FACT CHECK | ಮಾಜಿ ಸಿಎಂ ಕೇಜ್ರಿವಾಲ್ ಮತ್ತು ಎಲಾನ್ ಮಸ್ಕ್‌ರನ್ನು ಭೇಟಿಯಾಗಿದ್ದಾರೆ ಎಂಬ ಫೋಟೊದ ಅಸಲೀಯತ್ತೇನು?

ದೆಹಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಮತ್ತು ಎಲಾನ್‌ ಮಸ್ಕ್‌ ಇಬ್ಬರು ಜೊತೆಯಲ್ಲಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ದೆಹಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ.

This image is not real and has been generated using Artificial Intelligence.
ಗೂಗಲ್‌ನಲ್ಲಿ ಚಿತ್ರದ ಮೇಲೆ ಬರೆದ ರೈಸಿಂಗ್‌ಪಿಕು ಎಂಬುದರ ಬಗ್ಗೆ ಗೂಗಲ್ ಸರ್ಚ್ ಮಾಡಿದಾಗ, ಟ್ವೀಟರ್‌ (ಎಕ್ಸ್) ಹ್ಯಾಂಡಲ್ ಲಭ್ಯವಾಗಿದೆ. ಈ ಪ್ರೊಫೈಲ್‌ನಲ್ಲಿ ಎಐ ರಚಿತ ಚಿತ್ರಗಳು ಲಭ್ಯವಿರುತ್ತವೆ ಎಂದು ಆ ಪೇಜ್‌ನ ಬಯೋದಲ್ಲಿ ಬರೆಯಲಾಗಿದೆ.

ಆ ಖಾತೆಯಲ್ಲಿ ವೈರಲ್ ಚಿತ್ರಗಳಿಗಾಗಿ ಸರ್ಚ್ ಮಾಡಿದಾಗ, ಡಿಸೆಂಬರ್ 13 ರಂದು ಅರವಿಂಗ್‌ ಕೇಜ್ರಿವಾಲ್‌ ಹಾಗೂ ಎಲಾನ್‌ ಮಸ್ಕ್‌ ಪೋಸ್ಟ್ ಕಂಡುಬಂದಿದೆ. ಜತೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೋ ಕಂಡುಬಂದಿದೆ. ಈ ಫೋಟೋವನ್ನು TrueMedia.org ನಲ್ಲಿ ಅಪ್‌ಲೋಡ್ ಮಾಡಿದಾಗ, ಫಲಿತಾಂಶದ ಪ್ರಕಾರ, ಈ ಫೋಟೋವನ್ನು ಶೇಕಡಾ 96 ರಷ್ಟು ಎಐ ಎಂದು ತಿಳಿದುಬಂದಿದೆ.

a i

ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಎಲಾನ್ ಮಸ್ಕ್ ಭೇಟಿಯಾಗಿದ್ದಾರೆ ಎಂದು ಹೇಳಿ ಹಂಚಿಕೊಳ್ಳಲಾಗಿರುವ ಫೋಟೊ ಎಐ ಸಹಾಯದಿಂದ ರಚನೆ ಮಾಡಿರುವ ಚಿತ್ರ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತೆರಿಗೆ ಪಾವತಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights