FACT CHECK | ಅಂಬೇಡ್ಕರ್ ಚಿತ್ರದೊಂದಿಗೆ ರೂ 500 ಮುಖಬೆಲೆಯ ನೋಟನ್ನು ಪರಿಚಯಿಸಲಿದೆಯೇ ಕೇಂದ್ರ ಸರ್ಕಾರ?

ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿರುವ 500 ರೂ. ಮುಖಬೆಲೆಯ ಕರೆನ್ಸಿ ನೋಟಿನ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಹಾತ್ಮಾ ಗಾಂಧಿಯವರ ಚಿತ್ರದೊಂದಿಗೆ, ಡಾ. ಬಿ. ಆರ್‌. ಅಂಬೇಡ್ಕರ್ ಅವರ ಚಿತ್ರದ 500 ರೂ. ನೋಟುಗಳನ್ನು ಮುದ್ರಿಸಲು ಯೋಜಿಸುತ್ತಿದೆ. ಅಂಬೇಡ್ಕರ್‌

ಎಕ್ಸ್ ಬಳಕೆದಾರರೊಬ್ಬರು ಈ ವೈರಲ್ ಚಿತ್ರವನ್ನು ಪೋಸ್ಟ್ ಮಾಡಿ, ‘‘ಈ ಬಾರಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದಂದು ಬಿಜೆಪಿ ಸರ್ಕಾರವು 500 ರೂಪಾಯಿ ನೋಟಿನ ಮೇಲೆ ಅಂಬೇಡ್ಕರ್ ಅವರ ಚಿತ್ರವನ್ನು ಮುದ್ರಿಸಲು ಹೊರಟಿದೆ’’ ಎಂದು ಬರೆದಿದ್ದಾರೆ.
ಅಂಬೇಡ್ಕರ್‌

ಈ ಪೋಸ್ಟ್‌ಅನ್ನು ಕೆಲವರು ರಾಜಕೀಯವಾಗಿ ಬಳಕೆ ಮಾಡಿಕೊಂಡು ಪೋಸ್ಟ್‌ ಅನ್ನು ಹಂಚಿಕೊಳ್ಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಇದರಲ್ಲಿ ಹಲವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಯನ್ನು ಸರಿ ಪಡಿಸಲು ಮೋದಿ ಸರ್ಕಾರ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದೆ ಎಂದು ಬರೆದುಕೊಂಡರೆ, ಇನ್ನೂ ಕೆಲವರು ಇದು ಈ ಹಿಂದಿನಿಂದಲೂ ಪ್ರಸ್ತಾವನೆಯಲ್ಲಿದೆ ಎಂದು ಬರೆದುಕೊಂಡಿದ್ದಾರೆ. ಹೀಗೆ ವಿವಿಧ ರೀತಿಯಲ್ಲಿ ಬರೆದುಕೊಂಡು ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ನ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಮುಂದಾದಾಗ, ಈ ಕುರಿತು ಯಾವುದಾದರು ಅಧಿಕೃತ ವರದಿಗಳು ಪ್ರಕಟವಾಗಿದೆಯೇ ಎಂದು ಸರ್ಚ್ ಮಾಡಿದಾಗ,  ಇದಕ್ಕೆ ಪೂರಕವಾದ ಯಾವುದೇ ಅಧಿಕೃತ ವರದಿಗಳು ಲಭ್ಯವಾಗಿಲ್ಲ. ಈ ಸುದ್ದಿ ನಿಜವೇ ಆಗಿರುತ್ತಿದ್ದರೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು.

ಈ ಫೋಟೋವು ಸಂಪೂರ್ಣವಾಗಿ ನಕಲಿ ಎಂದು ತಿಳಿದುಬಂದಿದೆ. ಕೃತಕ ಬುದ್ಧಿಮತ್ತೆಯ (AI) ಸಹಾಯದಿಂದ ಈ ಚಿತ್ರವನ್ನು ರಚಿಸಲಾಗಿದೆ. ನೋಟು ಅಮಾನ್ಯೀಕರಣದ ನಂತರ ದೇಶದಲ್ಲಿ 500 ರೂಪಾಯಿ ನೋಟಿನ ಮೇಲೆ ಮಹಾತ್ಮ ಗಾಂಧಿಯವರ ಚಿತ್ರವನ್ನು ಮುದ್ರಿಸಲಾಗಿದೆ. ಈ ನೋಟಿನಲ್ಲಿ ಯಾವುದೇ ಬದಲಾವಣೆ ಅಥವಾ ಬದಲಾವಣೆ ಬಗ್ಗೆ ಸರ್ಕಾರ ಮಾಹಿತಿ ನೀಡಿಲ್ಲ.

ಈ ವೈರಲ್ ಫೋಟೋವನ್ನು AI ಡಿಟೆಕ್ಟರ್ ಟೂಲ್ ಸಹಾಯದಿಂದ ಪರಿಶೀಲಿಸಲಾಗಿದ್ದು, ಈ ಚಿತ್ರ ನಕಲಿ ಎಂದು ಕಂಡುಬಂದಿದೆ. ಸ್ಟೇಬಲ್ ಡಿಫ್ಯೂಷನ್, ಮಿಡ್‌ಜರ್ನಿ ಮತ್ತು ಡೆಲ್ ಇ 2 ನಂತಹ AI ಪರಿಕರಗಳನ್ನು ಬಳಸಿಕೊಂಡು ಈ ಚಿತ್ರವನ್ನು ರಚಿಸಲಾಗಿದೆ.  ಆರ್‌ಬಿಐನ ಅಧಿಕೃತ ವೆಬ್‌ಸೈಟ್ ಅನ್ನು ನಾವು ಮತ್ತಷ್ಟು ಪರಿಶೀಲಿಸಿದ್ದೇವೆ. ಅಂಬೇಡ್ಕರ್ ಅವರ ಚಿತ್ರವಿರುವ ₹ 500 ನೋಟುಗಳನ್ನು ಪರಿಚಯಿಸುವ ಕುರಿತು ಯಾವುದೇ ಅಧಿಸೂಚನೆ ಅಥವಾ ಪತ್ರಿಕಾ ಹೇಳಿಕೆಗಳು ಕೂಡ ನಮಗೆ ಕಂಡು ಬಂದಿಲ್ಲ.

ರಿಸರ್ವ್ ಬ್ಯಾಂಕ್ ಅಂತಹ ನಿರ್ಧಾರ ತೆಗೆದುಕೊಂಡರೆ ತನ್ನ ವೆಬ್‌ಸೈಟ್ ಅನ್ನು ನವೀಕರಿಸುತ್ತದೆ ಎಂದು ತಿಳಿದುಬಂದಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ 500 ರೂಪಾಯಿ ನೋಟಿನಲ್ಲಿ ಅಂಬೇಡ್ಕರ್ ಅವರ ಚಿತ್ರ ಸಂಪೂರ್ಣವಾಗಿ ನಕಲಿ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಆರ್‌ಬಿಐ ವೆಬ್‌ಸೈಟ್ ಪ್ರಕಾರ, ‘ಮಹಾತ್ಮ ಗಾಂಧಿ (ಹೊಸ) ಸರಣಿ’ ಎಂದು ಕರೆಯಲ್ಪಡುವ ಪ್ರಸ್ತುತ ಸರಣಿಯ ಬ್ಯಾಂಕ್ ನೋಟುಗಳನ್ನು 2016 ರಲ್ಲಿ ಹಳೆಯ ₹500 ಮತ್ತು ₹1,000 ನೋಟುಗಳ ಅಮಾನ್ಯೀಕರಣದ ನಂತರ ಪರಿಚಯಿಸಲಾಯಿತು. ವೆಬ್‌ಸೈಟ್‌ನ FAQ ವಿಭಾಗವು ಈ ಸರಣಿಯು ₹ 2,000, ₹ 500, ₹ 200 , ₹ 100, ₹ 50, ₹ 20 ಮತ್ತು ₹ 10 ನೋಟುಗಳು ಸೇರಿದಂತೆ ಎಲ್ಲಾ ಮುಖಬೆಲೆಯ ಮೇಲೆ ಮಹಾತ್ಮಾ ಗಾಂಧಿಯವರ ಭಾವಚಿತ್ರವನ್ನು ಒಳಗೊಂಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ಕೇಂದ್ರ ಸರ್ಕಾರದ ನಿರ್ಧಾರದಂತೆ RBI ಹೊಸ 500 ರೂ. ನೋಟುಗಳನ್ನು ಇನ್ನು ಮುಂದೆ ಡಾ. ಬಿ. ಆರ್‌. ಅಂಬೇಡ್ಕರ್‌ ಅವರ ಫೋಟೋಗಳೊಂದಿಗೆ ಮುದ್ರಿಸಲಿದೆ ಎಂಬುದು ಸುಳ್ಳಾಗಿದೆ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ಈ ಚಿತ್ರವನ್ನು ರಚಿಸಲಾಗಿದೆ. ಇಲ್ಲಿಯವರೆಗೆ ಗಾಂಧಿ ಸರಣಿಯ ನೋಟುಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕ್ರಿಸ್ಮಸ್ ಆಚರಣೆಯನ್ನು ಸಂಸತ್‌ ಭವನದಲ್ಲಿ ನಡೆಸಲಾಗಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights