FACT CHECK | ನಟಿ ರಮ್ಯಾ ಮದುವೆ ಆಗ್ತಿದ್ದಾರೆ ಎಂಬ ಸುದ್ದಿ ನಕಲಿ

ಸ್ಯಾಂಡಲ್‌ವುಡ್‌ ನಟಿ, ಮಾಜಿ ಸಂಸದೆ ರಮ್ಯಾ ಅವರ ಮದುವೆ ವಿಚಾರ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. 42 ವರ್ಷವಾದ್ರೂ ಸಿಂಗಲ್‌ ಆಗಿರುವ ರಮ್ಯಾ ಅವರು ಉದ್ಯಮಿಯೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳು ಈ ಹಿಂದೆ ಹರಿದಾಡಿತ್ತು.

AV News ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ರಮ್ಯಾ ಅವರ ಮದುವೆ ಬಗ್ಗೆ ಪೋಸ್ಟ್‌ ಹಾಕಲಾಗಿದೆ. ” ಸ್ಯಾಂಡಲ್ವುಡ್ ಮೋಹಕತಾರೆ ರಮ್ಯಾ ಅವರ ಬಾಯ್ ಫ್ರೆಂಡ್ ಸಂಜೀವ್ ಮೋಹನ್‌!! ಇವರು ರಮ್ಯರನ್ನ ಪ್ರೀತಿಯಿಂದ Divs ಅಂತ ಕರೀತಾರಂತೆ! ಇವರು ಇದೇ ವರ್ಷ ಅಸಮಣೆ ಇರಲಿದ್ದಾರೆ! ನಮ್ಮ ಕ್ರಶ್‌ ಮದುವೆ ಆಗ್ತಿದರೆ ಕಣ್ರಪ್ಪ ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಮುಂದುವರೆದು ಕನ್ನಡ ಫಿಲ್ಮಿಲೋಕ ಎಂಬ ಯುಟ್ಯೂಬ್‌ ಚಾನೆಲ್‌ನಲ್ಲಿ ಈ ಬಗ್ಗೆ ವಿಡಿಯೋ ಶಾರ್ಟ್ಸ್‌ ಹಂಚಿಕೊಳ್ಳಲಾಗಿದೆ. ಇದರಲ್ಲಿ “ರಮ್ಯಾ ಅವರ ಪ್ರೀತಿಯ ಕಥೆ ಹಾಗೂ ಸಂಜೀವ್ ಅವರ ಸೆಲ್ಫ್ ಸ್ಟೈಲ್ ಹಾರ್ಡ್ಕೋರ್ ಲವ್! ಮದುವೆಗೆ ನಿರೀಕ್ಷೆ! ” ಎಂದು ಬರೆಯಲಾಗಿದೆ.

ಇನ್ನು ಸಾಕಷ್ಟು ಮಂದಿ ರಮ್ಯಾ ಮತ್ತು ಈ ವ್ಯಕ್ತಿಯ ಫೋಟೋಗಳನ್ನು ಹಾಕಿಕೊಂಡು ಮದುವೆ ಬಗ್ಗೆ ಪ್ರಸ್ತಾಪ ಮಾಡಿ ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಹಾಗಿದ್ದರೆ ನಿಜವಾಗಿಯೂ ಮಾಜಿ ಸಂಸದೆ ರಮ್ಯಾ ಅವರ ಮದುವೆ ಫಿಕ್ಸ್‌ ಆಗಿದಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ನಟಿ ರಮ್ಯಾ ಕೆಲವು ದಿನಗಳ ಹಿಂದೆ ವಿದೇಶದಲ್ಲಿ ತಮ್ಮ ಗೆಳೆಯನ ಜೊತೆ ಓಡಾಡಿಕೊಂಡಿರುವ ಫೋಟೋ ವೈರಲ್ ಆಗಿತ್ತು. ರಮ್ಯಾ ಸಂಜೀವ್ ಮೋಹನ್ ಎನ್ನುವ ಉದ್ಯಮಿ ಜೊತೆ ಓಡಾಡುತ್ತಿದ್ದಾರೆ. ಇಬ್ಬರೂ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು.
ಇದೀಗ ರಮ್ಯಾ ಈ ವರ್ಷವೇ ಸಂಜೀವ್ ಜೊತೆ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಸಂಜೀವ್ ಪ್ರೀತಿಯಿಂದ ರಮ್ಯಾರನ್ನು ದಿವ್ಸ್ ಎಂದು ಕರೆಯುತ್ತಾರೆ, ಈ ವರ್ಷವೇ ನಮ್ಮ ಕ್ರಶ್ ಮದುವೆಯಾಗಲಿದ್ದಾರೆ ಎಂದು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿಯಬಿಡಲಾಗಿದೆ.

ಈ ವೈರಲ್  ಫೋಟೋವನ್ನು ಪರಿಶೀಲಿಸಿದಾಗ, ಭಾರತ ಪಾಕಿಸ್ತಾನ ಪಂದ್ಯ ನಡೆಯುವ ವೇಳೆ ರಮ್ಯಾ ಅವರು ಕ್ಲಿಕ್ಕಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಟಿವಿ 9 ಕನ್ನಡ ಸುದ್ದಿ ವಾಹಿನಿ ಯುಟ್ಯೂಬ್‌ನಲ್ಲಿ ವಿಡಿಯೋ ಹಂಚಿಕೊಂಡಿದೆ.

ನಟಿ ರಮ್ಯಾ ಸ್ಪಷ್ಟನೆ

ಮುಂದುವರೆದು ರಮ್ಯಾ ಅವರು ಅಧಿಕೃತ ಇನ್‌ಸ್ಟಾಗ್ರಾಂ ಪೇಜ್‌ ಅನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಇದು ಸುಳ್ಳು ಎಂದು ಸ್ವತಃ ರಮ್ಯಾ ಅವರೇ ಸ್ಟೋರಿ/ ಸ್ಟೇಷಸ್‌ ಹಾಕಿಕೊಂಡಿದ್ದಾರೆ.

www (7)

ಒಟ್ಟಾರೆಯಾಗಿ ಹೇಳುವುದಾದರೆ, ನಟಿ ರಮ್ಯ ಅವರು ಮದುವೆ ಆಗುತ್ತಿದ್ದಾರೆ ಅವರ ಮದುವೆ ಹುಡುಗ ಇವರೇ ಎಂಬ ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೋ ಹಾಗೂ ಪೋಸ್ಟ್‌ಗಳು ಸುಳ್ಳು. ಹಳೆಯ ಹಾಗೂ ಎಡಿಟ್‌ ಮಾಡಿದ ಪೋಟೋ ಬಳಿಸಿ ಸುಳ್ಳು ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಸ್ವತಃ ನಟಿ ರಮ್ಯಾ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗಾಘಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಲ್ಲಿಕಾರ್ಜುನ ಖರ್ಗೆಯವರನ್ನು ಅವಮಾನಿಸಿದ್ರಾ ರಾಹುಲ್ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights