FACT CHECK | ಮೊನಾಲಿಸಾ ಕುಂಭಮೇಳಕ್ಕೆ ಮಾರುವೇಷದಲ್ಲಿ ಬಂದಿದ್ದ ಜಿಲ್ಲಾಧಿಕಾರಿ ಎಂಬುದು ಸುಳ್ಳು
ಇತ್ತೀಚೆಗೆ ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಹುಡುಗಿ ಮೊನಾಲಿಸಾ ಚಿತ್ರ ಹಾಗೂ ವಿಡಿಯೋಗಳು ಸಾಮಾಜಿಕ ಮಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದವು. ಆಕರ್ಷಕ ಕಣ್ಣುಗಳ ಕಾರಣಕ್ಕೆ ಆಕೆಯ ಚಿತ್ರ, ವಿಡಿಯೋಗಳನ್ನು ದೊಡ್ಡ ಸಂಖ್ಯೆಯ ಜನರು ವಾಟ್ಸಾಪ್ ಸೇರಿದಂತೆ ಎಲ್ಲೆಡೆ ಹಂಚಿಕೊಂಡಿದ್ದರು. ಆದರೆ, ‘ಈಕೆ ಐಎಎಸ್ ಅಧಿಕಾರಿ. ಮಾರುವೇಷದಲ್ಲಿ ಕುಂಭ ಮೇಳಕ್ಕೆ ಬಂದಿದ್ದರು ಎಂದು ವಿಡಿಯೋ, ಪೋಸ್ಟ್‌ಗಳು ಹರಿದಾಡುತ್ತಿವೆ.’
View this post on Instagram
ಮೊನಾಲಿಸಾ ವಿಡಿಯೋವನ್ನು ಒಳಗೊಂಡ ಪೋಸ್ಟ್ ಅನ್ನು ‘h_sharan4’ ಎನ್ನುವ ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಇದರಲ್ಲಿ ಮೊನಾಲಿಸಾ ವಿವಿಧ ಚಿತ್ರಗಳಿವೆ. ಇದರ ಜೊತೆಗೆ, ‘ಮೊನಾಲಿಸಾ ಅಸಲೀ ಬಣ್ಣ ಬಯಲು. ಮಾರುವೇಷದಲ್ಲಿರುವ ಐಎಎಸ್ ಆಫೀಸರ್ ಅಂತೆ’ ಎಂದು ಇದರಲ್ಲಿ ಬರೆಯಲಾಗಿದೆ.
ಇದೇ ರೀತಿಯ ಪೋಸ್ಟ್‌ಗಳನ್ನು ಇನ್ನು ಹಲವರು ಹಂಚಿಕೊಂಡಿದ್ದು. ಈ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿದಂತೆ, ವೈರಲ್ ಆಗಿದ್ದ ರುದ್ರಾಕ್ಷಿ ಮಾರುತ್ತಿದ್ದ ಹುಡುಗಿ ಮೊನಾಲಿಸಾ ನಿಜಕ್ಕೂ ಐಎಎಸ್ ಅಧಿಕಾರಿಯೇ ಎಂದು ಪರಿಶೀಲಿಸಲು, ಮೊದಲಿಗೆ ‘Monalisa IAS Officer’ ಎಂಬ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಇದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಗಳೂ ಲಭ್ಯವಾಗಿಲ್ಲ.

ಇನ್ನು ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಿದಾಗ ಸೆಲ್ಫಿಗೆ ಮುಗಿಬೀಳುವವರ ಕಾಟ ತಡೆಯಲಾಗದೆ ಕುಟುಂಬಸ್ಥರು ಈಕೆಯನ್ನು ತಮ್ಮ ಊರು ಇಂದೋರ್‌ಗೆ ವಾಪಸ್ ಕರೆಸಿಕೊಂಡಿದ್ದಾರೆ ಎಂದು ‘ಮನಿ ಕಂಟ್ರೋಲ್’ನಲ್ಲಿ ಪ್ರಕಟ ಮಾಡಿರುವ ವರದಿ ಕಂಡು ಬಂತು.
“ನನ್ನ ಕುಟುಂಬ ಮತ್ತು ನನ್ನ ಸುರಕ್ಷತೆಗಾಗಿ ನಾನು ಇಂದೋರ್‌ಗೆ ಹಿಂತಿರುಗಬೇಕಾಯಿತು. ಸಾಧ್ಯವಾದರೆ, ಮುಂದಿನ ಮಹಾಕುಂಭ ಮೇಳಕ್ಕೆ ನಾನು ಹೋಗುತ್ತೇನೆ,” ಎಂದು ಮೊನಾಲಿಸಾ ಹೇಳಿರುವುದಾಗಿ ವರದಿಯಲ್ಲಿ ದಾಖಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಹಾಕುಂಭ ಮೇಳದಲ್ಲಿ ವೈರಲ್ ಆದ ಆಕರ್ಷಕ ಕಣ್ಣುಗಳ ಯುವತಿ ಮೊನಾಲಿಸಾ ಐಎಎಸ್ ಅಧಿಕಾರಿ ಅಲ್ಲ ಎಂಬುದು ಸ್ಪಷ್ಟವಾಗಿದೆ. ಬದಲಿಗೆ ರುದ್ರಾಕ್ಷಿ ಮಾರುವ ಯುವತಿ ಅಷ್ಟೇ ಎಂದು ಪರಿಶೀಲನೆಯಿಂದ ದೃಢಪಟ್ಟಿದೆ.ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
FACT CHECK | ಅರವಿಂದ್ ಕೇಜ್ರಿವಾಲ್ ತಲೆಗೆ ಮುಸ್ಲಿಂ ಟೋಪಿ ಧರಿಸಿರುವ ಚಿತ್ರದ ಕರಪತ್ರ ನಕಲಿ

