FACT CHECK | 2019ರ ಪುಲ್ವಾಮ ದಾಳಿಯ ವಿಡಿಯೋ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ನಿರ್ಜನ ಪ್ರದೇಶವೊಂದರಲ್ಲಿ ವಿರಳವಾಗಿ ಓಡಾಡುತ್ತಿರುವ ವಾಹನಗಳು. ನೋಡ ನೋಡುತ್ತಿದಂತೆ ವಾಹನದ ಮೇಲೆ ದಾಳಿ ನಡೆದು ಸ್ಪೋಟ ಸಂಭವಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವನ್ನು ಫೆಬ್ರವರಿ 14, 2019 ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫೆಬ್ರವರಿ 14, 2019 ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಯಿಂದಾಗಿ 40 ಕ್ಕೂ ಯೋಧರು ಕೊನೆಯುಸಿರೆಳೆದಿದ್ದರು. ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಿಂದಾಗಿ ಭಾರತೀಯ ಸೇನೆಯ ವಾಹನದಲ್ಲಿ ತೆರಳುತ್ತಿದ್ದ ಯೋಧರು ಬಲಿಯಾಗಿದ್ದರು.

ಫೇಸ್‌ಬುಕ್ ಬಳಕೆದಾರರೊಬ್ಬರು ಫೆಬ್ರವರಿ 11, 2025 ರಂದು ಈ ವೈರಲ್ ವಿಡಿಯೋವನ್ನು ಹಂಚಿಕೊಂಡು, “ಬ್ಲಾಕ್ ಡೇ- 14 ಫೆಬ್ರವರಿ 2019 ಪುಲ್ವಾಮಾ ದಾಳಿ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು,  ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡು ಗೂಗಲ್ ಲೆನ್ಸ್ ಸರ್ಚ್ ಮಾಡಿದಾಗ, military.com ವೆಬ್‌ಸೈಟ್‌ನಲ್ಲಿ ವಿಡಿಯೋಗೆ ಸಂಬಂಧಿಸಿದ ವರದಿ ಲಭ್ಯವಾಗಿದೆ. ಈ ವರದಿಯನ್ನು ಏಪ್ರಿಲ್ 27, 2011 ರಂದು ಪ್ರಕಟಿಸಲಾಯಿತು. ನೀಡಿರುವ ಮಾಹಿತಿಯ ಪ್ರಕಾರ, ಈ ವಿಡಿಯೋ ಇರಾಕ್‌ನಿಂದ ಬಂದಿದೆ.

vishvasnews

 BidentheBrig ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವನ್ನು ಕಂಡುಕೊಂಡಿದ್ದೇವೆ. ಈ ವಿಡಿಯೋವನ್ನು ಡಿಸೆಂಬರ್ 5, 2011 ರಂದು ಅಪ್‌ಲೋಡ್ ಮಾಡಲಾಗಿದೆ. ವಿಡಿಯೋದಲ್ಲಿ ತೋರಿಸಿರುವ ವರ್ಷದ ಪ್ರಕಾರ, ಈ ಘಟನೆ 2007 ರಲ್ಲಿ ಇರಾಕ್‌ನಲ್ಲಿ ನಡೆದಿದೆ. ಮಾರ್ಕ್ ಡೇಲ್ ಎಂಬ ಫೇಸ್‌ಬುಕ್ ಬಳಕೆದಾರರು ಕೂಡ ಇದೇ ವಿಡಿಯೋ ಹಂಚಿಕೊಂಡಿದ್ದು, ಈ ಘಟನೆ ಸೆಪ್ಟೆಂಬರ್ 2007 ರಲ್ಲಿ ಇರಾಕ್‌ನ ಕ್ಯಾಂಪ್ ತಾಜಿಯಲ್ಲಿ ಸಂಭವಿಸಿದೆ ಎಂದು ಹೇಳಲಾಗುತ್ತದೆ.

ಇರಾಕ್‌ನಲ್ಲಿ 2007 ರಲ್ಲಿ ನಡೆದ ಘಟನೆ ಎಂದು ಹೇಳಿಕೊಂಡು ಹಲವಾರು ಇತರ ಯೂಟ್ಯೂಬ್ ಚಾನೆಲ್‌ಗಳು ಮತ್ತು ಫೇಸ್‌ಬುಕ್ ಪುಟಗಳಲ್ಲಿ ವೈರಲ್ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಟಿವಿ9 ಕನ್ನಡ ತನಿಖೆ ನಡೆಸಿ ಪುಲ್ವಾಮಾ ದಾಳಿಯ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿರುವುದು ವಾಸ್ತವವಾಗಿ ಇರಾಕ್‌ನದ್ದು ಎಂದು ಈ ಮೂಲಕ ಸ್ಪಷ್ಟಪಡಿಸುತ್ತದೆ. ಈ ವಿಡಿಯೋ 2007 ರಲ್ಲಿ ಇರಾಕ್‌ನಲ್ಲಿ ನಡೆದ ಘಟನೆಯದ್ದಾಗಿದ್ದು, ಇದನ್ನು ಈಗ ಪುಲ್ವಾಮಾ ದಾಳಿಗೆ ತಳುಕು ಹಾಕುವ ಮೂಲಕ ಹಂಚಿಕೊಳ್ಳಲಾಗುತ್ತಿದೆ.

ಮಾರ್ಕ್ ಡೇಲ್ ಎಂಬ ಫೇಸ್‌ಬುಕ್ ಬಳಕೆದಾರರು ಹಂಚಿಕೊಂಡ ವೈರಲ್ ವಿಡಿಯೋ ಲಭ್ಯವಾಗಿದ್ದು, ಮೇ 12, 2013 ರಂದು ಹಂಚಿಕೊಂಡ ಪೋಸ್ಟ್‌ನಲ್ಲಿ, ಈ ಘಟನೆ ಸೆಪ್ಟೆಂಬರ್ 2007 ರಲ್ಲಿ ಇರಾಕ್‌ನ ಕ್ಯಾಂಪ್ ತಾಜಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ.

ಇದೇ ವೀಡಿಯೊವನ್ನು ಹಲವಾರು ಇತರ YouTube ಚಾನೆಲ್‌ಗಳು ಮತ್ತು Facebook ಪುಟಗಳಲ್ಲಿ ಹಂಚಿಕೊಳ್ಳಲಾಗಿದೆ, ಎಲ್ಲವೂ 2007 ರಲ್ಲಿ ಇರಾಕ್‌ನಿಂದ ಬಂದಿದೆ ಎಂದು ಹೇಳಿಕೊಳ್ಳುತ್ತವೆ.

ಹಿಂದೆಯೂ ಇದೇ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾ ಫೆಬ್ರವರಿ 2019 ಪುಲ್ವಾಮಾ ದಾಳಿ” ಎಂದು ತಪ್ಪುದಾರಿಗೆಳೆಯುವಂತೆ ಹಂಚಿಕೊಳ್ಳಲಾಗಿತ್ತು. ಪುಲ್ವಾಮಾ ದಾಳಿಯ ದೃಶ್ಯಗಳಾಗಿ ಹಂಚಿಕೊಳ್ಳಲಾಗುತ್ತಿರುವ ವೀಡಿಯೊ ವಾಸ್ತವವಾಗಿ 2007 ರಲ್ಲಿ ಇರಾಕ್‌ನಲ್ಲಿ ನಡೆದ ಘಟನೆಯಾಗಿದ್ದು, ಅದನ್ನು ಈಗ ಪುಲ್ವಾಮಾ ದಾಳಿಗೆ ಲಿಂಕ್ ಮಾಡುವ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ತಪ್ಪುದಾರಿಗೆಳೆಯುತ್ತದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪ್ರಧಾನಿ ನರೇಂದ್ರ ಮೋದಿಗೆ ಹಸ್ತಲಾಘವ ನೀಡಲು ನಿರಾಕರಿಸಿದ್ರಾ ಫ್ರಾನ್ಸ್‌ ಅಧ್ಯಕ್ಷ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights