FACT CHECK | BJP ನಾಯಕನ ಅಶ್ಲೀಲ ಫೋಟೋವನ್ನು ಡಿ.ಕೆ.ಶಿವಕುಮಾರದ್ದು ಎಂದು ತಪ್ಪಾಗಿ ಹಂಚಿಕೊಂಡ ಜಾತ್ಯಾತೀತ ಜನತಾದಳ ಯುವ ಘಟಕ ಹೆಸರಿನ ಫೇಸ್‌ಬುಕ್ ಪೇಜ್‌

ರಾಜ್ಯ ಯುವ ಘಟಕ ಜಾತ್ಯಾತೀತ ಜನತಾದಳ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು “ಯಾರಿರಬಹುದು ಕಾಮೆಂಟ್ ಬಾಕ್ಸ್ ನಿಮ್ಮದೇ..! ಸಿಡಿ ಶಿ….ಕುಮಾರನ ಸಂತತಿಗಳೇ ಹು ಶುರು ಮಾಡಿ ನೀವು HD ವಿಡಿಯೋ ರಿಲೀಸ್ ಮಾಡಿ ನಾವು FullHD ರಿಲೀಸ್ ಮಾಡ್ತೀವಿ … ಅಬ್ಬಬಾ ರುಚಿಕರ ಸಂಭಾಷಣೆ..ವಿಡಿಯೋ ತುಂಬಾ ಕಾಸ್ಟ್ಲಿ ಯಾರು ಕೇಳಬೇಡಿ ಅವರು ಬಿಟ್ಟರೆ ನಾವು ಬಿಡೋಣ ಈಗಲೇ ಬಿಟ್ಟರೆ ಏನು ಮಜ…ಬಿಡ್ರೋ ಬಿಡ್ರಿ ನೋಡೋಣ… ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

 

ಜೆಡಿಎಸ್‌ ಯುವ ಘಟಕದ ಫೇಸ್‌ಬುಕ್ ಪೇಜ್, ಡಿ.ಕೆ.ಶಿವಕುಮಾರ್‌  ಅವರನ್ನು ಹೋಲುವ ಅಶ್ಲೀಲ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಜೊತೆಗೆ ಇವರು ಯಾರಿರಬಹುದು ಊಹಿಸಿ ಎಂದು ಶೀರ್ಷಿಕೆಯನ್ನೂ ಸಹ ನೀಡಲಾಗಿದೆ.

ರಾಜ್ಯ ಯುವಘಟಕ-ಜಾತ್ಯಾತೀತ ಜನತಾದಳ ಎಂಬ ಹೆಸರಿಗೆ ಫೇಸ್‌ಬುಕ್‌ ಪೇಜ್‌ ಹಂಚಿಕೊಂಡಿರುವ ಈ ಪೋಸ್ಟ್‌ಗೆ ಕಾಮೆಂಟ್‌ ಮಾಡುತ್ತಿರುವ ನೂರಾರು ಜನ ಇದು ಡಿ.ಕೆ ಶಿವಕುಮಾರ್‌ ಇರಬಹುದು ಎನ್ನುತ್ತಿದ್ದು ಪೋಸ್ಟ್‌ ವೈರಲ್‌ ಆಗುತ್ತಿದೆ. ಹಾಗಿದ್ದರೆ, ಫೋಟೊದಲ್ಲಿ ಕಂಡುಬರುವ ವ್ಯಕ್ತಿ ನಿಜವಾಗಿಯೂ ಡಿ.ಕೆ.ಶಿವಕುಮಾರ್ ಅವರದ್ದೆ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೊವನ್ನು ಗೂಗಲ್ ಲೆನ್ಸ್‌ನಲ್ಲಿ ಸರ್ಚ್ ಮಾಡಿದಾಗ ಇದೇ ಚಿತ್ರವನ್ನು ಹೋಲುವ ಹಲವು ಪೋಸ್ಟ್‌ಗಳು ಲಭ್ಯವಾದವು.

ಮತ್ತಷ್ಟು ಗೂಗಲ್ ಸರ್ಚ್ ಮಾಡಿದಾಗ, 3 ನವೆಂಬರ್ 2019ರಲ್ಲಿ  democraticaccent.com ಎಂಬ ಸುದ್ದಿ ತಾಣ ಮಾಡಿದ ವರದಿಯೊಂದು ಲಭ್ಯವಾಗಿದೆ. ವರದಿಯ ಪ್ರಕಾರ, ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳ ಬಿಜೆಪಿ ಘಟಕದ ಅಧ್ಯಕ್ಷ ಗೋಪಾಲ್ ತಾಂಡೇಲ್ ಅವರು ಮಹಿಳೆಯೊಬ್ಬರೊಂದಿಗೆ ಇರುವ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

 

ಅಸಲಿಗೆ ಇದು ಡಿ.ಕೆ ಶಿವಕುಮಾರ್‌ಗೆ ಸಂಬಂಧಿಸಿದ ಫೋಟೋಗಳಲ್ಲ. ಬದಲಿಗೆ ಇದು ಬಿಜೆಪಿ ನಾಯಕ ಗೋಪಾಲ್‌ ತಂಡೇಲ್‌ ಫೋಟೋಗಳಾಗಿವೆ. ದ ಫೋಟೋಗಳು ಹೊರಬಿದ್ದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೂ ಸಹ ನೀಡಿದ್ದರು. ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

Daman-Diu BJP chief quits over video clip

ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾರವರೇ ಖುದ್ದು ಗೋಪಾಲ್‌ರವರ ರಾಜಿನಾಮೆಯನ್ನು ಸ್ವೀಕರಿಸಿದ್ದರು ಈಗ ಆ ಫೋಟೋಗಳನ್ನು ಡಿ.ಕೆ. ಶಿವಕುಮಾರ್‌ ಅವರದ್ದೇ ಎಂಬಂತೆ ಬಿಂಬಿಸಿ ಹರಿಬಿಡಲಾಗುತಿದ್ದು, ಇದೊಂದು ಸುಳ್ಳು ಸುದ್ದಿಯಾಗಿದೆ. ಈ ನಕಲಿ ಫೋಟೋಗಳನ್ನು ಹರಿಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.

ಕೊನೆ ಮಾತು :

ಡಿ.ಕೆ.ಶಿವಕುಮಾರ್ ಗೆ ಟಾಂಗ್ ಕೊಡಲು ಹೋಗಿ, ತಮ್ಮದೇ ಮೈತ್ರಿ ಪಕ್ಷದ(BJP) ನಾಯಕನ ಅಶ್ಲೀಲ ಫೋಟೋವನ್ನು ಹಂಚಿಕೊಂಡು ಜೆಡಿಎಸ್‌ ಯುವ ಘಟಕ ಮುಜುಗರಕ್ಕೆ ಒಳಗಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಜಸ್ಥಾನದಲ್ಲಿ ದಲಿತ ಯುವಕನನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಲಾಗಿದೆಯೇ ? ರಾಜಸ್ಥಾನದ ಪೊಲೀಸರು ಏನ್ ಹೇಳ್ತಾರೆ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights