FACT CHECK | ದೇವಸ್ಥಾನವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ಸುಳ್ಳು ಸುದ್ದಿ ಹಂಚಿಕೆ

ಮಸೀದಿ ಇರುವ ಜಾಗದಲ್ಲಿ ಹಿಂದೆ ದೇವಾಲಯವಿತ್ತು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. “ಏಷ್ಯಾದ ಮೊದಲ ಮಸೀದಿಯಲ್ಲಿ ದೇವಾಲಯವಾಗಿತ್ತು ಪಣವಿಡುವ ಭಗವಂತನ ಪಾದದ ಮೇಲಣ.. ಮಂದಿರವಲ್ಲೇ ಕಟ್ಟುವೆವು” ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

‘ಕೇಶವ ಬೀಜಾಡಿ’ ಎಂಬ ಫೇಸ್‌ಬುಕ್ ಬಳಕೆದಾರ “ಏಷ್ಯಾದ ಮೊದಲ ಮಸೀದಿ ಮುಂಚೆ ದೇವಾಲಯವಾಗಿತ್ತು. ಪಣವಿಡುವೆವು ಭಗವಂತನ ಪಾದದ ಮೆಲಾಣೆ.. ಮಂದಿರವಲ್ಲೇ ಕಟ್ಟುವೆವು” ಎಂದು ಪುರಾತನ ಮಸೀದಿಯ ವಿಡಿಯೋ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಯೂಟ್ಯೂಬ್ ಚಾನೆಲ್ ಗಳಲ್ಲಿ ಅಪ್‌ಲೋಡ್‌ ಮಾಡಿದ ಅದೇ ರೀತಿಯ ವೀಡಿಯೋ ಅವೃತ್ತಿಗಳು ಲಭ್ಯವಾಗಿವೆ. ಆ ವೀಡಿಯೋಗಳಲ್ಲಿ ಕಂಡುಬರುವ ಸ್ಥಳವನ್ನು ‘ಜೀನತ್ ಬಕ್ಷ್ ಮಸೀದಿ’ ಎಂದು ವಿವರಿಸಲಾಗಿದೆ. ಆ ಪ್ರಕಾರ  ಜೀನತ್ ಬಕ್ಷ್ ಮಸೀದಿ ಎಂದು ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ ಮತ್ತಷ್ಟು ಮಾಹಿತಿ ಲಭ್ಯವಾಗಿದೆ.

‘ಜೀನತ್ ಬಕ್ಷ್ ಮಸೀದಿ’ ಎಂಬ ಕೀವರ್ಡ್ ಬಳಸಿ ಸರ್ಚ್ ಮಾಡಿದಾಗ, ಅದು ಮಂಗಳೂರಿನ ಮಸೀದಿಯಾಗಿದ್ದು, ಅತಿ ಪ್ರಾಚೀನ ಮಸೀದಿಗಳಲ್ಲಿ ಒಂದಾಗಿದೆ..  ಕರ್ನಾಟಕ ಪ್ರವಾಸೋದ್ಯಮದ ಅಧಿಕೃತ ವೆಬ್ಸೈಟ್ನಲ್ಲಿ ಈ ಮಸೀದಿಯ ಕುರಿತ ವಿವರಗಳು ಲಭ್ಯವಾಗಿದೆ.

ಸರ್ಕಾರದ ವೆಬ್‌ಸೈಟ್‌ನಲ್ಲಿ ಹೇಳಿರುವಂತೆ “ಮಸ್ಜಿದ್ ಝೀನತ್ ಬಕ್ಷ್ ಮಂಗಳೂರಿನ ಬಂದರ್ ಪ್ರದೇಶದಲ್ಲಿದೆ. ಈ ಮಸೀದಿಯು ಪ್ರವಾದಿ ಮೊಹಮ್ಮದ್ ಅವರ ಜೀವನ ಕಥೆಗಳನ್ನು ಚಿತ್ರಿಸುತ್ತದೆ. ಕ್ರಿಸ್ತಶಕ 644 ರಲ್ಲಿ ಅರಬ್ ಮುಸ್ಲಿಂ ವ್ಯಾಪಾರಿಗಳಿಂದ ಇದು ಸ್ಥಾಪಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಈ ಮಸೀದಿಯು ತನ್ನ ಶುದ್ಧ ಭಾರತೀಯ ವಾಸ್ತುಶಿಲ್ಪದ ಶೈಲಿಯಿಂದಾಗಿ ಎಲ್ಲಾ ಮಸೀದಿಗಳನ್ನು ಮೀರಿಸುತ್ತದೆ. ಇದು ಬಹುಶಃ ಸಂಪೂರ್ಣವಾಗಿ ಮರದಿಂದ ಮಾಡಿದ ಕರ್ನಾಟಕದ ಏಕೈಕ ಮಸೀದಿಯಾಗಿದೆ. ಮಸೀದಿಯ ಮುಖ್ಯ ಮುಖ್ಯಾಂಶವೆಂದರೆ ತೇಗದಿಂದ ಮಾಡಿದ 16 ಕಂಬಗಳನ್ನು ಇದು ಒಳಗೊಂಡಿದೆ.

Fact Check: ಏಷ್ಯಾದ ಮೊದಲ ಮಸೀದಿ ಹಿಂದೆ ದೇಗುಲವಾಗಿತ್ತು ಎಂದ ವೈರಲ್‌ ವೀಡಿಯೋ ಹಿಂದಿನ ಸತ್ಯ ಇಲ್ಲಿದೆ!

ಒಟ್ಟಾರೆಯಾಗಿ ಹೇಳುವುದಾದರೆ, ಮಂಗಳೂರಿನಲ್ಲಿರುವ ಪ್ರಾಚೀನ ಮಸೀದಿಯ ವಿಡಿಯೋವನ್ನು ಹಂಚಿಕೊಂಡು ಈ ಮಸೀದಿ ಹಿಂದೆ ದೇವಾಲಯವಾಗಿತ್ತು ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಅಲ್ಲದೇ ಮುಸ್ಲಿಮರು ದೇವಾಲಯವನ್ನು ಸ್ವಾಧೀನ ಪಡಿಸಿ ಮಸೀದಿ ಮಾಡಿಕೊಂಡಿದ್ದಾರೆ ಎಂದು ಕೋಮು ದ್ವೇಷದ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ನರಹಂತಕ ವೀರಪ್ಪನ್ ಪುತ್ರಿ ವಿದ್ಯಾರಾಣಿ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ನಿಜ ! ಆದರೆ BJP ಪಕ್ಷದಿಂದಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights