FACT CHECK | ಟಿಎಂಸಿ ಸಂಸದೆಯಿಂದ ಗೃಹ ಸಚಿವ ಅಮಿತ್ ಶಾಗೆ ಛೀಮಾರಿ ಎಂಬ ವೈರಲ್ ವಿಡಿಯೋದ ಅಸಲೀಯತ್ತೇನು?

ಸಂಸತ್ ಕಲಾಪಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಮಹಿಳಾ ಸಂಸದರೊಬ್ಬರು ಹಣದುಬ್ಬರ ವಿಚಾರದಲ್ಲಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಟಿಎಂಸಿ ಸಂಸದೆ ಕಾಕಲಿ ಘೋಷ್ ದಸ್ತಿದಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಗೌರವ ತೋರಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದದೆ.

ಟಿಎಂಸಿ ಮಹಿಳಾ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್, ಗೃಹ ಸಚಿವ ಅಮಿತ್ ಶಾಗೆ ಛೀಮಾರಿ ಹಾಕಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್‌ಅಮ್ಮಿ ಹಂಚಿಕೊಂಡಿದ್ದಾರೆ.

 

 

 

 

 

 

 

 

 

 

 

 

 

 

 

 

 

ವೈರಲ್ ವಿಡಿಯೋದಲ್ಲಿ ಸಂಸದೆ ಕಾಕೋಲಿ ಘೋಷ್ ದೊಡ್ಡ ಧ್ವನಿಯಲ್ಲಿ, “ನಿಮಗೇನು ಗೊತ್ತು, ಕುಳಿತುಕೊಳ್ಳಿ” ಎಂದು ಹೇಳುತ್ತಿರುವುದು ಕಂಡುಬರುತ್ತದೆ. ಇದಾದ ಬಳಿಕ ಅಮಿತ್ ಶಾ ಕುಳಿತಿರುವುದು ಕಂಡುಬಂದಿದೆ. ಇಡೀ ಕ್ಲಿಪ್ ನೋಡಿದಾಗ ಸಂಸದೆ ಕಾಕೋಲಿ ಘೋಷ್ ಅಮಿತ್ ಶಾಗೆ ಛೀಮಾರಿ ಹಾಕಿ ಕುಳಿತುಕೊಂಡಂತೆ ಕಾಣುತ್ತದೆ. ಅನೇಕ ಇತರ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಅನೇಕ ಬಳಕೆದಾರರು ಫೇಸ್ಬುಕ್ ಮತ್ತು ಎಕ್ಸ್‌ನಂತಹ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅವುಗಳಲ್ಲಿ ಕೆಲವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಆಗಸ್ಟ್ 1, 2022 ರಂದು ಸಂಸದ್ ಟಿವಿಯಲ್ಲಿ ಪ್ರಕಟವಾದ “ಡಾ. ಕಾಕೋಲಿ ಘೋಷ್ ದಸ್ತಿದಾರ್ | ಬೆಲೆ ಏರಿಕೆ ಕುರಿತು ನಿಯಮ 193ರ ಅಡಿಯಲ್ಲಿ ಚರ್ಚೆ”. ಈ ವಿಡಿಯೋದಲ್ಲಿ ಟಿಎಂಸಿ ಸಂಸದರು ಹಣದುಬ್ಬರದ ಬಗ್ಗೆ ಚರ್ಚಿಸುವುದು ಮತ್ತು ಸರ್ಕಾರದ ಉಜ್ವಲ ಯೋಜನೆಯನ್ನು ಟೀಕಿಸುವುದನ್ನು ಕಾಣಬಹುದು. ಜನರು ತಮ್ಮ ಊಟಕ್ಕಾಗಿ ಕಚ್ಚಾ ತರಕಾರಿಗಳನ್ನು ಅವಲಂಬಿಸುವ ನಿರೀಕ್ಷೆಯಿದೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತುತ್ತಾರೆ.

 

ವೈರಲ್ ಕ್ಲಿಪ್‌ನ ಭಾಗವನ್ನು ಮೂಲ ವಿಡಿಯೋದಲ್ಲಿ 12.35 ನಿಮಿಷಗಳಲ್ಲಿ ನೋಡಬಹುದು. ಈ ವೇಳೆ ಕಾಕೋಲಿ ಘೋಷ್ ತಮ್ಮ ಭಾಷಣದ ವೇಳೆ ಅಡ್ಡಿಪಡಿಸಿದ ಸಂಸದರಿಗೆ ಛೀಮಾರಿ ಹಾಕುತ್ತಿರುವುದು ಕಂಡು ಬಂದಿದೆ. ಆದರೆ ಇದರಲ್ಲಿ ಎಲ್ಲಿಯೂ ಅಮಿತ್ ಶಾ ಕಾಣಿಸುತ್ತಿಲ್ಲ. ಅದೇನೆಂದರೆ ವೈರಲ್ ಆಗಿರುವ ವಿಡಿಯೋದಲ್ಲಿ ಅಮಿತ್ ಶಾ ಅವರ ಪೋರ್ಷನ್ ಅನ್ನು ಪ್ರತ್ಯೇಕವಾಗಿ ಸೇರಿಸಿರುವುದು  ಸ್ಪಷ್ಟವಾಗಿದೆ.

ವೈರಲ್ ವೀಡಿಯೊದಿಂದ ಅಮಿತ್ ಶಾ ಅವರ ಕೀಫ್ರೇಮ್‌ ಬಳಸಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದ ನಂತರ, ಫೆಬ್ರವರಿ 7, 2022 ರಂದು ಸಂಸದ್ ಟಿವಿಯಲ್ಲಿ ಪ್ರಕಟವಾದ ಅಮಿತ್ ಶಾ ಅವರ ಇದೇ ರೀತಿಯ ತುಣುಕನ್ನು ನಾವು ಕಂಡುಕೊಂಡಿದ್ದೇವೆ, “ಅಸಾದುದ್ದೀನ್ ಒವೈಸಿ ಬೆಂಗಾವಲು ವಾಹನದ ಮೇಲಿನ ದಾಳಿಯ ಬಗ್ಗೆ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ” ಎಂಬ ಶೀರ್ಷಿಕೆಯೊಂದಿಗೆ. ವೈರಲ್ ವಿಡಿಯೋವನ್ನು ಕಾಣುವಂತೆಯೇ ಕೇಂದ್ರ ಗೃಹ ಸಚಿವರು ತಮ್ಮ ಭಾಷಣದ ಕೊನೆಯಲ್ಲಿ ತಮ್ಮ ಆಸನದಲ್ಲಿ ಕುಳಿತುಕೊಳ್ಳುವುದನ್ನು ತುಣುಕು ತೋರಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಎರಡು ಪ್ರತ್ಯೇಕ ವಿಡಿಯೋಗಳನ್ನು ಎಡಿಟ್‌ ಮಾಡಿ ಒಟ್ಟಿಗೆ ಸೇರಿಸಿ ಟಿಎಂಸಿ ಸಂಸದೆ ಕಾಕಲಿ ಘೋಷ್ ದಸ್ತಿದಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಛೀಮಾರಿ ಹಾಕಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದಾಗುವುದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights