SSLC exam : ಪರೀಕ್ಷೆಗಳು ರದ್ದಾಗಿಲ್ಲ, ಕುರಿತಾಗಿ ಯಾವುದೇ ತೀರ್ಮಾನ ಆಗಿಲ್ಲ – ಸುರೇಶ್..

ಕೊರೋನಾ ಲಾಕ್‌ಡೌನ್‌ ಹಿನ್ನ್‌ಎಲಯ್ಲಲಿ SSLC ಪರೀಕ್ಷೆಗಳು ರದ್ದಾಗಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್‍ ಅವರು ಸ್ಪಷ್ಟಪಡಿಸಿದ್ದಾರೆ. ದೇಶಾದ್ಯಂತ 21 ದಿನಗಳ ಬಂದ್ ಇರುವ ಹಿನ್ನೆಲೆಯಲ್ಲಿ SSLC ಪರೀಕ್ಷೆಗಳು ರದ್ದಾಗಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಸುರೇಶ್ ಕುಮಾರ್‍ ಈ ಸ್ಪಷ್ಟೀಕರಣ ನೀಡಿದ್ದಾರೆ.

ಪರೀಕ್ಷೆಗಳನ್ನು ರದ್ದು ಮಾಡುವ ಬಗ್ಗೆ ಯಾವುದೇ ಸಭೆ ನಡೆದಿಲ್ಲ, ಯಾವುದೇ ತೀರ್ಮಾನವೂ ಆಗಿಲ್ಲ. ಸದ್ಯ ಮಟ್ಟಿಗೆ ಅಂತಹ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದಿದ್ದಾರೆ.

ಹತ್ತನೇ ತರಗರಿ ಪರೀಕ್ಷೆಗಳು 27ರಿಂದ ಆರಂಭವಾಗಬೇಕಿತ್ತು. ಆದರೆ ಲಾಕ್‌ಡೌನ್ ಹಿನ್ನೆಲಯಲ್ಲಿ ಅದನ್ನು ಮುಂದೂಡಲಾಗಿದೆ. ಈಗ ದೇಶಾದ್ಯಂತ ಏಪ್ರಿಲ್ 14ರವರೆಗೆ ಬಮದ್ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ssಟಛಿ ವಿದ್ಯಾರ್ಥಿಗಳ ಗೊಂದಲ ತಾರಕಕ್ಕೇರಿದೆ.

ಈ ಬಗ್ಗೆ ಸದ್ಯದ ಮಟ್ಟಿಗೆ ಯಾವುದೇ ನಿರ್ಧಾರಗಳನ್ನು ಸರಕಾರ ಕೈಗೊಂಡಿಲ್ಲ ಮತ್ತು ಇದಕ್ಕೆ ಸಂಬಮಧಿಸಿದ ವದಂತಿಗಳಿಗೆ ಕಿವಿಡಗೊಡಬೇಡಿ ಎಂದು ಸುರೇಶ್ ಹೇಳಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಂದರಿಂದ ಒಂಬತ್ತನೇ ಇಯತ್ತೆವರೆಗೆ ಬಹುತೇಕ ಪರೀಕ್ಷೆಗಳು ರದ್ದಾಗಿದ್ದು, ಪಿಯುಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೇ ಪರೀಕ್ಷೆ ಮಾತ್ರ ಬಾಕಿ ಉಳಿದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights