FACT CHECK | ನೇಪಾಳದಲ್ಲಿ ನಡೆದ ಭೂಕಂಪನಕ್ಕೆ ಕುಸಿದ ಬಹುಮಹಡಿ ಕಟ್ಟಡ ಎಂದು ವಿಡಿಯೋ ಗೇಮ್‌ನ ದೃಶ್ಯ ಹಂಚಿಕೆ
ಇತ್ತೀಚೆಗೆ ನೇಪಾಳ – ಟಿಬೆಟ್ ಗಡಿಯಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ರಿಕ್ಷರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.1 ದಾಖಲಾಗಿದ್ದು, ಭೂಮಿ ಕಂಪಿಸಿದ ತೀವ್ರತೆಗೆ ಮನೆ, ಕಟ್ಟಡಗಳು ಧರೆಗುರುಳಿದ್ದು, ಈ ದುರಂತದಲ್ಲಿ ನೂರಾರು ಜನರು ಸಾವಿಗೀಡಾಗಿದ್ದಾರೆ. ಇದೇ ವೇಳೆ ಭೂಕಂಪದಿಂದ ಕುಸಿದ ಕಟ್ಟಡ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
“Stunning footage of the upgraded M7.1 #Earthquake captured live from Khumjung, #Nepal. Stay safe, everyone. #NepalEarthquake ️” #lockdown #Bihar #Patna #BREKINGNEWS #HMVP pic.twitter.com/ztrAGw4HG8
— RK_News10 (@RK_News10) January 7, 2025
‘ನೇಪಾಳದ ಖುಮ್‌ಜಂಗ್‌ನಿಂದ ನೇರವಾಗಿ ಸೆರೆಹಿಡಿಯಲಾದ 7.1 ಭೂಕಂಪನ ಬೆರಗುಗೊಳಿಸುವ ಫೂಟೇಜ್’ ಎಂದು ಕಟ್ಟಡವೊಂದು ಕುಸಿಯುವ ವಿಡಿಯೋವನ್ನು ‘ಎಕ್ಸ್’ನಲ್ಲಿ ಹಂಚಿಕೊಳ್ಳಲಾಗಿದೆ. @RK_News10 ಎಂಬ ಖಾತೆಯಿಂದ ಈ ಹತ್ತಾರು ಮಹಡಿಗಳ ಕಟ್ಟಡ ಬೀಳುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವಿಡಿಯೋದ ಸ್ಕ್ರೀನ್ ಶಾಟ್ ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇದೇ ರೀತಿಯ ಹಲವು ಸುದ್ದಿಗಳು, ಪೋಸ್ಟ್‌ಗಳು ಲಭ್ಯವಾಗಿವೆ.
ನೇಪಾಳದಲ್ಲಿ ಭೂಕಂಪನವಾಗಿರುವ ಪ್ರದೇಶವನ್ನು ಖುಮ್‌ಜಂಗ್‌ನದ್ದು ಎಂದು ಹೇಳಲಾಗಿದೆ. ಅಸಲಿಗೆ ಅದೊಂದು ಹಳ್ಳಿಯಾಗಿದ್ದು, ಇಲ್ಲಿ ಇಷ್ಟು ದೊಡ್ಡ ಕಟ್ಟಡ ಇರುವ ಸಾಧ್ಯತೆಗಳು ಇಲ್ಲ ಎಂದು ಅಂದಾಜಿಸಲಾಗಿದೆ. ಹೀಗಾಗಿ ವಿಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಇದು ನಿಜವಾದ ವಿಡಿಯೋ ಅಲ್ಲ ಎಂಬ ಅನುಮಾನ ಮೂಡಿತು. ಸರಿಯಾಗಿ ಗಮನಿಸಿದಾಗ ಎಡಿಟ್ ಮಾಡಿದ ರೀತಿಯಲ್ಲಿ ಕಟ್ಟಡದ ಭಾಗಗಳು ಕೆಳಕ್ಕೆ ಬೀಳುವುದನ್ನು ಕಾಣಬಹುದಾಗಿದೆ.
ವಿಡಿಯೋದಲ್ಲಿ ‘ಇದು ವಾಸ್ತವಿಕ ಭೂಕಂಪದ ವಿನಾಶ’ ಎಂದು ಬರೆಯಲಾಗಿದೆ. ಈ ಪೇಜ್‌ನಲ್ಲಿ ‘ಇದು ಆಟದ ವಿಡಿಯೋಗಳಾಗಿದ್ದು, ಬಳಕೆದಾರರು ಎಡಿಟ್ ಮಾಡಿ ರೆಕಾರ್ಡ್ ಮಾಡಲಾಗಿದೆ’ ಎಂದು ಬರೆಯಲಾಗಿದೆ.
![]()
‘soymilk papi earthquake’ ಎಂಬ ಯೂಟ್ಯೂಬ್ ಚಾನಲ್‌ನಲ್ಲಿ 2022ರ ಏಪ್ರಿಲ್‌ನಲ್ಲೇ ಈ ವಿಡಿಯೋ ಪೋಸ್ಟ್ ಆಗಿರುವುದು ಕಂಡುಬಂದಿದೆ. ಹಾಗಾಗಿ ಈ ವಿಡಿಯೋ ನೇಪಾಳದ ಭೂಕಂಪನಕ್ಕೆ ಸಂಬಂಧಿಸಿದ್ದಲ್ಲ ಅಥವಾ ಇತ್ತೀಚಿನ ಯಾವುದೇ ಭೂಕಂಪನಕ್ಕೆ ಸಂಬಂಧಿಸಿಲ್ಲ. ಇದು ವಿಡಿಯೋ ಗೇಮ್‌ಗೆ ಸಂಬಂಧಿಸಿದ ವಿಡಿಯೋ ಎಂಬುದು ದೃಢಪಟ್ಟಿದೆ.
https://www.youtube.com/watch?v=e8hgXf5EZ34&t=16s
ಒಟ್ಟಾರೆಯಾಗಿ ಹೇಳುವುದಾದರೆ, ನೇಪಾಳದಲ್ಲಿ ಸಂಭವಿಸಿದ ಭೂಕಂಪದಲ್ಲಿ ಬಹುಮಹಡಿಗಳ ಕಟ್ಟಡ ಕುಸಿತ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ವಿಡಿಯೋ ಗೇಮ್‌ನದ್ದು ಮತ್ತು ಸಾಮಾಜಿಕ ಮಾಧ್ಯಮಗಳ ಫ್ಲಾಟ್‌ಫಾರ್ಮ್‌ನಲ್ಲಿ ಕಳೆದ ಮೂರು ವರ್ಷದಿಂದ ಪ್ರಸಾರವಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ನಟ ಶಾರುಖ್ ದಂಪತಿ ಮೆಕ್ಕಾದಲ್ಲಿ ಎಂದು AI ನಿಂದ ರಚಿಸಲಾದ ಫೋಟೊ ಹಂಚಿಕೆ

