FACT CHECK | ಭಾರತೀಯ ಸೇನೆಗೆ 2500 ಬುಲೆಟ್ ಪ್ರೂಫ್ ಸ್ಕಾರ್ಪಿಯೋ ವಾಹನಗಳ ಖರೀದಿಗೆ ರತನ್ ಟಾಟಾ ದೇಣಿಗೆ ನೀಡಿದ್ರಾ?
ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ನೀಡಿದ ದೇಣಿಗೆಯಿಂದ ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ 2500 ಗುಂಡು ನಿರೋಧಕ ವಾಹನಗಳನ್ನು ಖರೀದಿಸಿದೆ ಎಂಬ ಪೋಸ್ಟರ್ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಹಾಗಿದ್ದರೆ ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ಭಾರತೀಯ ಸೇನೆಗೆ ದೇಣಿಗೆ ನೀಡಿರುವುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ,ಈ ಕುರಿತು ಪ್ರಕಟವಾದ ಯಾವುದೇ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ. ಇದರ ಹೊರತಾಗಿಯೂ ರತನ್ ಟಾಟಾ ಅಥವಾ ಟಾಟಾ ಗ್ರೂಪ್ನವರು ದೇಣಿಗೆಯನ್ನು ನೀಡಿದ್ದರೆ, ಅದು ಖಂಡಿತವಾಗಿಯೂ ದೊಟ್ಟ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು, ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿತ್ತು. ಹೆಚ್ಚುವರಿಯಾಗಿ, ರತನ್ ಟಾಟಾ ಮತ್ತು ಟಾಟಾ ಗ್ರೂಪ್ನ ಅಧಿಕೃತಸಾಮಾಜಿಕಮಾಧ್ಯಮಗಳಲ್ಲಿವೈರಲ್ ಪೋಸ್ಟ್ರ್ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಕುರಿತು ಮತ್ತಷ್ಟು ಸರ್ಚ್ ಮಾಡಿದಾಗ ವೈರಲ್ ಪೋಸ್ಟ್ರ್ನಲ್ಲಿರುವ ಚಿತ್ರಗಳು 2016ರಲ್ಲಿ ಸುಳ್ಳು ಮಾಹಿತಿಯೊಂದಿಗೆ ಪ್ರಸಾರವಾಗುತ್ತಿರುವುದು ಪತ್ತೆಯಾಗಿದೆ.
ವೈರಲ್ ಪೋಸ್ಟ್ನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು Google ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 2012ರ ಏಪ್ರಿಲ್ 01 ರಂದು ‘ಇಂಡಿಯನ್ ಆಟೋಸ್ ಬ್ಲಾಗ್’ ಹೆಸರಿನ ವೆಬ್ಸೈಟ್ನಲ್ಲಿ ಪ್ರಕಟವಾದ ಲೇಖನ ಲಭ್ಯವಾಗಿದೆ.. ಈ ಲೇಖನವು ವೈರಲ್ ಪೋಸ್ಟ್ನ ಒಂದೆರಡು ಚಿತ್ರಗಳನ್ನು ಒಳಗೊಂಡಿದೆ. ಈ ಲೇಖನದ ಪ್ರಕಾರ, ವೈರಲ್ ಚಿತ್ರಗಳು 2012 ರಲ್ಲಿ DEFEXPO ನಲ್ಲಿ ಪ್ರದರ್ಶಿಸಲಾದ ಲೆವೆಲ್-3 ರಕ್ಷಣೆಯನ್ನು ನೀಡುವ ಸ್ಕಾರ್ಪಿಯೋ ಮಹೀಂದ್ರ ರಕ್ಷಕ್ ಪ್ಲಸ್ ಅನ್ನು ತೋರಿಸುತ್ತವೆ.

2019 ರಲ್ಲಿ ಪ್ರಕಟವಾದ ‘ಅಮರ್ ಉಜಾಲಾ’ ಸುದ್ದಿ ವರದಿಯ ಪ್ರಕಾರ , ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗಳಿಗೆ ಬುಲೆಟ್ ಪ್ರೂಫ್ ಸ್ಕಾರ್ಪಿಯೋ (ಮಹೀಂದ್ರ ರಕ್ಷಕ್ ಪ್ಲಸ್) ವಾಹನಗಳನ್ನು ಒದಗಿಸಲಾಗಿದೆ. ಹಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯು ಮಹೀಂದ್ರ ರಕ್ಷಕ್ ಪ್ಲಸ್ ವಾಹನಗಳ ಬಳಕೆಯ ಚಿತ್ರಗಳನ್ನು ಹಂಚಿಕೊಂಡಿದೆ. 2023ರ ಜನವರಿ 12 ರಂದು ಪ್ರಕಟವಾದ ‘ದಿ ಎಕನಾಮಿಕ್ ಟೈಮ್ಸ್’ ವರದಿಯು “ಭಾರತೀಯ ಸೇನೆಯು ಸುಮಾರು 1500 ಮಹೀಂದ್ರ ಸ್ಕಾರ್ಪಿಯೋ ಕ್ಲಾಸಿಕ್ SUV ಗಳನ್ನು ಖರೀದಿಸಿದೆ”. ಎಂದು ವರದಿಯಾಗಿದೆ. ಮಹೀಂದ್ರಾ ಆಟೋಮೋಟಿವ್ನ ಟ್ವೀಟ್ ಮೂಲಕನಿಖರವಾದ ಮಾಹಿತಿಯನ್ನು ನೀಡಿದೆ.
ಮಹೀಂದ್ರಾ ಆಟೋಮೋಟಿವ್ನ ಅಧಿಕೃತ ಟ್ವಿಟರ್ನ್ನು ಪರಿಶೀಲಿಸಿದಾಗ ಭಾರತೀಯ ಸೇನೆಯು ಇತ್ತೀಚೆಗೆ 2,500 ಬುಲೆಟ್ಪ್ರೂಫ್ ಸ್ಕಾರ್ಪಿಯೋಗಳನ್ನು ಖರೀದಿಸಿದೆ ಎಂಬ ಯಾವುದೇ ಪೋಸ್ಟ್ರ್ಗಳು ಕಂಡುಬಂದಿಲ್ಲ. ಭಾರತೀಯ ಸೇನೆಯು ನಿಜವಾಗಿಯೂ ಅಂತಹ ಆದೇಶವನ್ನು ಹೊರಡಿಸಿದ್ದರೆ ಅದು ಖಂಡಿತವಾಗಿಯೂ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿತ್ತು. ಆದ್ದರಿಂದ ಭಾರತೀಯ ಸೇನೆಯು ಇತ್ತೀಚೆಗೆ 2500 ಬುಲೆಟ್ ಪ್ರೂಫ್ ಸ್ಕಾರ್ಪಿಯೋಗಳನ್ನು ಖರೀದಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ರತನ್ ಟಾಟಾ ಖರೀದಿಗೆ ಹಣವನ್ನು ನೀಡಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ರತನ್ ಟಾಟಾ ನೀಡಿದ ದೇಣಿಗೆಯಿಂದ ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ 2500 ಬುಲೆಟ್ ಪ್ರೂಫ್ ಸ್ಕಾರ್ಪಿಯೋ ವಾಹನಗಳನ್ನು ಖರೀದಿಸಿದೆ ಎಂಬ ವೈರಲ್ ಪೋಸ್ಟ್ರ್ನ ಮಾಹಿತಿ ಸುಳ್ಳು. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಪ್ರಧಾನಿ ಮೋದಿಯ ಆತಿಥ್ಯ ಎಂದು 2019ರ ಸಂಬಂಧವಿಲ್ಲದ ಫೋಟೊ ಹಂಚಿಕೆ

