FACT CHECK | ಉಪ ಮುಖ್ಯಮಂತ್ರಿ DK Shivakumar ಅಮೆರಿಕ ಪ್ರವಾಸದ ಬಗ್ಗೆ ಸುಳ್ಳುಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳು

“ನವೆಂಬರ್‌ ̧5 2024ಕ್ಕೆ ಅಮೆರಿಕ ಅಧ್ಯಕ್ಷರ ಆಯ್ಕೆಯ ಐತಿಹಾಸಿಕ ಚುನಾವಣೆ ನಡೆಯಲಿದೆ. ಡೆಮಾಕ್ರೆಟಿಕ್‌ ಪಕ್ಷದಿಂದ ಭಾರತೀಯ ಮೂಲದ ಕಮಲಾ ಹ್ಯಾರೀಸ್‌‌ ಅಭ್ಯರ್ಥಿಯಾಗಿದ್ದರೆ ರಿಪಬ್ಲಿಕನ್‌ ಪಕ್ಷದಿಂದ ಡೊನಾಲ್ಡ್‌ ಟ್ರಂಪ್‌ 2ನೇ ಸಲ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗ ಕಮಲಾ ಹ್ಯಾರಿಸ್‌ ಪರವಾಗಿ ಪ್ರಚಾರ ಮಾಡಲು ಅನಿವಾಸಿ ಭಾರತೀಯರು, ಅಮೆರಿಕದಲ್ಲಿರುವ ಕನ್ನಡಿಗರ ಮತ ಸೆಳೆಯಲು ಡಿ.ಕೆ ಶಿವಕುಮಾರ್‌  ಅಮೆರಿಕಾಗೆ ತೆರಳಿದ್ದಾರೆ.

ಈ ನಡುವೆ ಕಮಲಾ ಹ್ಯಾರಿಸ್ ಅವರ ಆಹ್ವಾನದ ಮೇರೆಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಮೆರಿಕಕ್ಕೆ ತೆರಳಿದ್ದಾರೆ ಎಂದು ಕೆಲ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿವೆ.

ಸೆಪ್ಟೆಂಬರ್ 9,2024ರಂದು “DK Shivakumar : ಸಿಎಂ ಕುರ್ಚಿ ಫೈಟ್​ ಮಧ್ಯೆ ‘ಬಂಡೆ’ ಫಾರಿನ್​ ಟೂರ್ ​​​​​; ಡಿಕೆಶಿಗೂ ಮೊದಲೇ ಅಮೆರಿಕದಲ್ಲಿ ರಾಹುಲ್‌‌‌, ಕುತೂಹಲ ಮೂಡಿಸಿದ US ಟೂರ್” ಎಂಬ ಶೀರ್ಷಿಕೆಯಲ್ಲಿ ನ್ಯೂಸ್‌18 ಕನ್ನಡ ಸುದ್ದಿ ಪ್ರಕಟಿಸಿತ್ತು. ಅದರಲ್ಲಿ “ಕಮಲಾ ಹ್ಯಾರಿಸ್‌ ಪರವಾಗಿ ಪ್ರಚಾರ ಮಾಡಲು ಅನಿವಾಸಿ ಭಾರತೀಯರು, ಅಮೆರಿಕದಲ್ಲಿರುವ ಕನ್ನಡಿಗರ ಮತ ಸೆಳೆಯಲು ಡಿ.ಕೆ ಶಿವಕುಮಾರ್‌‌ ಅಮೆರಿಕಾಗೆ ತೆರಳಿದ್ದಾರೆ” ಎಂದು ಉಲ್ಲೇಖಿಸಿತ್ತು.

 

 

 

 

 

 

 

 

 

 

 

 

 

 

 

 

 

ಸೆಪ್ಟೆಂಬರ್ 8, 2024ರಂದು ರಿಪಬ್ಲಿಕ್ ಟಿವಿ ಇಂಗ್ಲಿಷ್‌ನ ವಿಡಿಯೋವೊಂದನ್ನು ಹಂಚಿಕೊಂಡಿದ್ದ ಬಲಪಂಥೀಯ ಎಕ್ಸ್‌ ಬಳಕೆದಾರ ರೌಶನ್ ಸಿನ್ಹಾ ಅಥವಾ ಮಿ.ಸಿನ್ಹಾ(@MrSinha_)”ಕಮಲಾ ಹ್ಯಾರಿಸ್ ಅವರು ಕರ್ನಾಟಕದ ಉಪ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರನ್ನು ಯುಎಸ್‌ಎಗೆ ಮತ್ತು ರಿಂಗ್-ಲೀಡರ್ ಒಬಾಮಾ ಅವರನ್ನು ಭೇಟಿ ಮಾಡಲು ಆಹ್ವಾನಿಸಿದ್ದಾರೆ. ಪಪ್ಪು ಈಗಾಗಲೇ ಅಮೆರಿಕಾದಲ್ಲಿದ್ದಾರೆ. ಬಾಂಗ್ಲಾದೇಶದ ನಿಯೋಜಿತ ಪ್ರಧಾನಿ ಎಂ.ಡಿ ಯೂನಸ್ ಕೂಡ ಒಬಾಮಾ ಶಾಲೆಯ ಉತ್ಪನ್ನ. ಇವರೆಲ್ಲ ಮೋದಿ ಸರ್ಕಾರವನ್ನು ಉರುಳಿಸಲು ಪ್ರಯತ್ನಗಳನ್ನು ವೇಗಗೊಳಿಸಿರುವಂತೆ ಕಾಣುತ್ತದೆ. ಭಾರತದಲ್ಲಿ ಕುಳಿತಿರುವ ಅವರ ಏಜೆಂಟ್‌ಗಳು ಕಳೆದ ಕೆಲವು ವಾರಗಳಲ್ಲಿ ಈಗಾಗಲೇ ಹಲವು ಮೋದಿ/ಭಾರತ ವಿರೋಧಿಗಳನ್ನು ಭೇಟಿಯಾಗಿದ್ದಾರೆ” ಎಂದು ಬರೆದುಕೊಂಡಿದ್ದರು.

 

 

 

 

 

 

 

 

 

 

 

 

 

 

 

 

ಹಾಗಿದ್ದರೆ ಪೋಸ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಸುದ್ದಿಯ ಬಗೆಗಿನ ಸ್ಪಷ್ಟ ಮಾಹಿತಿಗಾಗಿ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿಕುಮಾರ್‌ ಅವರ ಎಕ್ಸ್‌( ಈ ಹಿಂದಿನ ಟ್ವಿಟರ್‌) ಖಾತೆಯನ್ನು ಪರಿಶೀಲಿಸಿದಾಗ, ಡಿ.ಕೆ ಶಿವಕುಮಾರ್‌  8 ಸೆಪ್ಟೆಂಬರ್‌ 2024ರಂದು ರಾತ್ರಿ 8 ಗಂಟೆ 2 ನಿಮಿಷಕ್ಕೆ ಮಾಡಿದ್ದ ಪೋಸ್ಟ್‌ ಲಭ್ಯವಾಗಿದೆ.

“ನಾನು ಕೈಗೊಳ್ಳುತ್ತಿರುವ ಅಮೆರಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ನನ್ನ ಸ್ಪಷ್ಟನೆ ಇದು. ಈ ಪ್ರವಾಸವು ವೈಯಕ್ತಿಕವಾಗಿದ್ದು, ಯಾವುದೇ ರಾಜಕೀಯ ಉದ್ದೇಶವನ್ನು ಹೊಂದಿಲ್ಲ. ಅಥವಾ ನನಗೆ ಯಾವುದೇ ರಾಜಕೀಯ ಆಹ್ವಾನಗಳೂ ಬಂದಿಲ್ಲ. ಸಾರ್ವಜನಿಕರು ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡದಂತೆ ವಿನಂತಿಸುತ್ತೇನೆ.” ಎಂದು ಬರೆದುಕೊಂಡಿರುವುದು ಕಂಡು ಬಂದಿದೆ.

ಇದರ ಜೊತೆಗೆ ಕರ್ನಾಟಕ ಕಾಂಗ್ರೆಸ್‌ ಕೂಡ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿ ಪೋಸ್ಟ್‌ ಮಾಡಿದ್ದು, ಅದರಲ್ಲಿ “ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ @DKShivakumar ಅವರು ವಯಕ್ತಿಕ ಕೆಲಸಗಳ ನಿಮಿತ್ತ ಅಮೇರಿಕಾದ ವಾಷಿಂಗ್ಟನ್ ನಗರಕ್ಕೆ ಪ್ರವಾಸ ಕೈಗೊಂಡಿದ್ದಾರೆಯೇ ಹೊರತು ಯಾವುದೇ ರಾಜಕೀಯ ಕಾರಣಗಳಿಗಲ್ಲ. ಕೆಲ ಮಾಧ್ಯಮಗಳಲ್ಲಿ ಉಹಾಪೋಹದ ವರದಿಗಳು ಪ್ರಸಾರವಾಗುತ್ತಿದ್ದು, ಆ ವರದಿಗಳು ಸತ್ಯಕ್ಕೆ ದೂರವಾಗಿದೆ.” ಎಂದು ಸ್ಪಷ್ಟನೆಯನ್ನು ನೀಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಡಿ.ಕೆ.ಶಿವಕುಮಾರ್‌ ಅವರು ಕಮಲಾ ಹ್ಯಾರಿಸ್‌ ಅವರನ್ನು ಬೆಂಬಲಿಸಲು ಅಮೆರಿಕಾಗೆ ಪ್ರವಾಸ ಕೈಗೊಂಡಿದ್ದಾರೆ ಎಂಬ ಮಾಧ್ಯಮಗಳ ವರದಿ ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಫಾರ್ಮಾಲಿನ್ ಮಾತ್ರೆಯನ್ನು ಬೆರೆಸಿದ ಮೀನುಗಳನ್ನು ಮುಸ್ಲಿಮರು ಮಾತ್ರ ಮಾರಾಟ ಮಾಡುತ್ತಿದ್ದಾರೆ ಎಂಬ ನಿರೂಪಣೆ ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights