FACT CHECK | ವಿಜ್ಞಾನಿಯೊಬ್ಬರು ಬಾಹ್ಯಾಕಾಶದಿಂದ ಜಿಗಿದು ಭೂಮಿಯನ್ನು ತಲುಪಿದ್ದಾರೆ ಎಂಬುದು ನಿಜ ಆದರೆ ಆವರು ಆಸ್ಟ್ರೇಲಿಯಾದವರಲ್ಲ!

ಆಸ್ಟ್ರೇಲಿಯಾದ ಖಗೋಳ ವಿಜ್ಞಾನಿಯೊಬ್ಬರು ಬಾಹ್ಯಾಕಾಶದಿಂದ ಜಿಗಿದು ಭೂಮಿಯನ್ನು ತಲುಪಿದ್ದಾರೆ ಎಂಬಂತೆ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಎಕ್ಸ್ ನಲ್ಲಿ ಕಂಡುಬಂದಿರುವ ಈ ಪೋಸ್ಟ್ ನಲ್ಲಿ “ಆಸ್ಟ್ರೇಲಿಯಾದ ಖಗೋಳಶಾಸ್ತ್ರಜ್ಞ 1,28,000 ಅಡಿಗಳಷ್ಟು ಬಾಹ್ಯಾಕಾಶದಿಂದ ಜಿಗಿದು ಭೂಮಿಯನ್ನು ತಲುಪುತ್ತಾನೆ … 1236 ಕಿ.ಮೀ. 4 ನಿಮಿಷ 5 ಸೆಕೆಂಡ್‌ಗಳಲ್ಲಿ ಪ್ರಯಾಣ ಮುಗಿಸಿದೆ… ಭೂಮಿ ಚಲಿಸುತ್ತಿರುವುದನ್ನು ಅವರು ಸ್ಪಷ್ಟವಾಗಿ ನೋಡಿದ್ದಾರೆ… ಅದ್ಭುತವಾದ ವಿಡಿಯೋ, ಇದನ್ನು ನೋಡಿ ಮತ್ತು ದಯವಿಟ್ಟು ನಿಮ್ಮ ಮಕ್ಕಳಿಗೆ ತೋರಿಸಿ” ಎಂದಿದೆ. ಹಲವು ಎಕ್ಸ್‌ ಖಾತೆ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಫೇಸ್‌ಬುಕ್‌ನ ಹಲವು ಬಳಕೆದಾರರು ಇದೇ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವು ವರದಿಗಳು ಲಭ್ಯವಾಗಿವೆ.

15 ಅಕ್ಟೋಬರ್, 2012 ಆನ್‌ ಡಿಮ್ಯಾಂಡ್ ನ್ಯೂಸ್‌ ಯೂಟ್ಯೂಬ್‌ ಚಾನೆಲ್ ಪ್ರಕಟಿಸದ ವಿಡಿಯೋದಲ್ಲಿ “Space jump: Felix Baumgartner describes his record-breaking skydive” ಶೀರ್ಷಿಕೆಯಡಿಯಲ್ಲಿ ಫೆಲಿಕ್ಸ್ ಬಾಮ್‌ಗಾರ್ಟ್ನರ್ ಎಂಬವರು ಬಾಹ್ಯಾಕಾಶದಿಂದ ಸ್ಕೈಡೈವಿಂಗ್‌ ಮಾಡಿದ್ದ ಬಗ್ಗೆ ಇದರಲ್ಲಿ ಹೇಳಲಾಗಿದೆ. ಈ ವಿಡಿಯೋವನ್ನು ಕೂಲಂಕಷವಾಗಿ ಪಪರಿಶೀಲಿಸಿದಾಗ ಇದು ವೈರಲ್‌ ವಿಡಿಇಯೋಗೆ ಸಾಆಮ್ಯತರ ಇರುವಂತೆ ಕಂಡುಬಂದಿದೆ. ಇದನ್ನು ಆಧಾರವಾಗಿಟ್ಟುಕೊಂಡು ಮತ್ತಷ್ಟು ಪರಿಶೀಲಿಸಿದಾಗ ಮಾಹಿತಿ ಲಭ್ಯವಾಗಿದೆ.

ಅಕ್ಟೋಬರ್ 14, 2022ರಂದು ರೆಡ್ ಬುಲ್‌ ಯೂಟ್ಯೂಬ್‌ ಚಾನೆಲ್ ಪ್ರಕಟಿಸಿದ ವಿಡಿಯೋದಲ್ಲಿ “I Jumped From Space (World Record Supersonic Freefall)” ಶೀರ್ಷಿಕೆಯಿದ್ದು ಫೆಲಿಕ್ಸ್ ಬಾಮ್‌ಗಾರ್ಟ್ನರ್ ಅವರು ಬಾಹ್ಯಾಕಾಶದಿಂದ ನೆಗೆದ ಬಗ್ಗೆ ಮಾಹಿತಿ ಇದೆ. ಈ ವಿಡಿಯೋದ ವಿವರಣೆಯಲ್ಲಿ, “ಬಾಹ್ಯಾಕಾಶದಿಂದ ಜಿಗಿಯಲು *ನಿಜವಾಗಿ* ಏನನಿಸುತ್ತದೆ? 2012 ರಲ್ಲಿ ಫೆಲಿಕ್ಸ್ ಬೌಮ್ಗಗರ್ಟ್ನರ್ ಅವರು ಹೀಲಿಯಂ ಬಲೂನ್ ಅನ್ನು ವಾಯುಮಂಡಲಕ್ಕೆ ತೆಗೆದುಕೊಂಡು ವಿಶೇಷವಾಗಿ ತಯಾರಿಸಿದ ಬಾಹ್ಯಾಕಾಶ ಸೂಟ್‌ನಲ್ಲಿ ಭೂಮಿಗೆ ವಾಪಾಸಾದರು. ಫ್ರೀ ಫಾಲ್‌ನಲ್ಲಿ ಅವರು ಶಬ್ದದ ವೇಗವನ್ನು ಬೇದಿಸಿ ಭೂಮಿಗೆ ಪ್ರವೇಶಿಸಿದರು. ಈ ವೇಳೆ ಅವರು ತಿರುಗಿದ್ದು ಇಡೀ ಇಡೀ ರೆಡ್ ಬುಲ್ ಸ್ಟ್ರಾಟೋಸ್ ಮಿಷನ್‌ಗೆ ಬೆದರಿಕೆ ಹಾಕಿತು… ಫೆಲಿಕ್ಸ್ ಅವರು ಸಾಧನೆಯನ್ನು ಪ್ರತಿಬಿಂಬಿಸುತ್ತಾರೆ ಮತ್ತು ಬಾಹ್ಯಾಕಾಶದಿಂದ ಜಿಗಿಯಲು ಏನ್ನಿಸಿತು ಎಂಬುದನ್ನು ನಿಜವಾಗಿ ಹಂಚಿಕೊಳ್ಳುತ್ತಾರೆ” ಎಂದಿದೆ.

ಫೆಲಿಕ್ಸ್ ಬಾಮ್‌ಗಾರ್ಟ್ನರ್ ಅವರ ಐತಿಹಾಸಿಕ ನೆಗೆತಕ್ಕೆ 10ವರ್ಷ ಆದ ಬಗ್ಗೆ ಸಿಎನ್‌ಎನ್‌ ಅಕ್ಟೋಬರ್ 14, 2022ರಂದು ವರದಿಯನ್ನು ಪ್ರಕಟಿಸಿದ್ದು, ಅವರ ಬಾಹ್ಯಾಕಾಶ ನೆಗೆತದ ಬಗ್ಗೆ ಮೆಲುಕು ಹಾಕಿದೆ.

Fact Check: ಆಸ್ಟ್ರೇಲಿಯನ್‌ ಖಗೋಳ ವಿಜ್ಞಾನಿ ಬಾಹ್ಯಾಕಾಶದಿಂದ ಜಿಗಿದರು ಎನ್ನುವ ಹೇಳಿಕೆ ಹಿಂದಿನ ನಿಜಾಂಶ ಏನು?

ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತನ್ನ ವೆಬ್‌ ಸೈಟ್ ನಲ್ಲಿ ನೀಡಿದ ಲೇಖನದಲ್ಲಿ, “ಆಸ್ಟ್ರಿಯಾದ ಸ್ಕೈಡೈವರ್ ಫೆಲಿಕ್ಸ್ ಬಾಮ್‌ಗಾರ್ಟ್ನರ್ 38,969.4 ಮೀಟರ್ ಎತ್ತರದಿಂದ ಪ್ಯಾರಾಚೂಟ್ ಜಿಗಿತವನ್ನು ಪೂರ್ಣಗೊಳಿಸಿದ ಮಹತ್ವದ ಕ್ಷಣವನ್ನು ವೀಕ್ಷಿಸಲು ಅಭೂತಪೂರ್ವ ಎಂಟು ಮಿಲಿಯನ್ ಜನರು 14 ಅಕ್ಟೋಬರ್ 2012 ರಂದು ಯೂಟ್ಯೂಬ್‌ ವೀಕ್ಷಣೆ ಮಾಡಿದ್ದಾರೆ. ಈ ಮೂಲಕ ಎಂಟು ವಿಶ್ವ ದಾಖಲೆಗಳನ್ನು ಮತ್ತು ಕೇವಲ ಮೂರು ಗಂಟೆಗಳ ಅಂತರದಲ್ಲಿ ಬಾಹ್ಯಾಕಾಶದ ಧ್ವನಿ ತಡೆಗೋಡೆಯನ್ನು ಮುರಿದಿದ್ದಾರೆ” ಎಂದಿದೆ.

Fact Check: ಆಸ್ಟ್ರೇಲಿಯನ್‌ ಖಗೋಳ ವಿಜ್ಞಾನಿ ಬಾಹ್ಯಾಕಾಶದಿಂದ ಜಿಗಿದರು ಎನ್ನುವ ಹೇಳಿಕೆ ಹಿಂದಿನ ನಿಜಾಂಶ ಏನು?

ಇದರೊಂದಿಗೆ ಫೆಲಿಕ್ಸ್ ಬಾಮ್‌ಗಾರ್ಟ್ನರ್ ರಾಷ್ಟ್ರೀಯತೆಯನ್ನು ಪರಿಶೀಲಿಸಲು ಅವರ ವೆಬ್‌ ಸೈಟ್ ವೀಕ್ಷಿಸಿದ್ದೇವೆ. ಇದರಲ್ಲಿ ಅವರ ವಿವರಗಳನ್ನು ನೀಡಲಾಗಿದ್ದು, ಅವರು ಆಸ್ಟ್ರಿಯನ್‌ ಪ್ರಜೆ ಎಂದು ಉಲ್ಲೇಖಿಸಿರುವುದನ್ನು ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಆಸ್ಟ್ರೇಲಿಯಾದ ಖಗೋಳ ವಿಜ್ಞಾನಿಯೊಬ್ಬರು ಬಾಹ್ಯಾಕಾಶದಿಂದ ಜಿಗಿದು ಭೂಮಿಯನ್ನು ತಲುಪಿದ್ದಾರೆ ಎಂಬ ವಿಡಿಯೋ 2012ರದ್ದಾಗಿದ್ದು, ಅವರು ಆಸ್ಟ್ರೇಲಿಯಾದವರಲ್ಲ ಮತ್ತು ಆಸ್ಟ್ರಿಯನ್ ಪ್ರಜೆ ಫೆಲಿಕ್ಸ್ ಬಾಮ್‌ಗಾರ್ಟ್ನರ್ ಎಂಬವರಾಗಿದ್ದಾರೆ ಎಂದು ಗೊತ್ತಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಅತ್ಯಾಚಾರ ನಡೆದ ಕೋಲ್ಕತ್ತಾದ ಟ್ರೈನಿ ವೈದ್ಯೆಯ ತಂದೆಯ ವಿಡಿಯೋ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights