FACT CHECK | 2024ರ ಲೋಕಸಭಾ ಚುನಾವಣೆ ವೇಳೆ ವ್ಯಕ್ತಿಯೊಬ್ಬ EVM ಯಂತ್ರದ ಮೇಲೆ ಇಂಕ್‌ ಸುರಿದು ಪ್ರತಿಭಟಿಸಿದ್ದು ನಿಜವೇ?

ಪ್ರತಿ ಚುನಾವಣೆ ಸಂದರ್ಭದಲ್ಲೂ ಇವಿಎಂಗಳ (Electronic Voting Machine) ವಿಶ್ವಾಸಾರ್ಹತೆ ಮತ್ತು ಭದ್ರತೆಯ ಬಗ್ಗೆ ವಿರೋಧ ಪಕ್ಷಗಳು ಮತ್ತು ಕೆಲವು ನಾಗರಿಕ ಸಮಾಜ ಗುಂಪುಗಳು ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಲೆ ಬಂದಿವೆ. ಆದರೂ EVM ಅನ್ನು ಚುನಾವಣಾ ಸುಧಾರಣೆಯ ಭಾಗವೆಂದು ಪರಿಗಣಿಸಲಾಗುತ್ತಿದೆ. ಪರ ವಿರೋಧದ ಚರ್ಚೆಯ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದ್ದು, ಮತದಾನ ಮಾಡಲು ಬಂದ ವ್ಯಕ್ತಿಯೊಬ್ಬ EVM ಯಂತ್ರದ ಮೇಲೆ ಇಂಕ್‌ಅನ್ನು ಸುರಿದು ಪ್ರತಿಭಟಿಸಿದ್ದಾನೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

“ನಾಗ್ಪುರದ ವ್ಯಕ್ತಿಯೊಬ್ಬ ಇವಿಎಂ ಮಿಷನ್‌ಗಳ ಮೇಲೆ ಇಂಕನ್ನು ಚೆಲ್ಲಿ, EVM ಬಳಕೆಯ ವಿರುದ್ದ ಘೋಷಣೆಗಳನ್ನು ಕೂಗಿದ್ದಾನೆ. ಆ ವ್ಯಕ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಲೋಕಸಭಾ ಚುನಾವಣೆ 2024 ಎಂಬ ಹ್ಯಾಷ್‌ಟ್ಯಾಗ್‌ ಮತ್ತು ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್‌ ವಿಡಿಯೋದಲ್ಲಿ ಉದ್ದನೆಯ ಕೂದಲಿನ ಬಿಳಿ ಅಂಗಿಯನ್ನು ಧರಿಸಿರುವ ವ್ಯಕ್ತಿಯೊಬ್ಬ ಮತಗಟ್ಟೆಯಲ್ಲಿ EVM ಯಂತ್ರಗಳ ಮೇಲೆ ಇಂಕನ್ನು ಎಸೆದು, EVM ಮುರ್ದಾಬಾದ್ ಎಂಬ ಘೋಷಣೆಯನ್ನು ಕೂಗುವು ವ್ಯಕ್ತಿಯನ್ನು ಪೊಲೀಸರು ವಶಪಡಿಸಿಕೊಳ್ಳುವ ದೃಶ್ಯಗಳನ್ನು ನೋಡಬಹುದು. 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದಿರುವ ಘಟನೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 21 ಅಕ್ಟೋಬರ್  2019 ರಂದು ANI ತನ್ನ ಸಾಮಾಜಿಕ ಮಧ್ಯಮದಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋ ಲಭ್ಯವಾಗಿದೆ.

ಕೀವರ್ಡ್‌ಗಳ ಮೂಲಕ ನಾವು ಹುಡುಕಾಟ ನಡೆಸಿದಾಗ ನಮಗೆ 2019ರಲ್ಲಿ “ಸುನಿಲ್ ಖಂಬೆ ಎಂಬಾತ ಇವಿಎಂ ಮೇಲೆ ಇಂಕನ್ನು ಎಸೆದರು” ಎಂದು ಹಲವಾರು ಮಾಧ್ಯಮಗಳು ವರದಿಯನ್ನು ಪ್ರಕಟಿಸಿದ್ದನ್ನು ನಾವು ಕಂಡಕಿಂಡೆವು. ದಿ ಪ್ರಿಂಟ್‌: ಮಹಾರಾಷ್ಟ್ರದ ಮತಗಟ್ಟೆಯಲ್ಲಿ ಮತದಾನ ಮಾಡುವಾಗ ಬಿಎಸ್‌ಪಿ ನಾಯಕ ಸುನೀಲ್ ಖಂಬೆ EVM ಮೇಲೆ ಶಾಯಿ ಎಸೆದಿದ್ದಾರೆ. ಎಂದು ವರದಿ ಮಾಡಿರುವುದನ್ನು ನೋಡಬಹುದು.

ಘಟನೆ ಕುರಿತು ಮಾಹಿತಿಗಾಗಿ ಮತ್ತಷ್ಟು ಗೂಗಲ್ ಸರ್ಚ್ ನಡೆಸಿದಾಗ, ಮಹಾರಾಷ್ಟ್ರದ ಮತಗಟ್ಟೆಯಲ್ಲಿ ಮತದಾನ ಮಾಡುವಾಗ ಬಿಎಸ್‌ಪಿ ನಾಯಕ ಸುನೀಲ್ ಖಂಬೆ ಇವಿಎಂ ಮೇಲೆ ಶಾಯಿ ಎಸೆದಿದ್ದಾರೆ. ಎಂದು ದಿ ಪ್ರಿಂಟ್‌ ಪ್ರಕಟಿಸಿರುವ ವರದಿ ನೋಡಬಹುದು.

NDTV, ABP News ಸೇರಿದಂತೆ ಹಲವು ಮಾಧ್ಯಮಗಳು 2019ರಲ್ಲಿ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಗೆ ಮತದಾನ ನಡೆಯುತ್ತಿರುವಾಗ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ನಾಯಕ ಸುನೀಲ್ ಖಂಬೆ ಮತಗಟ್ಟೆಯಲ್ಲಿ ಇವಿಎಂ ಮೇಲೆ ಶಾಯಿ ಎಸೆದು “EVM ಮುರ್ದಾಬಾದ್” ಮತ್ತು “EVM ನಹೀ ಚಲೇಗಾ” ಎಂಬ ಘೋಷಣೆಗಳನ್ನು ಕೂಗಿದ್ದಾರೆ. ನಂತರ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದಿದ್ದಾರೆ ಎಂದು ವರದಿಯಲ್ಲು ಉಲ್ಲೇಖಿಸಿವೆ.

ಒಟ್ಟಾರೆಯಾಗಿ ಹೇಳುವುದಾದರೆ, 2019ರಲ್ಲಿ ಮಹಾರಾಷ್ಟ್ರ ವಿಧಾನಸಭೆ ವೇಳೆ ನಡೆದ ಘಟನೆಯನ್ನು 2024ರ  ಲೋಕಸಭಾ ಚುನಾವಣೆಯಲ್ಲಿ ನಡೆದಿರುವ ಘಟನೆ ಎಂದು ತಪ್ಪಾಗಿ ಹಂಚಿಕೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹಿಂದೂಗಳ ಮತಾಂತರಕ್ಕೆ ಮುಸ್ಲಿಮರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights