ಫ್ಯಾಕ್ಟ್‌ಚೆಕ್ : ವೈರಲ್ ಪೋಟೊದಲ್ಲಿ ದಾವೂದ್ ಇಬ್ರಾಹಿಂ ಜೊತೆಗಿರುವುದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನತೆಯವರೇ?
1987ರಲ್ಲಿ ತೆಗೆದದ್ದು ಎನ್ನಲಾದ ಫೋಟೋವೊಂದು ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನತೆಯವರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಇರುವ ಫೋಟೊ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
https://twitter.com/maheshyagyasain/status/1670339216172290048
1987ರಲ್ಲಿ ಸೆರೆಹಿಡಿದ ಈ ಫೋಟೋದಲ್ಲಿ ದಾವೂದ್ ಇಬ್ರಾಹಿಂ ಜೊತೆಗಿರುವುದು ಬೇರಾರು ಅಲ್ಲ ಅವರೇ ಸುಪ್ರಿಯಾ ಶ್ರೀನತೆ. ಈಗ ಈ ಮಹಿಳೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ. ಈಕೆ ಟಿವಿ ಡಿಬೇಟ್‌ಗಳಲ್ಲಿ ಎಲ್ಲರ ಜೊತೆಗೆ ಜಗಳವಾಡುವುದನ್ನು ನೋಡಿರುತ್ತೀರಿ. ಕಾಂಗ್ರೆಸ್ ಇಂತಹ ದ್ರೋಹಿಗಳಿಗೆ ಜನ್ಮನೀಡಿ ಪೋಷಿಸುತ್ತದೆ’ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2023ರ ಜೂನ್ 14ರಂದು ಪತ್ರಕರ್ತೆ ಶೀಲಾಭಟ್ ಅವರ ಎಕ್ಸ್ ಖಾತೆಯಲ್ಲಿ ಇದೇ ಫೋಟೊವನ್ನು ಹಂಚಿಕೊಂಡಿರುವುದು ಕಂಡುಬಂದಿದೆ.
Drop a photo of you doing your job.@nistula @Vasudha156 @MathewLiz @bhartijainTOI @_pallavighosh @NEETAS11 @OlgaTellis @mehtahansal @Shussainzaidi @tallstories @sandhyadwivedi1
Interviewing Dawood Ibrahim in Pearl Building, Dubai. 1987. pic.twitter.com/gAxxp8iW2I— Sheela Bhatt शीला भट्ट (@sheela2010) June 14, 2023
“ನೀವು ಕೆಲಸ ಮಾಡುತ್ತಿರುವ ಸಂದರ್ಭದ ಒಂದು ಫೋಟೋ” ಶೇರ್ ಮಾಡಿ ಎಂಬ (Photo Challenge) ಸವಾಲಿಗೆ ಪ್ರತಿಕ್ರಿಯಿಸಿರುವ ಶೀಲಾ ಭಟ್, ದುಬೈನ ಪರ್ಲ್ ಕಟ್ಟಡದಲ್ಲಿ ದಾವೂದ್ ಇಬ್ರಾಹಿಂ ಭೇಟಿ ಮಾಡಿ ಸಂದರ್ಶನ ಮಾಡಿದ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಹಂಚಿಕೊಂಡಿದ್ದರು.
ತಮ್ಮ ಎಕ್ಸ್ ಖಾತೆಯಲ್ಲಿ ಶೀಲಾ ಭಟ್ ಈ ಫೋಟೊವನ್ನು ಹಂಚಿಕೊಳ್ಳುತ್ತಿದಂತೆ, ಇದು ನಕಲಿಯೋ ಅಸಲಿಯೋ ಎಂದು ಕಮೆಂಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಶೀಲಾ ಭಟ್, ದಾಖಲೆಗಾಗಿ ನಾನಿಲ್ಲಿ ಎರಡು ಕವರ್ ಪೇಜ್‌ಗಳನ್ನು ಪೋಸ್ಟ್ ಮಾಡುತ್ತಿದ್ದೇನೆ. 1. ಅಭಿಯಾನ್, ನಾನು ನನ್ನ ಪತಿ ಕಾಂತಿ ಭಟ್ ಆರಂಭಿಸಿದ ಪತ್ರಿಕೆ.
2. ಇಲ್ಲಸ್ಟ್ರೇಟೆಡ್ ವೀಕ್ಲಿ.
Flooded with queries if this is fake pic or real. Just to put record straight posting two cover pages 1) Abhiyaan, the weekly founded by me and my late husband Kanti Bhatt and 2) The Illustrated Weekly. Both carried my interview of Dawood Ibrahim in 1987. Weekly’s cover story was… pic.twitter.com/su7IrqGSeL
— Sheela Bhatt शीला भट्ट (@sheela2010) June 17, 2023
1987ರಲ್ಲಿ ಎರಡೂ ಪತ್ರಿಕೆಗಳಲ್ಲಿ ದಾವೂದ್ ಇಬ್ರಾಹಿಂ ಸಂದರ್ಶನ ಪ್ರಕಟವಾಗಿತ್ತು. ವೀಕ್ಲಿಯ ಕವರ್ ಸ್ಟೋರಿಯನ್ನು ಪತ್ರಕರ್ತೆ ಅಮೃತಾ ಶಾ ಬರೆದರು. ಅವರ ಕವರ್ ಸ್ಟೋರಿಯ ಜೊತೆಗೆ ನನ್ನ ಸಂದರ್ಶನವೂ ಪ್ರಕಟವಾಗಿತ್ತು. ದಾವೂದ್ ಎಲ್ಲ ಫೋಟೋಗಳನ್ನು ನಾನೇ ಸೆರೆಹಿಡಿದಿದ್ದು’ ಎಂದು ಬರೆದುಕೊಂಡಿದ್ದರು.
ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನತೆ ಅವರ ಹೆಸರಿನೊಂದಿಗೆ ಫೋಟೋ ವೈರಲ್ ಆದ ಹಿನ್ನೆಲೆಯಲ್ಲಿ, ಸುಪ್ರಿಯಾ ಅವರೂ ಪ್ರತಿಕ್ರಿಯೆ ನೀಡಿದ್ದು, ಶೀಲಾ ಭಟ್ ಅವರು ಈ ಸಂದರ್ಶನ ಪ್ರಕಟವಾದಾಗ ನಾನು ಹತ್ತು ವರ್ಷದವಳಾಗಿದ್ದೆ’ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, 1987ರಲ್ಲಿ ದುಬೈನಲ್ಲಿ ದಾವೂದ್ ಇಬ್ರಾಹಿಂನ ಸಂದರ್ಶನ ಮಾಡಿದ ವೇಳೆ ದಾವೂದ್ ಜೊತೆಗೆ ಪತ್ರಕರ್ತೆ ಶೀಲಾ ಭಟ್ ತೆಗೆಸಿಕೊಂಡ ಚಿತ್ರವನ್ನು , ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನತೆ ಅವರದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಷ್ಟ್ರಪತಿಗೂ ಪ್ರಧಾನಿ ಮೋದಿ ಗೌರವ ನೀಡಲಿಲ್ಲವೇ?

