FACT CHECK | ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾದ ಮುಸ್ಲಿಮರಿಗೆ ಯೋಗಿ ಜೀ ನೀಡಿದ ಶಿಕ್ಷೆ ಎಂದು ಪಾಕಿಸ್ತಾನದ ಹಳೆಯ ವಿಡಿಯೋ ಹಂಚಿಕೆ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಮಾಜಘಾತುಕ ಶಕ್ತಿಗಳ ವಿರುದ್ದ ಸಮರವನ್ನೆ ಸಾರಿದ್ದಾರೆ. ತಪ್ಪು ಮಾಡುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕಾರಣಕ್ಕೆ “ಬುಲ್ಡೋಜರ್ ಬಾಬಾ” ಎಂದು ಕೆಲವರಿಂದ ಶ್ಲಾಘನೆಗೆ ಒಳಗಾದರೆ. ಕಾನೂನುಗಳನ್ನು ಗಾಳಿಗೆ ತೂರಿ ಹೋರಾಟಗಾರರು, ಅಲ್ಪಸಂಖ್ಯಾತರ ವಿರುದ್ಧ ಪಕ್ಷಪಾತದಿಂದ ವರ್ತಿಸುತ್ತಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವೊಂದು ವೈರಲ್ ಆಗುತ್ತಿದ್ದು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಮುಸ್ಲಿಮರಿಗೆ ಉತ್ತರ ಪ್ರದೇಶದ ಪೊಲೀಸ್ ಠಾಣೆಯೊಂದರಲ್ಲಿ “ಮುರ್ಗಾ” ಎನ್ನುವ ಶಿಕ್ಷೆಯನ್ನು ನೀಡಿ ಕಿವಿ ಹಿಡಿಸಲಾಗಿದೆ ಎಂದು ಹೇಳುವ ಪೋಸ್ಟರ್ ಹರಿದಾಡುತ್ತಿದೆ.
View this post on Instagram
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 29 ಮಾರ್ಚ್ 2020ರಂದು “ಉರ್ದು ಅಪ್‌ಡೇಟ್ಸ್” ಎಂಬ ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋ ಲಭ್ಯವಾಗಿದೆ. ವಿಡಿಯೋದ ಶೀರ್ಷಿಕೆಯಲ್ಲಿ “ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವವರನ್ನು ಮನ್ಸೆಹ್ರಾ ಪೊಲೀಸರು ಹೇಗೆ ಶಿಕ್ಷಿಸುತ್ತಿದ್ದಾರೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ಇದನ್ನೆ ಆಧಾರಾವಾಗಿ ತೆಗೆದುಕೊಂಡು ಸಂಬಂಧಿತ ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ ಜಿಯೋ ನ್ಯೂಸ್ 2020ರ ಮಾರ್ಚ್ 29, ರಂದು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿದ ವಿಡಿಯೋ ಮಾಹಿತಿ ಲಭಿಸಿದೆ.
ವರದಿಯಲ್ಲಿ ವೈರಲ್ ವಿಡಿಇಯೋದ ಪೂರ್ಣ ವಿಡಿಯೊವನ್ನು ಅಪ್‌ಲೋಡ್ ಮಾಡಲಾಗಿದ್ದು, ಅದು ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿರುವ ಮನ್ಸೆಹ್ರಾ ಜಿಲ್ಲೆಯಲ್ಲಿ ಕೊರೋನಾ ಸಂದರ್ಭದಲ್ಲಿ ಲಾಕ್‌ಡೌನ್ ನಿಯಮಾವಳಿಗಳನ್ನು ಉಲ್ಲಂಗಿಸಿ ಸಿಕ್ಕಿಬಿದ್ದವರನ್ನು ಪೊಲೀಸ್ ಠಾಣೆಗೆ ಕರೆತಂದು ಎಲ್ಲರಿಗೂ “ಮುರ್ಗಾ” ಶಿಕ್ಷೆಯನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ದಕ್ಷಿಣ ಏಷ್ಯಾದ ಹಲವು ದೇಶಗಳಲ್ಲಿ ಜಾರಿಯಲ್ಲಿರುವ “ಮುರ್ಗಾ” ಶಿಕ್ಷೆಯಲ್ಲಿ( ಕಿವಿ ಹಿಡಿಯುವ) ನಡು ಬಗ್ಗಿಸಿ ಮೊಣಕಾಲುಗಳ ಹಿಂದಿನಿಂದ ಎರಡೂ ಕೈಗಳನ್ನು ಚಾಚಿ ಕಿವಿಗಳನ್ನು ದೃಢವಾಗಿ ಹಿಡಿದಿಟ್ಟುಕೊಳ್ಳುವ ಮೂಲಕ ಹುಂಜ ನಡೆಯುವ ರೀತಿಯಲ್ಲಿ ಶಿಕ್ಷೆಯನ್ನು ವಿಧಿಸುವ ಕ್ರಿಯೆಗೆ ಮುರ್ಗಾ ಶಿಕ್ಷೆ ಎಂದು ಹೇಳಲಾಗುತ್ತದೆ.
ಮನ್ಸೆಹ್ರಾ ಪೊಲೀಸರು ಮಾರ್ಚ್ 30, 2020 ರಂದು, ಮಾಡಿದ ಟ್ವಿಟ್ಟರ್‌ಗೆ ಪ್ರತಿಕ್ರಿಯಿಸಿದ ಕೆಲವರು ಪೊಲೀಸರು ಜನರನ್ನು ನಡೆಸಿಕೊಂಡಿರುವ ಕ್ರಮ ಖಂಡನೀಯ ಎಂದು ಟ್ವೇಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಗಳು ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗ ಹೇಳುವುದಾದರೆ, 2020ರ ಮಾರ್ಚ್ 29, ರಂದು ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿರುವ ಮನ್ಸೆಹ್ರಾ ಜಿಲ್ಲೆಯಲ್ಲಿ ಕೊರೋನಾ ಸಂದರ್ಭದಲ್ಲಿ ಲಾಕ್‌ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿದವರಿಗೆ ನೀಡಿದ ಮುರ್ಗಾ ಶಿಕ್ಷೆಯನ್ನು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಪರಾದಿಗಳಿಗೆ ನೀಡಿರುವ ಶಿಕ್ಷೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಟಿಎಂಸಿ ಸಂಸದೆಯಿಂದ ಗೃಹ ಸಚಿವ ಅಮಿತ್ ಶಾಗೆ ಛೀಮಾರಿ ಎಂಬ ವೈರಲ್ ವಿಡಿಯೋದ ಅಸಲೀಯತ್ತೇನು?

