FACT CHECK | ಅಮೆರಿಕಾದ ಖ್ಯಾತ ವ್ಯಂಗ್ಯಚಿತ್ರಕಾರ ಬೆನ್ ಗ್ಯಾರಿಸನ್ ಭಾರತದ ಮಾಧ್ಯಮಗಳ ಕುರಿತು ವ್ಯಂಗ್ಯಚಿತ್ರ ಬಿಡಿಸಿದ್ದು ನಿಜವೇ ?

ಅಮೆರಿಕಾದ ವ್ಯಂಗ್ಯಚಿತ್ರಕಾರ ಬೆನ್ ಗ್ಯಾರಿಸನ್ ಅವರು ಭಾರತೀಯ ಮಾಧ್ಯಮಗಳ ಪ್ರಸ್ತುತ ಸ್ಥಿತಿಯನ್ನು ಚಿತ್ರಿಸುವ ‘ಲಿಪ್‌ಸ್ಟಿಕ್ ಆನ್ ಎ ಪಿಗ್’ (ಹಂದಿಯ ಮೇಲೆ ಲಿಪ್ ಸ್ಟಿಕ್) ಶೀರ್ಷಿಕೆಯ ವ್ಯಂಗ್ಯಚಿತ್ರವನ್ನು ರಚಿಸಿದ್ದಾರೆಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಪಠ್ಯ 'ಭಾರತದ ಮಾಧ್ಯಮದ ಬಗ್ಗೆ ಅಮೇರಿಕದ ಖ್ಯಾತ ವ್ಯಂಗ್ಯ ಚಿತ್ರಕಾರ ಬೆನ್ ಗ್ಯಾರಿಸನ್ ಬಿಡಿಸಿದ ವ್ಯಂಗ್ಯಚಿತ್ರವಿದು.ಈ ಒಂದು ಚಿತ್ರವು ಭಾರತದ ಮಾಧ್ಯಮದ ಬಗ್ಗೆ ವಿದೇಶದಲ್ಲಿ ಎಂಥ ಭಾವನೆಯಿದೆ ಎಂಬುದನ್ನು ತೋರಿಸುತ್ತದೆ. Lipstick Pig EPUUC INDIA ህ9 3க YO TODAY HANম' ಹೇಳುತ್ತಿದೆ ನ ಚಿತ್ರವಾಗಿರಬಹುದು

ಈ ವ್ಯಂಗ್ಯ ಚಿತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮುಖದ ಚಿತ್ರವನ್ನು ಹೊಂದಿರುವ ತಾಯಿ ಹಂದಿ ಮತ್ತು ಆ ಹಂದಿಯಿಂದ ಆಹಾರ ಪಡೆಯುತ್ತಿರುವ (ಹಾಲು ಕುಡಿಯುತ್ತಿರುವ) ಅನೇಕ ಹಂದಿಮರಿಗಳನ್ನು ಕೆಲವು ಭಾರತೀಯ ಸುದ್ದಿ ವಾಹಿನಿಗಳ ಲೋಗೊಗಳೊಂದಿಗೆ ಚಿತ್ರಿಸಲಾಗಿದೆ. ಇಷ್ಟಲ್ಲದೆ ಹಿಂಭಾಗದಲ್ಲಿ,  ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಪ್ರತಿನಿಧಿಸಿ ‘ಭಾಗವತ್’ ಹೆಸರಿನಲ್ಲಿ ನಾಯಿಯ ಚಿತ್ರವನ್ನು ರಚಿಸಲಾಗಿದೆ. ಈ ಚಿತ್ರವನ್ನು ನಿಜವಾಗಿಯೂ ಅಮೆರಿಕಾದ ವ್ಯಂಗ್ಯಚಿತ್ರಕಾರ ಬೆನ್ ಗ್ಯಾರಿಸನ್ ಬಿಡಿಸಿದ್ದಾರೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಪರಿಶೀಲಿಸಿದಾಗ,  ಫೋಟೋದಲ್ಲಿರುವ ವ್ಯಂಗ್ಯಚಿತ್ರದ ಮೂಲ ಕಾರ್ಟೂನ್ ದೊರೆತಿದೆ. ಮೂಲ ವ್ಯಂಗ್ಯಚಿತ್ರದಲ್ಲಿ ಅಮೆರಿಕಾದ ಹಿಲರಿ ಕ್ಲಿಂಟನ್ ಅವರ ಮುಖದ ಚಿತ್ರವನ್ನು ಹೊಂದಿರುವ ತಾಯಿ ಹಂದಿ ಮತ್ತು ‘ಸುಳ್ಳು’, ‘ಅಪರಾಧ’, ‘ಕಳ್ಳತನ’, ‘ಲಂಚ’ ಇತ್ಯಾದಿಗಳನ್ನು ಪ್ರತಿನಿಧಿಸುವ ಅನೇಕ ಹಂದಿಮರಿಗಳನ್ನು ಹೊಂದಿದೆ. ಹಿಂದೆ ಇರುವ ನಾಯಿಯನ್ನು ‘ಬಿಲ್’ ಹೆಸರಿನೊಂದಿಗೆ ಚಿತ್ರಿಸಳಾಗಿದೆ. ಈ ಕಾರ್ಟೂನ್ ಅನ್ನು ಮಾರ್ಚ್ 2016ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಅಮೆರಿಕಾದ ವ್ಯಂಗ್ಯಚಿತ್ರಕಾರ ಬೆನ್ ಗ್ಯಾರಿಸನ್ ಅವರು ಚಿತ್ರಿಸಿದರು. ಆದ್ದರಿಂದ ಪೋಸ್ಟ್‌ನಲ್ಲಿರುವ ಕಾರ್ಟೂನನ್ನು ಫೋಟೋಶಾಪ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ಫೋಟೊಶಾಪ್ ಮಾಡಲಾಗಿರುವ ಕಾರ್ಟೂನ್‌ನಲ್ಲಿರುವ ಮೋದಿಯವರ ಮುಖದ ವ್ಯಂಗ್ಯಚಿತ್ರವನ್ನು 2010 ರಲ್ಲಿ ನರೇಂದ್ರ ಮೋದಿಯವರಿಗೆ 60 ವರ್ಷ ತುಂಬಿದಾಗ ಚಿತ್ರಿಸಿದ ಕಾರ್ಟೂನ್‌ನಿಂದ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ 2017ರಲ್ಲಿ ಟ್ವೀಟ್ ಮಾಡಿದ್ದಾರೆ.

ಈ ವ್ಯಂಗ್ಯಚಿತ್ರವು ಅಂತರ್ಜಾಲದಲ್ಲಿ ಹಲವು ವರ್ಷಗಳಿಂದ ಹರಿದಾಡುತ್ತಿವೆ ಮತ್ತು ಬೆನ್ ಗ್ಯಾರಿಸನ್ ಆ ವ್ಯಂಗ್ಯಚಿತ್ರಗಳನ್ನು ಬಿಡಿಸಿಲ್ಲ. ಬೆನ್ ಗ್ಯಾರಿಸನ್ ಅವರು ಭಾರತೀಯ ರಾಜಕೀಯದ ಬಗ್ಗೆ ಯಾವುದೇ ವ್ಯಂಗ್ಯಚಿತ್ರಗಳನ್ನು ಚಿತ್ರಿಸಲಿಲ್ಲ ಮತ್ತು ಅವರ ಸಹಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವ್ಯಂಗ್ಯಚಿತ್ರಗಳು ನಕಲಿ ಎಂದು ಸ್ಪಷ್ಟೀಕರಣವನ್ನು ನೀಡಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಾರ್ಚ್ 2016ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಅಮೆರಿಕಾದ ವ್ಯಂಗ್ಯಚಿತ್ರಕಾರ ಬೆನ್ ಗ್ಯಾರಿಸನ್ ರಚಿಸಿದ ವ್ಯಂಗ್ಯಚಿತ್ರವನ್ನು ಎಡಿಟ್ ಮಾಡಿ ಮೋದಿಯ ಮುಖವನ್ನು ಸೇರಿಸಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟಿಸಿ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights