FACT CHECK | ಅಂಬೇಡ್ಕರ್ ಪ್ರತಿಮೆಗೆ ಹೂ ಮಾಲೆ ಹಾಕಿದ್ರಾ ಅಲ್ಲು ಅರ್ಜನ್ ?
ಕಾಲ್ತುಳಿತ ಪ್ರಕರಣ ಸಂಬಂಧ ತೆಲುಗು ನಟ ಅಲ್ಲು ಅರ್ಜುನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ಪ್ರಕರಣದಲ್ಲಿ ಬಂಧನವಾಗಿ ಬಳಿಕ ಮಧ್ಯಂತರ ಜಾಮೀನು ಪಡೆದು ಅಲ್ಲು ಅರ್ಜುನ್ ಹೊರ ಬಂದಿದ್ದರು. (ಡಿಸೆಂಬರ್ 24) ಪ್ರಕರಣ ಹಿನ್ನೆಲೆ ಪೊಲೀಸ್ ಠಾಣೆಗೆ ತೆರಳಿ ‘ಪುಷ್ಪ’-2 ನಟ ವಿಚಾರಣೆಗೆ ಹಾಜರಾಗಿದ್ದರು. ಅಲ್ಲು ಅರ್ಜನ್
ಸದ್ಯ ಹೆಚ್ಚು ಸುದ್ದಿಯಲ್ಲಿರುವ ಅಲ್ಲು ಅರ್ಜುನ್‌ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಅಲ್ಲು ಅರ್ಜುನ್ ಅವರು ಡಾ ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಹೂ ಮಾಲೆ ಹಾಕಿದ್ದಾರೆ ಎಂಬ ಫೋಟೋ, ವಿಡಿಯೋ ವೈರಲ್ ಆಗಿದೆ. ಅಲ್ಲು ಅರ್ಜನ್
https://www.youtube.com/watch?v=9OGqC_Vbb98&t=14s
ಅಲ್ಲು ಅರ್ಜುನ್ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಿರುವ ವೀಡಿಯೊವನ್ನು ಕಟ್ಟಾರ್ ಅಂಬೇಡ್ಕರ್‌ವಾದಿ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಾರೆ. ಈ ವೀಡಿಯೊಗೆ ಅಡಿಬರಹವಾಗಿ ಜೈ ಭೀಮ್ ಎಂದು ಬರೆದಿದ್ದಾರೆ. ಇನ್ನೊಬ್ಬ ಇನ್‌ಸ್ಟಾಗ್ರಾಂ ಬಳಕೆದಾರರು ಅಲ್ಲು ಅರ್ಜುನ್ ಅವರ ವೀಡಿಯೊವನ್ನು ಹಂಚಿಕೊಂಡು ಪುಷ್ಪ 2 ಸಹ ಬಾಬಾ ಸಾಹೇಬ್ ಜೈ ಭೀಮ್ ಮುಂದೆ ನಮಸ್ಕರಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ನಟ ಅಲ್ಲು ಅರ್ಜುನ್ ಬಾಬಾ ಸಾಹೇಬರ ಪುತ್ಥಳಿಗೆ ಹೂವಿನ ಹಾರ ಹಾಕುತ್ತಿರುವುದರಲ್ಲಿ ಆಶ್ಚರ್ಯ ಪಡುವಂತ್ತಾದೇನಿದೆ, ಯಾಕೆ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗ್ತಿದೆ ಎಂದು ಪರಿಶೀಲಿಸಲು ಮುಂದಾದೆವು, ಅದಕ್ಕಾಗಿ ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 1 ಅಕ್ಟೋಬರ್ 2024 ರಂದು @TeamAAOfficial ಹೆಸರಿನ ಟ್ವೀಟರ್ (ಎಕ್ಸ್) ಖಾತೆಯಲ್ಲಿ ಪೋಸ್ಟ್‌ವೊಂದು ಲಭ್ಯವಾಗಿದೆ.
Remembering the legacy. Icon Star @alluarjun pays his heartfelt tribute to his grandfather, Legendary actor, Padma Shri Dr. #AlluRamalingaiah garu on his birth anniversary. pic.twitter.com/BXvcH5TQ85
— Team Allu Arjun (@TeamAAOfficial) October 1, 2024
ಆ ಪೋಸ್ಟ್‌ನಲ್ಲಿ ” ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರು ತಮ್ಮ ತಾತ ಪದ್ಮಶ್ರೀ ಡಾ. ಅಲ್ಲು ರಾಮಲಿಂಗಯ್ಯ ಅವರ ಜನ್ಮ ವಾರ್ಷಿಕೋತ್ಸವದಂದು ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ” ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದ ಮೂರು ಫೋಟೋಗಳು ಮತ್ತು ವಿಡಿಯೋಗಳು ಪೋಸ್ಟ್‌ನಲ್ಲಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಮತ್ತು ಟ್ವಿಟರ್ ವಿಡಿಯೋ ಒಂದೇ ಆಗಿದೆ.
![]()
ಮತ್ತಷ್ಟು ಮಾಹಿತಿಗಾಗಿ ಅಲ್ಲು ಅರ್ಜುನ್ ತಾತನ ಹುಟ್ಟುಹಬ್ಬದ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಅಕ್ಟೋಬರ್ 1 ರಂದು ಅಲ್ಲು ಅರ್ಜುನ್ ತಾತ, ಅಲ್ಲು ರಾಮ ಲಿಂಗಯ್ಯನವರ ಜನ್ಮ ದಿನ ಪ್ರಯುಕ್ತ ಅಲ್ಲು ಅರ್ಜುನ್ ತಮ್ಮ ತಾತನಿಗೆ ಮಾಲೆ ಹಾಕುವ ಕುರಿತು ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿ ಹೊರಡಿಸಿದ್ದ ವಿಡಿಯೋ ಲಭ್ಯವಾಗಿದೆ. ಅದರಲ್ಲಿ ಅಲ್ಲು ಅರ್ಜುನ್ ತಮ್ಮ ತಾತನಿಗೆ ಗೌರವ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಲ್ಲು ಅರ್ಜುನ್ ಅವರು ಅಜ್ಜ ಅಲ್ಲು ರಾಮ ಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾಲೆ ಹಾಕಿದ ವಿಡಿಯೋವನ್ನು, ಅಲ್ಲು ಅರ್ಜುನ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಲೆ ಹಾಕಿದ್ದಾರೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಅಂಬೇಡ್ಕರ್ ಚಿತ್ರದೊಂದಿಗೆ ರೂ 500 ಮುಖಬೆಲೆಯ ನೋಟನ್ನು ಪರಿಚಯಿಸಲಿದೆಯೇ ಕೇಂದ್ರ ಸರ್ಕಾರ?

