FACT CHECK | ಬಾಂಗ್ಲಾದಲ್ಲಿ ಹಿಂದೂ ಶಿಬಿರದ ಮೇಲೆ ಮುಸ್ಲಿಮರಿಂದ ಬಾಂಬ್ ದಾಳಿ ಎಂದು ಸುಳ್ಳು ಸುದ್ದಿ ಹಂಚಿಕೆ

ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ಬಳಿಕ, ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯವಾದ ಹಿಂದೂಗಳ ವಿರುದ್ಧ ಹಿಂಸಾಚಾರ ತಾರಕಕ್ಕೇರಿದೆ ಎಂಬ ಹೇಳಿಕೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳು ತುಂಬಿ ಹೋಗಿವೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರಕ್ಕೆ ಸಾಕ್ಷಿ ಎಂಬಂತೆ ಬಾಂಗ್ಲಾದೇಶದಲ್ಲಿ ಹಿಂದೂ ನಿರಾಶ್ರಿತರ ಶಿಬಿರದ ಮೇಲೆ ಬಾಂಗ್ಲಾ ಮುಸ್ಲಿಮ್ಮರು ಬಾಂಬ್ ಎಸೆದ ಪರಿಣಾಮ ನೂರಾರು ಹಿಂದೂ ಮಹಿಳೆಯರು ಮತ್ತು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಎಕ್ಸ್‌ ನಲ್ಲಿ ಹಂಚಿಕೊಳ್ಳಲಾದ  ವಿಡಿಯೋದಲ್ಲಿ ಅನೇಕ ಮಹಿಳೆಯರು ರಸ್ತೆಯ ಮೇಲೆ ಬಿದ್ದಿದ್ದು ಜನರು ಅವರನ್ನು ಎಬ್ಬಿಸಲು  ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಆದರು ಹಲವು ಮಹಿಳೆಯರು ನಿತ್ರಾಣರಾಗಿದ್ದು ನಿಲ್ಲಮೂ ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಹಾಗಿದ್ದರೆ ನಿಜವಾಗಿಯೂ ಬಾಂಗ್ಲಾದೇಶದಲ್ಲಿ ಹಿಂದೂ ನಿರಾಶ್ರಿತರ ಶಿಬಿರದ ಮೇಲೆ ಮುಸ್ಲಿಮರು ಬಾಂಬ್ ದಾಳಿ ನಡೆಸಿದ್ದಾರೆಯೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಬಾಂಗ್ಲಾದೇಶದಲ್ಲಿ ಹಿಂದೂ ನಿರಾಶ್ರಿತರ ಶಿಬಿರದ ಮೇಲೆ ಮುಸ್ಲಿಮರು ಬಾಂಬ್ ದಾಳಿ ನಡೆಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋಗಳನ್ನು ಪರಿಶೀಲಿಸಲು ಅದರ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜುಲೈ 7, 2024 ರಂದು ಸುಮನ್ ರಾಯ್ ಮೋನಿ ಎಂಬ ಸಾಮಾಜಿಕ ಮಾಧ್ಯಮದ ಬಳಕೆದಾರರು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿರುವುದು ದೇ ವಿಡಿಯೋವೊಂದು ಲಭ್ಯವಾಗಿದೆ.

Ratha Yatra is being celebrated in Bogra on Sunday, July 7, 2024. Photo: Bangla Tribune

‘ಬೋಗ್ರಾ ಸೆಜ್‌ಗರಿಯಲ್ಲಿ ಸನಾತನ ಧಾರ್ಮಿಕ ರಥಯಾತ್ರೆ ನಡೆಯುತ್ತಿದ್ದಾರೆ ವಿದ್ಯುತ್ ಅವಘಡದಿದಾಗಿ ದುರ್ಘಟನೆ ನಡೆದಿದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಬೋಗ್ರಾದ ಸದರ್ ಉಪಜಿಲಾದಲ್ಲಿ ರಥಯಾತ್ರೆಯ ಸಂದರ್ಭದಲ್ಲಿ ಐದು ಜನರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ, ಕನಿಷ್ಠ 25 ಮಂದಿ ಗಾಯಗೊಂಡಿದ್ದಾರೆ, ಕೆಲವರು ಗಂಭೀರರಾಗಿದ್ದಾರೆ ಎಂದು ವರದಿ ಮಾಡಿದೆ. ಜುಲೈ 7 ರಂದು ಸಂಜೆ 5:30 ರ ಸುಮಾರಿಗೆ ಸೆಜ್‌ಗರಿ ಅಮ್ತಾಲಿ ಮೋರ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ.

Electrocution During Rath Yatra in Bogura, Bangladesh: 5 Dead, 30 Injured

ಸಂಜೆ 5 ಗಂಟೆಗೆ ಸೆಯುಜ್‌ಗರಿ ಇಸ್ಕಾನ್ ದೇವಸ್ಥಾನದಿಂದ ಹೊರಟ ರಥಕ್ಕೆ ಸ್ಟೀಲ್ ಟಾಪ್‌ ಅಳವಡಿಲಾಗಿತ್ತು, ಹೈವೋಲ್ಟೇಜ್ ವಿದ್ಯುತ್ ತಂತಿಗೆ ತಗುಲಿ ತಂತಿಗಳು ಉರಿಯಲಾರಂಭಿಸಿತು  ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

বগুড়ায় রথযাত্রায় বিদ্যুৎস্পৃষ্ট হয়ে পাঁচজনের মৃত্যু, আহত ২৫

ಅದೇ ಸುದ್ದಿಯನ್ನು bdnews24Protho MaloDhaka Tribune, ಮತ್ತು The Daily Star. ನಂತಹ ಅನೇಕ ವಿಶ್ವಾಸಾರ್ಹ ಮಾಧ್ಯಮಗಳು ವರದಿ ಮಾಡಿವೆ. ಈ ಎಲ್ಲಾ ಆಧಾರಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ರಥಯಾತ್ರೆ ವೇಳೆ ಸಂಭವಿಸಿದ ವಿಧ್ಯುತ್ ಅವಘದಿಂದ ಸಂಭವಿಸಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಬೋಗ್ರಾದ ಸೆಯುಜ್‌ಗರಿ ಪ್ರದೇಶದಲ್ಲಿ ರಥೋತ್ಸವದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಐವರು ಸಾವನ್ನಪ್ಪಿ ಮತ್ತು ಸುಮಾರು 50 ಮಂದಿ ಗಾಯಗೊಂಡಿದ್ದ ಹಳೆಯ ಘಟನೆಯ ವಿಡಿಯೋವನ್ನು ಹಂಚಿಕೊಂಡು, ಬಾಂಗ್ಲಾದೇಶದ ಹಿಂದೂ ಶಿಬಿರದ ಮೇಲೆ ಮುಸ್ಲಿಮ್ಮರು ಬಾಂಬ್ ದಾಳಿ ನಡೆಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ತಿನ್ನಿರಿ : FACT CHECK | ಬಾಂಗ್ಲಾದಲ್ಲಿ ಹಿಂದೂ ಮಹಿಳೆಯನ್ನು ಅಪಹರಿಸುವ ದೃಶ್ಯ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights