FACT CHECK | ಯೋಗಿ ಮತ್ತು ಅಖಿಲೇಶ್ ಒಟ್ಟಿಗೆ ಇರುವ ಸೆಲ್ಫಿ ಚಿತ್ರದ ಅಸಲೀಯತ್ತೇನು ಗೊತ್ತೆ?
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಇಬ್ಬರೂ ನಗುನಗುತ್ತಾ ಸೆಲ್ಫಿ ತೆಗೆದುಕೊಂಡಿದ್ದಾರೆ ಎನ್ನುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
मैं नहीं देखना चाहता हूं
जो हमारे समाज को गाली देता हों चाहे राजनीतिक हों या और कोई हम बर्दाश्त नहीं कर सकता हूं ढोंगी हैं ढोंगी https://t.co/MpXEfMKTLZ— Shivbachan Yadav SP (@yadav_Shivbacha) December 25, 2024
ನಾನು ಈ ಚಿತ್ರವನ್ನು ನೋಡಲು ಬಯಸುವುದಿಲ್ಲ. ನಮ್ಮ ಸಮಾಜವನ್ನು ದುರುಪಯೋಗಪಡಿಸಿಕೊಳ್ಳುವ ಯಾರನ್ನೂ ನಾವು ಸಹಿಸಲು ಸಾಧ್ಯವಿಲ್ಲ, ಅದು ರಾಜಕಾರಣಿಯಾಗಲಿ ಅಥವಾ ಬೇರೆ ಯಾರೇ ಆಗಿರಲಿ. ಅವರು ಕಪಟಿಗಳು ಎಂಬ ಬರಹದೊಂದಿಗೆ ಎಕ್ಸ್ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
View this post on Instagram
ಇದೇ ಚಿತ್ರವನ್ನು socialist_pappu_singh_yadav_sp ಎಂಬ ಬಳಕೆದಾರರೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ಚಿತ್ರ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದ್ದು, ಈ ಚಿತ್ರ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಟೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಆಗ ಅಖಿಲೇಶ್ ಯಾದವ್ ಹಾಗೂ ಯೋಗಿ ಆದಿತ್ಯನಾಥ್ ಸೆಲ್ಫಿ ತೆಗೆದುಕೊಂಡಿರುವ ಯಾವ ಚಿತ್ರವೂ ಕಂಡು ಬಂದಿಲ್ಲ.
ಕೆಲವು ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ANI ಸುದ್ದಿ ಸಂಸ್ಥೆ ತನ್ನ ಎಕ್ಸ್ನಲ್ಲಿ ಹಂಚಿಕೊಂಡ ವಿಡಿಯೋ ಲಭ್ಯವಾಗಿದೆ.
#WATCH Uttar Pradesh CM Yogi Adityanath meets Leader of Opposition Akhilesh Yadav in the Legislative Assembly during oath-taking of newly-elected legislators #Lucknow pic.twitter.com/7r6fX7ErjX
— ANI UP/Uttarakhand (@ANINewsUP) March 28, 2022
ಸುದ್ದಿ ವರದಿಯ ಪ್ರಕಾರ, ಯೋಗಿ ಆದಿತ್ಯನಾಥ್ ಮತ್ತು ಅಖಿಲೇಶ್ ಯಾದವ್ ಅವರು ಈ ಹಿಂದೆ ಯುಪಿ ವಿಧಾನಸಭೆಯ 18 ನೇ ಅಧಿವೇಶನದ ಆರಂಭದಲ್ಲಿ ಭೇಟಿಯಾಗಿದ್ದರು, ಅಲ್ಲಿ ಹೊಸದಾಗಿ ಆಯ್ಕೆಯಾದ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಈ ಸಮಯದಲ್ಲಿ, ಯೋಗಿ ಮತ್ತು ಅಖಿಲೇಶ್ ಯಾದವ್ ಅವರ ಮುಖಾಮುಖಿ ಮಾಧ್ಯಮ ಗಮನ ಸೆಳೆಯಿತು ಎಂದು ಸುದ್ದಿ ಸಂಸ್ಥೆ ANI ತನ್ನ ಅಧಿಕೃತ ಹ್ಯಾಂಡಲ್ನಲ್ಲಿ ಇಬ್ಬರು ನಾಯಕರ ನಡುವಿನ ಭೇಟಿಯ ಫೋಟೋ ಮತ್ತು ವೀಡಿಯೊವನ್ನು ಹಂಚಿಕೊಂಡಿದೆ.
ವೈರಲ್ ಫೋಟೋವನ್ನು ಪರಿಶೀಲಿಸಲು, ವಿಶ್ವಾಸ್ ನ್ಯೂಸ್ ಫ್ಯಾಕ್ಟ್ಚೆಕ್ ತಂಡ ಲಕ್ನೋ ಮೂಲದ ಹಿರಿಯ ಪತ್ರಕರ್ತ ಸಿದ್ಧಾರ್ಥ್ ಕಲ್ಹನ್ಸ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದೆ. ಅವರು ಹೇಳಿರುವಂತೆ “ಯೋಗಿ ಮತ್ತು ಅಖಿಲೇಶ್ ಯಾದವ್ ನಡುವೆ ಅಂತಹ ಯಾವುದೇ ಸಭೆ ನಡೆದಿಲ್ಲ” ಎಂದು ದೃಢಪಡಿಸಿದ್ದಾರೆ ಎಂದು ಹೇಳಿದೆ.

ಹೀಗಾಗಿ ಇದು ಕೃತಕ ಬುದ್ಧಿಮತ್ತೆಯನ್ನು ಬಳಸಿ ಸೃಷ್ಟಿಸಿರುವ ಚಿತ್ರ ಇರಬಹುದು ಎಂಬ ಅನುಮಾನದ ಮೇಲೆ, ಎಐ ಚಿತ್ರಗಳನ್ನು ಪತ್ತೆ ಹಚ್ಚುವ ಟೂಲ್ಗಳಲ್ಲಿ ಇದನ್ನು ಪರಿಶೀಲನೆಗೆ ಒಳಪಡಿಸಲಾಯಿತು.
![]()
ಮೊದಲಿಗೆ ಸೈಟ್ ಎಂಜಿನ್ ಎಂಬ ಟೂಲ್ನಲ್ಲಿ ಚಿತ್ರವನ್ನು ಅಪ್ಲೋಡ್ ಮಾಡಿದಾಗ ಅದು ಈ ಚಿತ್ರವು ಶೇ. 99ರಷ್ಟು ಎಐನಿಂದ ರಚಿಸಿದ್ದು ಎಂಬ ಫಲಿತಾಂಶ ನೀಡಿತು. ಶೇ. 99ರಷ್ಟು ಜನರೇಟಿವ್ ಎಐ ಇದರ ಹಿಂದಿದ್ದು, ಶೇ. 99ರಷ್ಟು ಫೇಸ್ ಮ್ಯಾನುಪ್ಯುಲೇಷನ್ ಮಾಡಲಾಗಿದೆ ಎಂದು ಹೇಳಿದೆ.
ಹೈವ್ ಮಾಡರೇಷನ್ನಲ್ಲಿ ಚಿತ್ರವನ್ನು ಅಪ್ಲೋಡ್ ಮಾಡಿದಾಗ ಇದು ಶೇ. 99.8ರಷ್ಟು ಎಐನಿಂದ ಸೃಷ್ಟಿಸಿದ್ದು ಎಂಬ ಫಲಿತಾಂಶವನ್ನು ನೀಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ವಿರೋಧ ಪಕ್ಷದ ನಾಯಕ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಒಟ್ಟಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎನ್ನಲಾದ ಚಿತ್ರವು AI ತಂತ್ರಜ್ಞಾನ ಬಳಸಿ ರಚಿಸಿರುವುದು ದೃಢಪಟ್ಟಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಹಾ ಕುಂಭಮೇಳದಲ್ಲಿ ಬಂಧಿತನಾದ ಮುಸ್ಲಿಂ ಯುವಕ ಅಯೂಬ್ ಅಲಿ ಭಯೋತ್ಪಾದಕನಲ್ಲ

