FACT CHECK | ಕ್ರಿಕೆಟಿಗ ರಿಂಕು ಸಿಂಗ್ ಎದೆಯ ಮೇಲೆ ಅಂಬೇಡ್ಕರ್ ಟ್ಯಾಟೂ ಹಾಕಿಸಿಕೊಂಡಿರುವ ಫೋಟೋದ ಅಸಲೀಯತ್ತೇನು?
ಕ್ರಿಕೆಟಿಗ ರಿಂಕು ಸಿಂಗ್ ತನ್ನ ಎದೆಯ ಮೇಲೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಟ್ಯಾಟೂ ಹಾಕಿಸಿಕೊಂಡಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಫೋಟೋವನ್ನು ಗಮನಿಸಿದಾಗ ಇದು ಯಾವುದೊ ಕ್ರಿಕೆಟ್ ಗ್ರೌಂಡ್ನಲ್ಲಿ ನಿಂತಿರುವಂತೆ ಕಾಣುತ್ತದೆ. ರಿಂಕು ಸಿಂಗ್ ಅವರ ಮದುವೆ ಸುದ್ದಿಗಳ ನಡುವೆ ಈ ಫೋಟೋ ಹರಿದಾಡುತ್ತಿದೆ.
Rinku Bhai pic.twitter.com/gNN7rrXUuq
— Lakhan meena (@deshbhakt563) January 26, 2025
ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ಸ್ಟಾರ್ ಆಟಗಾರ ರಿಂಕು ಸಿಂಗ್ ಅವರು ಕಳೆದ ಕೆಲವು ದಿನಗಳಿಂದ ತಮ್ಮ ವೃತ್ತಿಜೀವನಕ್ಕಿಂತ ತಮ್ಮ ಮದುವೆಯ ಬಗ್ಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಏತನ್ಮಧ್ಯೆ, ರಿಂಕು ಸಿಂಗ್ ಅವರು ಶರ್ಟ್ ಹಾಕದಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇವರ ಎದೆಯ ಮೇಲೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಟ್ಯಾಟೂ ಗೋಚರಿಸುತ್ತದೆ. ಫೋಟೋವನ್ನು ಗಮನಿಸಿದಾಗ ಇದು ಯಾವುದೊ ಕ್ರಿಕೆಟ್ ಗ್ರೌಂಡ್ನಲ್ಲಿ ನಿಂತಿರುವಂತೆ ಕಾಣುತ್ತದೆ.
Rinku bhai pic.twitter.com/smx14lYiLo
— दिव्या कुमारी (@divyakumaari) January 27, 2025
ರಿಂಕು ಸಿಂಗ್ ಅವರ ಈ ಚಿತ್ರವನ್ನು ಹಲವು ಸಾಮಜಿಕ ಮಾಧ್ಯಮಗಳ ಬಳಕೆದಾರರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ರಿಂಕು ನಿಜಕ್ಕೂ ಬಿ.ಆರ್ ಅಂಬೇಡ್ಕರ್ ಅವರ ಟ್ಯೂಟೂ ಹಾಕಿಸಿಕೊಂಡಿದ್ದಾರಾ?, ಈ ವೈರಲ್ ಫೋಟೋದ ನಿಜವೇ ಎಂದು ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನುಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ರಿಂಕು ಸಿಂಗ್ ಅವರ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಪರಿಶೀಲಿಸಿದಾಗ, ಇಂತಹ ಯಾವುದೇ ಪೋಟೊಗಳು ಲಭ್ಯವಾಗಲಿಲ್ಲ. decopy.ai ಎಂಬ AI ಪರಿಕರದಿಂದ ಪರಿಶೀಲಿಸಿದಾಗ, ಈ ಫೋಟೋ 92.84% ನಕಲಿ ಎಂದು ತಿಳಿದುಬಂದಿದೆ.
![]()
ಈಗ ವೈರಲ್ ಆಗಿರುವ ಡಾ. ಬಿಆರ್ ಅಂಬೇಡ್ಕರ್ ಫೋಟೋದ ಫೋಟೋ ಕೂಡ AI ತಂತ್ರಜ್ಞಾನದಿಂದ ಸೃಷ್ಟಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಜನರು ಇಂತಹ ಸುದ್ದಿಗಳನ್ನು ನಂಬುವ ಮುನ್ನ ಎಚ್ಚರಿಕೆ ವಹಿಸಬೇಕು. ಸುದ್ದಿಗಳನ್ನು ಪರಿಶೀಲಿಸಲು ವಿಶ್ವಾಸಾರ್ಹ ಮೂಲಗಳನ್ನು ಅವಲಂಬಿಸಬೇಕು.
ರಿಂಕು ಸಿಂಗ್ ಇತ್ತೀಚೆಗೆ ತಮ್ಮ ಕ್ರಿಕೆಟ್ ಪ್ರದರ್ಶನಕ್ಕಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಮೊದಲು ನಿಶ್ಚಿತಾರ್ಥದ ಸುಳ್ಳು ಸುದ್ದಿ, ಈಗ ಟ್ಯಾಟೂದ ಸುಳ್ಳು ಫೋಟೋ, ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ರಿಂಕು ಸಿಂಗ್ ಕುರಿತು ನಿರಂತರವಾಗಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇಂತಹ ಸುದ್ದಿಗಳಿಂದ ಜನರು ದಾರಿ ತಪ್ಪಬಾರದು. ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕ್ರಿಕೆಟಿಗ ರಿಂಕು ಸಿಂಗ್ ಅವರು ತಮ್ಮ ಎದೆಯ ಮೇಲೆ ಅಂಬೇಡ್ಕರ್ ಅವರ ಟ್ಯಾಟೂ ಹಾಕಿಸಿಕೊಂಡಿಲ್ಲ ಬದಲಾಗಿ ಇದು ಕೃತಕ ಬುದ್ದಿಮತ್ತೆಯಿಂದ ರಚಿತವಾಗಿದೆ ಎಂಬುದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿಲ್ಲ

