FACT CHECK | ಅಯೋಧ್ಯೆಯ ಹಳೆಯ ಫೋಟೋವನ್ನು ಮಹಾ ಕುಂಭಮೇಳದ್ದು ಎಂದು ತಪ್ಪಾಗಿ ಹಂಚಿಕೆ
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಲಕ್ಷಾಂತರ ಭಕ್ತರು ಬರುತ್ತಿದ್ದಾರೆ. ಬುಧವಾರ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದಲ್ಲಿ ಸುಮಾರು 30 ಜನ ಸಾವನಪ್ಪಿದ್ದರು. 60ಕ್ಕೂ ಅದಿಕ ಮಂದಿ ಗಾಯಗೊಂಡಿದ್ದರು. ಈ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರೀ ಮುನ್ನೆಚಿರಿಕೆ ವಹಿಸಲಾಗಿದೆ ಎಂದು ಉತ್ತರ ಪ್ರದೇಶದ ಸರ್ಕಾರ ಹೇಳಿದೆ. ಕುಂಭಮೇಳ ಹಿನ್ನೆಲೆ ಪ್ರಯಾಗ್‌ರಾಜ್‌ನ ರಸ್ತೆಯಲ್ಲಿ ಜನಟ್ಟಣೆ ತುಂಬಿದೆ ಎಂಬ ಫೋಟೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
जो श्रद्धा भाव से जा रहे हैं वह इस कुंभ की करोड़ों की भीड़ में भी सुखी हैं ।।
और जो मौज मस्ती के मन से जा रहे हैं वह अपने घर में भी दुखी हैं ।।
धन्यवाद ।।
जय गंगा मैया ।। pic.twitter.com/d9M1xJka7o— THE JAT ASSOCIATION (@Jatassociation) January 30, 2025
ಈ ಫೋಟೋವನ್ನು ‘ದಿ ಜಾಟ್ ಅಸೋಸಿಯೇಷನ್’ ಎಂಬ ಎಕ್ಸ್ (ಟ್ವೀಟರ್) ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ. “ಶ್ರದ್ಧಾ ಭಾವದಿಂದ ಹೋಗುವವರು ಈ ಕುಂಭದ ಕೋಟಿ ಜನರ ನಡುವೆಯೂ ಸಂತೋಷವಾಗಿರುತ್ತಾರೆ. ಮೋಜು-ಮಸ್ತಿಗಾಗಿ ಹೋಗುವವರು ತಮ್ಮ ಮನೆಯಲ್ಲೂ ದುಃಖಿಗಳಾಗಿರುತ್ತಾರೆ. ಧನ್ಯವಾದಗಳು. ಜೈ ಗಂಗಾ ಮಾಯಾ,” ಎಂದು ಬರೆಯಲಾಗಿದೆ. ಹಂಚಿಕೊಳ್ಳಲಾದ ಈ ಫೋಟೋದಲ್ಲಿ ಜನಸಂದಣಿಯ ನಡುವೆ ಆಂಬ್ಯುಲೆನ್ಸ್ ಕೂಡ ಕಾಣಿಸುತ್ತಿದೆ. ಹಾಗಿದ್ದರೆ ಈ ಫೋಟೊ ನಿಜವಾಗಿಯೂ ಮಹಾಕುಂಭ ಮೇಳಕ್ಕೆ ಸಂಬಂಧಿಸಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 28 ಜನವರಿ 2025 ರ ಹಿಂದೂಸ್ತಾನ್ ಟೈಮ್ಸ್ ಈ ಬಗ್ಗೆ ವರದಿ ಮಾಡಿದೆ. ” ಮಹಾ ಕುಂಭದ ನಂತರ ಲಕ್ಷಾಂತರ ಭಕ್ತರು ಅಯೋಧ್ಯೆಗೆ ಆಗಮಿಸಿದ್ದರಿಂದ ಭಾರೀ ಜನಸಂದಣಿ ಮತ್ತು ಅವ್ಯವಸ್ಥೆ ಉಂಟಾಗಿತ್ತು. ಸುಮಾರು 40 ಲಕ್ಷ ಭಕ್ತರು ಬಂದಿದ್ದರಿಂದ ಅಯೋಧ್ಯೆಯ ಎಲ್ಲಾ ರಸ್ತೆಗಳು ಜಾಮ್ ಆಗಿ 10 ಕಿಲೋಮೀಟರ್‌ವರೆಗೆ ಸಾಲುಗಟ್ಟಿ ನಿಂತಿತು. ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟಕರವಾಯಿತು ” ಎಂದು ವರದಿಯಲ್ಲಿ ಉಲ್ಲೇಖ ಮಾಡಿದೆ.
27 ಜನವರಿ 2025 ರ ಎಬಿಪಿ ನ್ಯೂಸ್‌ನ ಗುಜರಾತಿ ವೆಬ್‌ಸೈಟ್ ಕೂಡ ಈ ವೈರಲ್ ಫೋಟೋವನ್ನು ಬಳಸಿಕೊಂಡು ಸುದ್ದಿ ಮಾಡಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. 26 ಜನವರಿಯಿಂದ ಈವರೆಗೆ 25 ಲಕ್ಷಕ್ಕೂ ಹೆಚ್ಚು ಭಕ್ತರು ರಾಮಲಲ್ಲಾ ದರ್ಶನ ಪಡೆದಿದ್ದಾರೆ. ಮೌನ ಅಮಾವಾಸ್ಯೆ ಮತ್ತು ಬಸಂತ ಪಂಚಮಿಯವರೆಗೂ ಈ ಜನಸಂದಣಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಉಲ್ಲೇಖ ಮಾಡಿದೆ. ಕಳೆದ 30 ಗಂಟೆಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಭಕ್ತರು ರಾಮಲಲ್ಲಾ ದರ್ಶನ ಪಡೆದಿದ್ದಾರೆ. ಈ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ. ಭಕ್ತರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಆಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ. ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಎಬಿಪಿ ನ್ಯೂಸ್ ತಿಳಿಸಿದೆ.
अयोध्या में टूटे पुराने सभी रिकार्ड एक दिन में 25 लाख श्रद्धालु पहुंचे रामलला के दर्शन करने।
अयोध्या में सभी पथ श्रद्धालुओं से भरे है।पिछले 30 घंटे में लगभग 25 लाख से अधिक श्रद्धालु दर्शन के लिए पहुंच चुके हैं।बड़ी संख्या में अभी भी श्रद्धालुओं के आने का क्रम जारी है।श्रद्धालु… pic.twitter.com/dYrHK8bLDl
— Suresh Singh (@sureshsinghj) January 27, 2025
ಈ ಎರಡೂ ಸುದ್ದಿಗಳ ಜೊತೆಗೆ, ಈ ಫೋಟೋವನ್ನು ಪತ್ರಕರ್ತ ಸುರೇಶ್ ಸಿಂಗ್ ಅವರು ತಮ್ಮ ಟ್ವೀಟರ್‌ನಲ್ಲಿ (ಎಕ್ಸ್) ಹಂಚಿಕೊಂಡಿದ್ದಾರೆ. 27 ಜನವರಿಯಂದು ಈ ಫೋಟೋವನ್ನು ಪೋಸ್ಟ್ ಮಾಡಿ, “ಅಯೋಧ್ಯೆಯಲ್ಲಿ ಎಲ್ಲಾ ಹಳೆಯ ದಾಖಲೆಗಳು ಮುರಿದು, ಒಂದೇ ದಿನದಲ್ಲಿ 25 ಲಕ್ಷ ಭಕ್ತರು ರಾಮಲಲ್ಲಾ ದರ್ಶನಕ್ಕೆ ಆಗಮಿಸಿದ್ದಾರೆ. ಅಯೋಧ್ಯೆಯ ಎಲ್ಲಾ ಪಥಗಳು ಭಕ್ತರಿಂದ ತುಂಬಿವೆ. ಕಳೆದ 30 ಗಂಟೆಗಳಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನಕ್ಕೆ ಆಗಮಿಸಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುತ್ತಲೇ ಇದ್ದಾರೆ. ಭಕ್ತರು ರಾಮಲಲ್ಲಾ ದೇವಸ್ಥಾನ ಮತ್ತು ಹನುಮಾನ್‌ಗಢಿ ದೇವಸ್ಥಾನದಲ್ಲಿ ದರ್ಶನ ಪಡೆಯುತ್ತಿದ್ದಾರೆ. ಬರುವ ಅಮಾವಾಸ್ಯೆ, ಬಸಂತ ಪಂಚಮಿ ಹಬ್ಬದವರೆಗೂ ಅಯೋಧ್ಯೆಯಲ್ಲಿ ಭಕ್ತರ ಸಂದಣಿ ಹೀಗೆಯೇ ಮುಂದುವರಿಯುವ ಸಾಧ್ಯತೆಯಿದೆ,” ಎಂದು ಬರೆದುಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ರಸ್ತೆ ತುಂಬ ಜನ ಸೇರಿರುವ ಅಯೋಧ್ಯೆಯ ಒಂದು ಹಳೆಯ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಅದನ್ನು ಮಹಾ ಕುಂಭದ ಜನಸಂದಣಿ ಎಂದು ಹೇಳಲಾಗುತ್ತಿದೆ. ಪರಿಶೀಲಿಸಿದಾಗ ಈ ಫೋಟೋ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ್ದಲ್ಲ, ಬದಲಾಗಿ ಅಯೋಧ್ಯೆಯದ್ದು ಎಂದು ತಿಳಿದುಬಂದಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕ್ರಿಕೆಟಿಗ ರಿಂಕು ಸಿಂಗ್ ಎದೆಯ ಮೇಲೆ ಅಂಬೇಡ್ಕರ್ ಟ್ಯಾಟೂ ಹಾಕಿಸಿಕೊಂಡಿರುವ ಫೋಟೋದ ಅಸಲೀಯತ್ತೇನು?

