FACT CHECK | ಮಹಾಕುಂಭ ಮೇಳದಲ್ಲಿ ಶಿವರಾತ್ರಿಯ ಸಲುವಾಗಿ ಆಕಾಶದಲ್ಲಿ ತ್ರಿಶೂಲದ ಚಿತ್ತಾರವನ್ನು ರಚಿಸಲಾಗಿದೆಯೇ?
ಮಹಾ ಕುಂಭಮೇಳದ ಕೊನೆಯ ದಿನದಂದು, ಅಂದರೆ ಫೆಬ್ರವರಿ 26, 2025 ರಂದು ಪ್ರಯಾಗ್ರಾಜ್ನಲ್ಲಿ ನಡೆದ ಭಾರತೀಯ ವಾಯುಪಡೆಯ ವಾಯು ಪ್ರದರ್ಶನದ ಸಮಯದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾದ ಫೋಟೋದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಲವರು ವೈರಲ್ ಫೋಟೋವನ್ನು ಹಂಚಿಕೊಂಡು ಭಾರತೀಯ ವಾಯುಪಡೆಯಿಂದ ಶಿವರಾತ್ರಿಯ ಸಲುವಾಗಿ ಆಕಾಶದಲ್ಲಿ ತ್ರಿಶೂಲದ ಚಿತ್ತಾರವನ್ನು ರಚಿಸಲಾಗಿದೆ ಎಂದು ಬರೆದುಕೊಳ್ಳಲಾಗಿದೆ.

ವೈರಲ್ ಫೋಟೋದಲ್ಲಿ ಕೂಡ ಭಾರತೀಯ ವಾಯುಪಡೆ ಆಕಾಶದಲ್ಲಿ ತ್ರಿಶೂಲದ ಚಿತ್ತಾರವನ್ನು ರಚಿಸಿರಿವುದು ಕಂಡು ಬಂದಿದೆ. ಹೀಗಾಗಿ ಈ ಫೋಟೋವನ್ನು ಹಲವರು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ವೈರಲ್ ಚಿತ್ರದ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ಗೂಗಲ್ ಸರ್ಚ್ ಮಾಡಿದಾಗ, 26 ಫೆಬ್ರವರಿ 2025 ರಂದು ಪ್ರಯಾಗ್ರಾಜ್ನ ಮಹಾ ಕುಂಭಮೇಳ ಸ್ಥಳದಲ್ಲಿ ನಡೆದ ಏರ್ ಶೋನ ಸುದ್ದಿ ವರದಿಗಳು ಲಭ್ಯವಾಗಿದ್ದು, ಆದರೆ ಈ ಸುದ್ದಿ ವರದಿಗಳಲ್ಲಿ ವೈರಲ್ ಫೋಟೋದಲ್ಲಿರುವಂತೆ ಯಾವುದೇ ದೃಶ್ಯಗಳು ನಮಗೆ ಕಂಡುಬಂದಿಲ್ಲ. ಹೀಗಾಗಿ ವೈರಲ್ ಫೋಟೋ ವಿವಿಧ ಅನುಮಾನಗಳಿಗೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ನಾವು ಈ ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಈ ಫೋಟೋ ಅಂತರ್ಜಾಲದಲ್ಲಿ ಬಹಳ ಸಮಯದಿಂದಲೂ ಹಂಚಿಕೊಳ್ಳಲಾಗುತ್ತಿದೆ ಎಂಬ ಅಂಶ ಕಂಡು ಬಂದಿದೆ,ಈ ಫೋಟೋ ಕನಿಷ್ಠ ಮಾರ್ಚ್ 2019 ರಿಂದ ಶೇರ್ ಮಾಡಲಾಗುತ್ತಿದ್ದು. ಈ ಮೂಲಕ ವೈರಲ್ ಫೋಟೋವನ್ನು 26 ಫೆಬ್ರವರಿ 2025 ರಂದು ಪ್ರಯಾಗ್ರಾಜ್ನಲ್ಲಿ ತೆಗೆದುಕೊಳ್ಳಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
2019 ರಿಂದಲೂ ಈ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದ್ದು ಎಕ್ಸ್ ಖಾತೆಯಲ್ಲಿ 6 ಮಾರ್ಚ್ 2019ರಂದು ಪುರುಷೋತ್ತಮ ವ್ಯಾಸ್ ಎಂಬುವವರು ಹಂಚಿಕೊಂಡ ಪೋಸ್ಟ್ನಲ್ಲೂ ವೈರಲ್ ಫೋಟೋ ಕಾಣಿಸಿಕೊಂಡಿದೆ

ಇನ್ನು ಮಹಾ ಕುಂಭಮೇಳದ ಅಂತಿಮ ದಿನದಂದು ಪ್ರಯಾಗ್ರಾಜ್ನಲ್ಲಿ ನಡೆದ ಭಾರತೀಯ ವಾಯುಪಡೆಯ ವಾಯು ಪ್ರದರ್ಶನದ ದೃಶ್ಯಗಳನ್ನು ನಾವು ಪರಿಶೀಲಿಸಿದ್ದೇವೆ. ಇದನ್ನು ಡಿಡಿ ನ್ಯೂಸ್ ಮತ್ತು ನ್ಯೂಸ್ 9 ಲೈವ್ ಪ್ರಕಟಿಸಿವೆ. ಆದಾಗ್ಯೂ, ವೈರಲ್ ಆದ ಚಿತ್ರವನ್ನು ಹೋಲುವ ತ್ರಿಶೂಲ ರಚನೆಯ ಯಾವುದೇ ದೃಶ್ಯಗಳು ನಮಗೆ ಕಂಡುಬಂದಿಲ್ಲ. ಅಲ್ಲದೆ, ತ್ರಿಶೂಲ ರಚನೆಯ ಕುರಿತು ವಿಶ್ವಾಸಾರ್ಹ ಮಾಧ್ಯಮಗಳಿಂದ ಯಾವುದೇ ವರದಿ ಕೂಡ ನಮಗೆ ಕಂಡುಬಂದಿಲ್ಲ.
On the final day of #Mahakumbh 2025, the Indian Air Force marked a grand conclusion with a spectacular air show over the #KumbhMela grounds. This breathtaking display was a fitting tribute to the world’s largest spiritual gathering, which saw an unprecedented 64 crore devotees… pic.twitter.com/72zvgljcp6
— Awanish K Awasthi (@AwasthiAwanishK) February 26, 2025
ಉತ್ತರ ಪ್ರದೇಶ ಮುಖ್ಯಮಂತ್ರಿಯವರ ಸಲಹೆಗಾರ ಅವನೀಶ್ ಕೆ ಅವಸ್ಥಿ ಅವರು ಮಹಾ ಕುಂಭದ ಕೊನೆಯಲ್ಲಿ ನಡೆದ ಏರ್ ಶೋನ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಆದಾಗ್ಯೂ, ಅವುಗಳಲ್ಲಿ ಯಾವುದೂ ವೈರಲ್ ಚಿತ್ರಕ್ಕೆ ಹೋಲುವ ದೃಶ್ಯವನ್ನು ಒಳಗೊಂಡಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಈ ವೈರಲ್ ಫೋಟೋವನ್ನು 2025 ರ ಫೆಬ್ರವರಿ 26 ರಂದು ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳ ಸಮಾರೋಪ ಸಮಾರಂಭದ ಏರ್ ಶೋ ಸಮಯದಲ್ಲಿ ಸೆರೆಹಿಡಿಯಲಾಗಿಲ್ಲ. ವೈರಲ್ ಫೋಟೋವನ್ನು ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆಗಿರುವ ಫೋಟೋವು ಹಳೆಯದು ಮತ್ತು ಮಹಾ ಕುಂಭಮೇಳದ ಕೊನೆಯಲ್ಲಿ IAF ಗಾಳಿಯಲ್ಲಿ ತ್ರಿಶೂಲ ರಚನೆಯನ್ನು ಮಾಡಿದೆ ಎಂಬ ಹೇಳಿಕೆ ಸುಳ್ಳು . ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | 50 ಲಕ್ಷ ರೂಪಾಯಿಯ ಕಾರು ಖರೀದಿಸಿದ್ರಾ ದೆಹಲಿ ಸಿಎಂ ರೇಖಾ ಗುಪ್ತಾ ?

