FACT CHECK | ಹರಿಯಾಣ ಫಲಿತಾಂಶದಿಂದ ಬೇಸರಗೊಂಡು ಕಣ್ಣೀರಿಟ್ರಾ ದೀಪೇಂದರ್ ಸಿಂಗ್ ಹೂಡಾ?
ಚುನಾವಣೆ ಫಲಿತಾಂಶಕ್ಕೆ ದಿಕ್ಸೂಚಿ ಎಂದೇ ಮತಗಟ್ಟೆ ಸಮೀಕ್ಷೆಗಳನ್ನು ಪರಿಗಣಿಸಲಾಗುತ್ತದೆ. ಆದರೆ ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿರುವಂತೆಯೇ, ಚುನಾವಣೋತ್ತರ ಫಲಿತಾಂಶಗಳ ಲೆಕ್ಕಾಚಾರಗಳು ಮತ್ತೆ ಬುಡಮೇಲಾಗಿವೆ.
Deepender Hooda got emotional
This man worked Tirelessly for the party.
This man Efforts will be unforgettable
Well Fought My Leader @DeependerSHooda Ji ✋
Whatever the circumstances may be always with you Forever and Ever.#HaryanaElectionResults pic.twitter.com/RX7yVkv8zG
— Amoxicillin (@Albert_1789) October 8, 2024
ಹಲವು ಸಮೀಕ್ಷೆಗಳು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತದ ಭವಿಷ್ಯ ನುಡಿದಿದ್ದರೂ, 48 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ BJP ಮ್ಯಾಜಿಕ್ ನಂಬರ್ ತಲುಪುವ ಮೂಲಕ ಬಿಜೆಪಿ ಸತತ ಮೂರನೇ ಬಾರಿ ಸರ್ಕಾರ ರಚಿಸಲು ಸಜ್ಜಾಗಿದೆ. ಇನ್ನೊಂದು ಕಡೆ ಈ ಫಲಿತಾಂಶದಿಂದ ಬೇಸರಗೊಂಡ, ಹರಿಯಾಣ ಕಾಂಗ್ರೆಸ್ ನಾಯಕ ದೀಪೇಂದರ್ ಸಿಂಗ್ ಹೂಡಾ ಕಣ್ಣೀರು ಹಾಕುತ್ತಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಇದೇ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ವೈರಲ್ ಫೂಟೇಜ್‌ನ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದಾಗ,5 ಜೂನ್ , 2024 ರಂದು ಹಂಚಿಕೊಡ @Radhey_307 ರ X ಪೋಸ್ಟ್ ಲಭ್ಯವಾಗಿದೆ. ಈ ವಿಡಿಯೋದಲ್ಲಿ ವೈರಲ್ ವಿಡಿಯೋದಲ್ಲಿರುವ ದೃಶ್ಯಗಳನ್ನು ನೋಡಬಹುದಾಗಿದೆ. “ದೀಪೇಂದರ್ ಹೂಡಾ 2019 ರಲ್ಲಿ ತಳಮಟ್ಟದಲ್ಲಿ ಕೆಲಸ ಮಾಡಿದ್ದರು, ಆದರು ಕೇವಲ 5000 ಮತಗಳಿಂದ ಸೋತಿದ್ದರು, ಈಗ 3,50,000 ಅಂತರದಿಂದ ಗೆದ್ದಿದ್ದಾರೆ. ಈ ಸಂತಸದ ಕ್ಷಣಗಳಿಂದಾಗಿ ಅವರು ಕಣ್ಣೀರು ಹಾಕಿದ್ದಾರೆ ಎಂದು ಹಂಚಿಕೊಂಡಿದ್ದಾರೆ.

ಜೂನ್ 2024 ರಿಂದ ರೋಹ್ಟಕ್ ಲೋಕಸಭಾ ಸ್ಥಾನವನ್ನು ಗೆದ್ದ ನಂತರ ಹೂಡಾ ಅವರ ವೈರಲ್ ತುಣುಕನ್ನು ಪ್ರಸರವಾಗಿದ್ದು, ಅನೇಕ ಎಕ್ಸ್ ಮತ್ತು ಫೇಸ್‌ಬುಕ್ ಪೋಸ್ಟ್‌ಗಳನ್ನು ಲಭ್ಯವಾಗಿವೆ. ಅಂತಹ ಪೋಸ್ಟ್‌ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಜೂನ್ 5, 2024ರ ಈ ದೃಶ್ಯಗಳನ್ನು ವಿಶೇಷವಾಗಿ, ಹರ್ಯಾಣ ವಿಧಾನಸಭಾ ಚುನಾವಣಾ ಫಲಿತಾಂಶಗಳಿಗೆ ಲಿಂಕ್ ಮಾಡಿ ಅಕ್ಟೋಬರ್ 8 ಹರಿಯಾಣ ವಿಧಾನ ಸಭಾ ಫಲಿತಾಂಶದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಜೂನ್ 5, 2024 ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋವೊಂದು ಲಭ್ಯವಾಗಿದ್ದು, ಟಿವಿ ಪರದೆಯ ಮೇಲೆ ಪ್ರದರ್ಶಿಸಲಾದ “ಇಂಡಿಯಾ” ಎಂಬ ಲೋಗೋವನ್ನು ಪತ್ತೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷವು 2024 ರ ಲೋಕಸಭೆ ಚುನಾವಣೆಯ ಸಮಯದಲ್ಲಿ ರಚಿಸಲಾದ ವಿರೋಧ ಪಕ್ಷಗಳ INDIA ಒಕ್ಕೂಟ ಒಂದು ಭಾಗವಾಗಿತ್ತು.

ಜೂನ್ 5, 2024 ರ ದಿನಾಂಕದ ಡಿಎನ್‌ಎ ಹಿಂದಿ ವರದಿ ಲಭ್ಯವಾಗಿದ್ದು, ವೈರಲ್ ದೃಶ್ಯಗಳ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿದೆ ಮತ್ತು ರೋಹ್ಟಕ್ ಲೋಕಸಭಾ ಕ್ಷೇತ್ರವನ್ನು 3 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದ ನಂತರ ದೀಪೇಂದರ್ ಸಿಂಗ್ ಹೂಡಾ ಗೆದ್ದ ನಂತರ ಕಣ್ಣೀರು ಹಾಕುತ್ತಿದ್ದಾರೆ ಎಂದು ಉಲ್ಲೇಖಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಸೋತ ನಂತರ ಕಾಂಗ್ರೆಸ್ ನಾಯಕ ದೀಪೇಂದರ್ ಸಿಂಗ್ ಹೂಡಾ ಕಣ್ಣೀರು ಹಾಕಿದ್ದಾರೆ ಎಂದು ಪ್ರತಿಪಾದಿಸಿ, ಜೂನ್ 5, 2024 ಹಳೆಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಹೆಸರಿನ ನಕಲಿ ಜಾಲದ ಬಗ್ಗೆ ಇರಲಿ ಎಚ್ಚರ

