FACT CHECK | ಬಿಜೆಪಿ 500 ಮತಗಳಿಗಿಂತಲೂ ಕಡಿಮೆ ಅಂತರದಲ್ಲಿ 30 ಸ್ಥಾನಗಳನ್ನು ಗೆದ್ದಿದೆ ಎಂಬ ವಾದ ನಿಜವೇ?

2024 ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಂದಿದ್ದು ಬಿಜೆಪಿ 240 ಸ್ಥಾನಗಳನ್ನು ಗೆದ್ದು 2024 ರ ಲೋಕಸಭೆ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರಪಕ್ಷಗಳು 293 ಸ್ಥಾನಗಳನ್ನು ಪಡೆದುಕೊಂಡು ಸರ್ಕಾರ ರಚನೆಗೆ ಸಜ್ಜಾಗಿದೆ.

ಮೇಲಿನ ಪೋಸ್ಟ್‌ನ ಲಿಂಕ್ ಇಲ್ಲಿ ನೋಡಬಹುದು
ಮೇಲಿನ ಪೋಸ್ಟ್‌ನ ಲಿಂಕ್ ಇಲ್ಲಿ ನೋಡಬಹುದು

ಈ ಸಂದರ್ಭದಲ್ಲಿ, 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 500 ಮತಗಳಿಗಿಂತಲೂ ಕಡಿಮೆ ಅಂತರದಲ್ಲಿ 30 ಸ್ಥಾನಗಳನ್ನು ಗೆದ್ದಿದೆ. 1000ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಈ ಸ್ಥಾನಗಳ ಫಲಿತಾಂಶವನ್ನು 3 ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ವಿಶ್ಲೇಷಿಸಬೇಕು. ಈ ರೀತಿಯ ಕಡಿಮೆ ಅಂತರದ ಗೆಲುವಿನಲ್ಲಿ ಕೈವಾಡದ ಸಾಧ್ಯತೆಗಳು ಇರುತ್ತವೆ ಎಂದು ಹೇಳಿದ್ದ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ರಾಜೀನಾಮೆ ನೀಡಿದ್ದರು. ಒಂದು ವೇಳೆ ಪ್ರಧಾನಿ ಮೋದಿ ಅವರ ಆದೇಶದ ಮೇರೆಗೆ ಈ ಕೈ ಚಳಕ ನಡೆದಿದ್ದರೆ ಅಸಲಿ ಸ್ಥಾನ ಗಳಿಕ ಸಂಖ್ಯೆಗಳು ಎನ್‌ಡಿಎಗೆ 240-130= 110 ಸ್ಥಾನಗಳು ಇರಬೇಕಿತ್ತು’ ಎಂದು ಈ ಪೋಸ್ಟ್‌ಗಳಲ್ಲಿ ಬರೆಯಲಾಗಿತ್ತು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮೊದಲಿಗೆ ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಅನ್ನು ಸರ್ಚ್ ಮಾಡಿದಾಗ, ಎಲ್ಲಾ 543 ಸಂಸದೀಯ ಕ್ಷೇತ್ರಗಳ ಫಲಿತಾಂಶಗಳನ್ನು ವಿಶ್ಲೇಷಿಸಿದ ಪಟ್ಟಿ ಲಭ್ಯವಾಗಿದೆ.

ಶಿವಸೇನೆಯ ರವೀಂದ್ರ ದತ್ತಾರಾಮ್ ವೈಕರ್ ಅವರು ಮುಂಬೈ ವಾಯುವ್ಯ ಕ್ಷೇತ್ರದಲ್ಲಿ 48 ಮತಗಳ ಕಡಿಮೆ ಅಂತರದಲ್ಲಿ ಗೆದ್ದಿರುವುದನ್ನು ನಾವು ಗಮನಿಸಿದ್ದೇವೆ. ವೈಕರ್ ಒಟ್ಟು 4,52,644 ಮತಗಳನ್ನು ಪಡೆದರೆ, ಹಿಂದುಳಿದ ಅಭ್ಯರ್ಥಿ ಶಿವಸೇನಾ (ಯುಬಿಟಿ) ಅಮೋಲ್ ಗಜಾನನ್ ಕೀರ್ತಿಕರ್ 4,52,596 ಮತಗಳನ್ನು ಪಡೆದರು.

ನಂತರ ಬಿಜೆಪಿಯಿಂದ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ಪ್ರಕಾರ ಒಡಿಶಾದ ಜಾಜ್‌ಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರವೀಂದ್ರ ನಾರಾಯಣ ಬೆಹೆರಾ ಅವರು 1,587 ಮತಗಳ ಅಂತರದಿಂದ ಗೆದ್ದಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ ಅತ್ಯಂತ ಕಡಿಮೆ ಅಂತರ ಇದಾಗಿದೆ.

ಈ ಕುರಿತಾಗಿ ಮತ್ತಷ್ಟು ಪರಿಶೀಲನೆ ನಡೆಸಿದಾಗ ಬಿಜೆಪಿ ಗೆಲುವು ಸಾಧಿಸಿದ 240 ಸ್ಥಾನಗಳಲ್ಲಿ ಕೇವಲ 7 ಅಭ್ಯರ್ಥಿಗಳು ಮಾತ್ರ 5 ಸಾವಿರಕ್ಕೂ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ ಎಂಬುದು ಸ್ಪಷ್ಟವಾಗಿದೆ

 

ಕ್ರಮ ಸಂಖ್ಯೆ ಲೋಕಸಭಾ ಕ್ಷೇತ್ರ ವಿಜೇತ ಅಭ್ಯರ್ಥಿ ಒಟ್ಟು ಮತಗಳು ಅಂತರ
1 ಜೈಪುರ ರಬೀಂದ್ರ ನಾರಾಯಣ ಬೆಹೆರಾ 534239 1587
2 ಜೈಪುರ ಗ್ರಾಮೀಣ ರಾವ್ ರಾಜೇಂದ್ರ ಸಿಂಗ್ 617877 1615
3 ಕಂಕರ್ ಭೋಜರಾಜ್ ನಾಗ್ 597624 1884
4 ಫಾರೂಖಾಬಾದ್ ಮುಖೇಶ್ ರಜಪೂತ್ 487963 2678
5 ಬನ್ಸ್‌ಗಾವ್ ಕಮಲೇಶ್ ಪಾಸ್ವಾನ್‌ 428693 3150
6 ಫೂಲ್‌ಪುರ್ ಪ್ರವೀಣ್ ಪಟೇಲ್ 452600 4332
7 ಮಹಬೂಬ್‌ ನಗರ ಅರುಣಾ ಡಿ. ಕೆ 510747 4500

 

ಒಟ್ಟಾರೆಯಾಗಿ ಹೇಳುವುದಾದರೆ, 2024 ರ ಲೋಕಸಭೆ ಚುನಾವಣೆಯಲ್ಲಿ  8 ಬಿಜೆಪಿ ಅಭ್ಯರ್ಥಿಗಳು 10,000ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ಜಯಗಳಿಸಿದ್ದು, 14 ಅಭ್ಯರ್ಥಿಗಳು 20 ಸಾವಿರಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನು, ಕೇವಲ 7 ಬಿಜೆಪಿ ಅಭ್ಯರ್ಥಿಗಳು 5 ಸಾವಿರಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದ ಅತಿ ಕಡಿಮೆ ಅಂತರ 1,587 ಮತಗಳು.ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕಂಗನಾ ಕೆನ್ನೆಗೆ ಹಸ್ತದ ಗುರುತು ಬರುವಂತೆ ಕಪಾಳಮೋಕ್ಷ ಮಾಡಲಾಗಿತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights