FACT CHECK | ದೆಹಲಿ ಮೆಟ್ರೋ ಮತ್ತು ನಮೋ ಭಾರತ್ ಮೆಟ್ರೋ ರೈಲುಗಳು ಡಿಕ್ಕಿಯಾಗಿದ್ದು ನಿಜವೇ?
ದೆಹಲಿ ಮೆಟ್ರೋ ಮತ್ತು ನಮೋ ಭಾರತ್ ಮೆಟ್ರೋ ರೈಲುಗಳು ಡಿಕ್ಕಿ ಹೊಡೆದಿವೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
View this post on Instagram
ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ದೆಹಲಿ ಮೆಟ್ರೋ ಮತ್ತು ನಮೋ ಭಾರತ್ ಮೆಟ್ರೋ ರೈಲುಗಳು ಡಿಕ್ಕಿ ಹೊಡೆಯುವುದರಿಂದ ಪಾರಾಗಿವೆ ಎಂದು ಹೇಳಿಕೊಂಡು ವಿಡಿಯೋವನ್ನು ಹಂಚಿಕೊಂಡಿದ್ದಾರೆ. “matlab_kii_duniyaa” ಎಂಬ Instagram ಬಳಕೆದಾರರು “ಸತ್ಯನಾ?” ಎಂದು ಕೇಳಿದ್ದಾರೆ.
View this post on Instagram
“king_off_bihar200k” ಎಂಬ ಇನ್ನೊಬ್ಬ ಬಳಕೆದಾರರು “ಯಾವ ಸ್ಟೇಷನ್?” ಎಂದು ಕೇಳಿದ್ದಾರೆ. ಎರಡೂ ಪೋಸ್ಟ್ಗಳು “ದೆಹಲಿ ಮೆಟ್ರೋ ಮತ್ತು ನಮೋ ಭಾರತ್ ಮೆಟ್ರೋ ಡಿಕ್ಕಿ ಹೊಡೆಯುವುದರಿಂದ ಪಾರಾಗಿವೆ” ಎಂಬ ಶೀರ್ಷಿಕೆ ಹಾಕಲಾಗಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೊಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಎನ್ಡಿಟಿವಿ 2025 ರ ಜನವರಿ 12ರ ವರದಿ ಲಭ್ಯವಾಗಿದೆ. ಆ ವರದಿಯಲ್ಲಿ ಪೂರ್ವ ಫ್ರೆಂಚ್ ನಗರವಾದ ಸ್ಟ್ರಾಸ್ಬರ್ಗ್ನಲ್ಲಿ ಒಂದು ಸುರಂಗದಲ್ಲಿ ಎರಡು ಟ್ರಾಮ್ಗಳು ಡಿಕ್ಕಿ ಹೊಡೆದು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಡಿಕ್ಕಿ ಸ್ಟ್ರಾಸ್ಬರ್ಗ್ನ ಪ್ರಮುಖ ರೈಲು ನಿಲ್ದಾಣದ ಬಳಿ ಸಂಭವಿಸಿದೆ. ಇದು ಪ್ಯಾರಿಸ್ನ ಹೊರಗೆ ಫ್ರಾನ್ಸ್ನಲ್ಲಿ ಅತ್ಯಂತ ಜನನಿಬಿಡ ನಿಲ್ದಾಣಗಳಲ್ಲಿ ಒಂದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
![]()
ಅಲ್ ಜಜೀರಾದಲ್ಲಿ ಇದೇ ರೀತಿಯ ವರದಿ ಇದೆ. ಫ್ರಾನ್ಸ್ನ ಸ್ಟ್ರಾಸ್ಬರ್ಗ್ನಲ್ಲಿರುವ ಪ್ರಮುಖ ರೈಲು ನಿಲ್ದಾಣದ ಬಳಿ ಒಂದು ಸುರಂಗದಲ್ಲಿ ಎರಡು ಟ್ರಾಮ್ಗಳು ಡಿಕ್ಕಿ ಹೊಡೆದು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ವರದಿ ಮಾಡಲಾಗಿದೆ. ಬಿಬಿಸಿಯ ವರದಿಯು 60ಕ್ಕೂ ಹೆಚ್ಚು ಜನರು ಈ ಡಿಕ್ಕಿಯಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.
Dozens of people were injured when two trams collided in a tunnel near the main train station in Strasbourg in France. pic.twitter.com/ViC7xkcvMK
— Al Jazeera English (@AJEnglish) January 12, 2025
ಒಟ್ಟಾರೆಯಾಗಿ ಹೇಳುವುದಾದರೆ, ಫ್ರಾನ್ಸ್ನಲ್ಲಿ ನಡೆದ ಎರಡು ಟ್ರಾಮ್ಗಳ ಡಿಕ್ಕಿಯನ್ನು ದೆಹಲಿ ಮೆಟ್ರೋ ಮತ್ತು ನಮೋ ಭಾರತ್ ರೈಲುಗಳ ಡಿಕ್ಕಿ ಎಂದು ತಪ್ಪಾಗಿ ಬಿಂಬಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಜನವರಿ 2ನೇ ವಾರದಲ್ಲಿ ಫ್ರಾನ್ಸ್ನ ಸ್ಟ್ರಾಸ್ಬರ್ಗ್ನಲ್ಲಿ ನಡೆದ ಘಟನೆ ಇದಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮುಸ್ಲಿಮರು ರೈಲಿನ ಸೀಟಿಗೆ ಬೆಂಕಿ ಹಚ್ಚಿದ್ದಾರೆ ಎಂದು ಕೋಮು ನಿರೂಪಣೆಯೊಂದಿಗೆ ಹಳೆಯ ವಿಡಿಯೋ ಹಂಚಿಕೆ

