FACT CHECK | ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿಲ್ಲ
ಇತ್ತೀಚಿನ ದಿನಗಳಲ್ಲಿ ಸಮಾಜವಾದಿ ಪಕ್ಷದ ನಾಯಕರಿಗೆ ಒಳ್ಳೆಯ ಬುದ್ಧಿ ಬಂದಿದೆ. ಆ ಪಕ್ಷದ ನಾಯಕರಾದ ಅಖಿಲೇಶ್ ಯಾದವ್, ಡಿಂಪಲ್ ಯಾದವ್ ಸೇರಿದಂತೆ ಹಲವರು ಈಗ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ಹಿಂದೂ ಧರ್ಮದ ಆಚರಣೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಬಿಜೆಪಿಯೊಂದಿಗೆ ಗುರುತಿಸಿಕೊಂಡರೆ ಅಚ್ಚರಿ ಇಲ್ಲ ಎಂದು ಪೋಸ್ಟ್ ವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
सभी सपाई #यदमुल्लों को सनातन के विरुद्ध भड़काकर,
उनके मालिक के बाद उनकी मालकिन डिम्पल भी खुद चोरी छिपे कुंभ स्नान करके अपने पाप कम करने का प्रयास करते हुए..
पर इनके सनातन विरोधी पाप यमराज के लठ्ठ से ही धोये जाऐंगे..!!#डिम्पल_यादव#महाकुंभ2025 #महाकुंभ_2025_प्रयागराज pic.twitter.com/RNeKhkyyFr
— Thakur Raju Parmar (@raju_sankh32277) January 30, 2025
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕೂಡ ಡಿಂಪಲ್ ಯಾದವ್ ಅವರು ನದಿಯೊಂದರಲ್ಲಿ ಸ್ನಾನ ಮಾಡುತ್ತಿದ್ದು, ಇದರಲ್ಲಿ ಅವರು ಹಿಂದೂ ಧರ್ಮದ ಆಚರಣೆಗಳನ್ನು ಪಾಲಿಸಿದ್ದಾರೆ ಎಂಬುದು ಕಂಡು ಬಂದಿದೆ. ಹೀಗಾಗಿ ವೈರಲ್ ವಿಡಿಯೋ ನೋಡಿದ ಹಲವು ಮಂದಿ ಇದು ಮಹಾ ಕುಂಭಮೇಳದಲ್ಲಿ ಡಿಂಪಲ್ ಯಾದವ್ ಅವರು ಪವಿತ್ರ ಸ್ನಾನ ಮಾಡಿರುವುದು ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, 18 ಅಕ್ಟೋಬರ್ 2022 ರಂದು The HFF ನ್ಯೂಸ್ ಎಂಬ ಸುದ್ದಿ ಸಂಸ್ಥೆಯು ತನ್ನ ಯುಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡ ಪೂರ್ಣ ಆವೃತ್ತಿಯ ವಿಡಿಯೋ ಲಭ್ಯವಾಗಿದೆ. ಇದರಲ್ಲಿ “ಗಂಗಾ ಮಡಿಲಿನಲ್ಲಿ ಮುಲಾಯಂ : ನೊಂದು ಚಿತಾಭಸ್ಮ ಅರ್ಪಿಸಿದ ಅಖಿಲೇಶ್” ಎಂಬ ಅರ್ಥ ಬರುವಂತೆ ಶೀರ್ಷಿಕೆ ನೀಡಿರುವುದು ಕಂಡು ಬಂದಿದೆ.

ಈ ಕುರಿತು ಮತ್ತಷಟು ಸರ್ಚ್ ಮಾಡಿದಾಗ, 17 ಅಕ್ಟೋಬರ್ 2022 ರಂದು ನ್ಯೂಸ್ 18 ಯುಪಿ ಉತ್ತರಖಂಡದ ಅಧಿಕೃತ YouTube ಚಾನಲ್‌ನಲ್ಲಿ “ಮುಲಾಯಂ ಸಿಂಗ್ ಅಸ್ತಿ ವಿಸರ್ಜಿಸಿ ಅಖಿಲೇಶ್ ಯಾದವ್ ಗಂಗಾ ನದಿಯಲ್ಲಿ ಸ್ನಾನ ಮಾಡಿದರು ಮೋಕ್ಷಕ್ಕಾಗಿ ಪ್ರಾರ್ಥಿಸಿದರು” ಎಂಬ ಶೀರ್ಷಿಕೆಯೊಂದಿಗೆ ವೈರಲ್ ವಿಡಿಯೋವಿನ ದೃಶ್ಯಗಳನ್ನು ಹಂಚಿಕೊಂಡಿರುವುದು ಕಂಡುಬಂದಿದೆ. 17 ಅಕ್ಟೋಬರ್ 2022 ರಂದು ಮುಲಾಯಂ ಸಿಂಗ್ ಯಾದವ್ ಅವರ ಚಿತಾಭಸ್ಮವನ್ನು ಅರ್ಪಿಸುವ ಸಮಯದಲ್ಲಿ ಹರಿದ್ವಾರದಲ್ಲಿ ಡಿಂಪಲ್ ಯಾದವ್ ಸೇರಿದಂತೆ ಕುಟುಂಬದ ಇತರ ಸದಸ್ಯರು ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದಾರೆ ಎಂದು ವಿಡಿಯೋದ ವಿವರಣೆಯಲ್ಲಿ ಹೇಳಲಾಗಿದೆ.
कुंभ में डिम्पल यादव
कुछ गड़बड़ जरूर है… परसों हरा कुर्ता भदौरिया
कल अखिलेश यादव …
आज डिम्पल यादव का संगम पर महाकुंभ स्नान.!!
लेकिन अखिलेश यादव और डिम्पल अलग-अलग दिन नहाने काहे पंहुची, एकसाथ नहाना चाहिए के नहीं pic.twitter.com/uJjqNj1EDW— Devilal Saini (@Devilal_Saini69) January 28, 2025
ಒಟ್ಟಾರೆಯಾಗಿ ಹೇಳುವುದಾದರೆ, ಈ ಎರಡು ವರದಿಗಳ ಆಧಾರದಲ್ಲಿ ಹೇಳುವುದಾದರೆ ವೈರಲ್ ವಿಡಿಯೋದಲ್ಲಿ ಡಿಂಪಲ್ ಯಾದವ್ ಅವರು ಅಕ್ಟೋಬರ್ 2022 ರಲ್ಲಿ ಉತ್ತರಖಂಡದ ಹರಿದ್ವಾರದಲ್ಲಿ ಗಂಗಾನದಿಯಲ್ಲಿ ತಮ್ಮ ಮಾವನವರ ಚಿತಾಭಸ್ಮ ಅರ್ಪಣೆಯ ನಂತರ ಸ್ನಾನ ಮಾಡಿರುವುದು ಸ್ಪಷ್ಟವಾಗಿದೆ. ಈ ಹಳೆಯ ವಿಡಿಯೋವನ್ನು ಬಳಸಿಕೊಂಡು ಸುಳ್ಳು ನಿರೂಪಣೆಯೊಂದಿಗೆ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಅಂಬೇಡ್ಕರ್ ಪ್ರತಿಮೆ ವಿರೂಪಗೊಳಿಸಿದ ವ್ಯಕ್ತಿಯನ್ನು ನ್ಯಾಯಾಲಯದಲ್ಲಿ ಥಳಿಸಲಾಗಿದೆಯೇ?

