FACT CHECK | ದೇವಸ್ಥಾನಗಳಲ್ಲಿ ‘ಓಂ ನಮಃ ಶಿವಾಯ’ ಎಂಬ ಮಂತ್ರ ಪಠಿಸುವುದನ್ನು ತಮಿಳುನಾಡು ಸರ್ಕಾರ ನಿರ್ಭಂಧಿಸಿದಿಯೇ?
ತಮಿಳುನಾಡಿನ ಮೈಲಾಪುರದ ದೇವಾಲಯದ ಸುತ್ತಮುತ್ತ ‘ಓಂ ನಮಃ ಶಿವಾಯ’ ಪಠಿಸುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. 
“ದೇವಾಲಯದ ಒಳಗೆ ಮತ್ತು ಅದರ ಸುತ್ತಲಿನ ಬೀದಿಗಳಲ್ಲಿ, “ಓಂ ನಮಃ ಶಿವಾಯ” ಎಂದು ಗಟ್ಟಿಯಾಗಿ ಜಪಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ತಮಿಳುನಾಡಿನ ಮೈಲಾಪುರದ ಕಪಾಲೀಶ್ವರರ್ ದೇವಸ್ಥಾನದಲ್ಲಿ ಯಾವುದೇ ಶಬ್ದ ಮಾಡದೆ ಮನಸ್ಸಿನಲ್ಲಿ ಪಠಿಸುವಂತೆ ಇಒ ಆದೇಶ ಹೊರಡಿಸಿದ್ದಾರೆ. ಅವರಲ್ಲಿ ಕೆಲವರನ್ನು ಬೆದರಿಸಲು ಪೊಲೀಸರನ್ನು ದೇವಾಲಯಕ್ಕೆ ಕರೆಸಲಾಯಿತು. ಜನರು ಪೊಲೀಸರೊಂದಿಗೆ ವಾದಿಸುತ್ತಿದ್ದಾರೆ” ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ತತ್ವಂಮಸಿ ಮತ್ತು ವಿ ದ ಪೀಪಲ್ ಎಂಬ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ ಮೂಲಕ ಗೂಗಲ್ ಸರ್ಚ್ ಮಾಡಿದಾಗ, ವೈರಲ್ ಆಗುತ್ತಿರುವ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ ಎಂದು ತಮಿಳುನಾಡು ಫ್ಯಾಕ್ಟ್ ಚೆಕ್ ಘಟಕ ವೈರಲ್ ಪೋಸ್ಟ್ ಗೆ ಮಾಡಿರುವ ಪ್ರತಿಕ್ರಿಯೆ ಲಭ್ಯವಾಗಿದೆ. ತಮಿಳುನಾಡು “ಓಂ ನಮಃ ಶಿವಾಯ ಎಂಬುದನ್ನು ದೇವಾಲಯದಲ್ಲಿ ನಿರ್ಬಂಧಿಸಲಾಗಿದೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ, @CMOTamilnadu @TNDIPRNEWS” ಎಂದು ಪೋಸ್ಟ್ ಮಾಡಿದ್ದಾರೆ.
ನವೆಂಬರ್ 14 ರಂದು, ಅವರು ಅದೇ ಫ್ಯಾಕ್ಟ್ ಚೆಕ್ ಪುಟದಲ್ಲಿ ಸತ್ಯವನ್ನು ದೃಢೀಕರಿಸುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಇದೆಲ್ಲವೂ ಬ್ಯಾನರ್ ಹಾಕುವುದರ ಕುರಿತು ನಡೆದ ವಿವಾದ ಎಂದು ಅವರು ಹೇಳಿದ್ದಾರೆ. ಆದರೆ ‘ಓಂ ನಮಃ: ಶಿವಾಯ’ ಜಪಿಸುವುದನ್ನು ತಡೆದಿದ್ದೇವೆ ಎಂಬುದು ಸುಳ್ಳು ಎಂದಿದ್ದಾರೆ.
“ಕಳೆದ ವರ್ಷ ನವೆಂಬರ್ನಲ್ಲಿ, ಮೈಲಾಪುರದ ರಸ್ತೆಯಲ್ಲಿನ ಬ್ಯಾನರ್ ತೆಗೆದುಹಾಕುವುದರ ವಿರುದ್ಧ ಪ್ರತಿಭಟನೆಯ ಸಮಯದಲ್ಲಿ ದೇವಾಲಯಕ್ಕೆ ಪ್ರವೇಶಿಸಲು ಪ್ರಯತ್ನಿಸಿದ ಕೆಲವರನ್ನು ಪೊಲೀಸರು ತಡೆದಿದ್ದರು.
ಸಂಬಂಧಿತ ಕೀವರ್ಡ್ಗಳನ್ನು ಬಳಸಿಕೊಂಡು ದೇವಾಲಯದ ಸುತ್ತಲೂ ಯಾವುದೇ ನಿರ್ಬಂಧಗಳನ್ನು ತರಲಾಗಿದೆಯೇ ಎಂದು ಪರಿಶೀಲಿಸಿದಾಗ ಅಂತಹ ಯಾವುದೇ ವರದಿಗಳು ಲಭ್ಯವಾಗಿಲ್ಲ. ಯಾವುದೇ ದೇವಾಲಯವು ಅಂತಹ ನಿರ್ಬಂಧಗಳನ್ನು ವಿಧಿಸಿದ್ದರೆ ಮಾಧ್ಯಮಗಳಲ್ಲಿ ಹೆಚ್ಚಿನ ಸುದ್ದಿಯಾಗುತ್ತಿತ್ತು.
ಹೆಚ್ಚಿನ ಮಾಹಿತಿಗಾಗಿ ಮೈಲಾಪುರ ಕಪಾಲೀಶ್ವರರ್ ದೇವಾಲಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದಾಗ. “ ಅಂತಹ ಯಾವುದೇ ನಿಯಮಗಳನ್ನು ತಂದಿಲ್ಲ ಮತ್ತು ನಾವು ಅದನ್ನು ತರುವುದಿಲ್ಲ” ಎಂದು ಅವರು ಹೇಳಿದರು. “ಕಳೆದ ಕೆಲವು ತಿಂಗಳುಗಳಿಂದ, ವೀಡಿಯೊ ವೈರಲ್ ಆಗುತ್ತಿದೆ ಮತ್ತು ಇದು ಕಳೆದ ವರ್ಷದ ಘಟನೆಗೆ ಸಂಬಂಧಿಸಿದೆ.” ಎಂದು ಮಂಡಳಿಯ ಸದಸ್ಯರು ಹೇಳಿದ್ದಾರೆ.
ಒಟ್ಟರೆಯಾಗಿ ಹೇಳುವುದಾದರೆ, ತಮಿಳುನಾಡು ಸರ್ಕಾರದ ವಿರುದ್ದ ಜನರಿಗೆ ಆಕ್ರೋಶ ಬರುವಂತೆ ಮಾಡುವ ದುರುದೇಶದಿಂದ ಧಾರ್ಮಿಕ ವಿಚಾರಗಳನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ತಾಜ್ ಮಹಲ್ ನಿರ್ಮಾಣ ಹಂತದ ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?

