

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ವೈರಲ್ ಪೋಟೊದಲ್ಲಿ ದಾವೂದ್ ಇಬ್ರಾಹಿಂ ಜೊತೆಗಿರುವುದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನತೆಯವರೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights