FACT CHECK | ಮಹಿಳೆಯೊಬ್ಬರು ಹಾವನ್ನು ಕುತ್ತಿಗೆಗೆ ಹಾರದಂತೆ ಹಾಕಿಕೊಂಡ ವಿಡಿಯೋದ ಅಸಲೀಯತ್ತೇನು ಗೊತ್ತೆ?

ಫೆಬ್ರವರಿ 26 ರಂದು ಮಹಾಶಿವರಾತ್ರಿಯ ಸಂದರ್ಭದಲ್ಲಿ, ದೇಶಾದ್ಯಂತದ ಶಿವನ ದೇವಾಲಯಗಳಲ್ಲಿ ಶಿವಭಕ್ತರ ಪ್ರವಾಹವು ನೆರೆದಿತ್ತು. ಮಹಾಶಿವರಾತ್ರಿಯಂದು ಬೆಳಗ್ಗೆಯಿಂದ ಸಂಜೆಯವರೆಗೆ ಭಕ್ತರು ದೇವಾಲಯಗಳಲ್ಲಿ ಮಹಾದೇವನಿಗೆ ಪೂಜೆ ಸಲ್ಲಿಸಿ ರಾತ್ರಿಯಿಡಿ ಭಜನೆ, ಕುಣಿತ, ಹಾಡು ಹರಿಕಥೆ ಮಾಡಿ ಜಾಗರಣೆ ಮೂಲಕ ಕೃತಾರ್ಥರಾಗಿದ್ದಾರೆ.

@anamika943ಅನಾಮಿಕಾ ಠಾಕೂರ್ ಎಂಬ ಹೆಸರಿನ ಎಕ್ಸ್‌ ಖಾತೆಯ ಬಳಕೆದಾರರು ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಜಯ ಮಹದೇವ, ಹರ ಮಹದೇವ ಎಂಬ ಸಾಲುಗಳೊಂದಿಗೆ ಹಂಚಿಕೊಂಡಿದ್ದಾರೆ.

ಈ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಶಿವರಾತ್ರಿಗೆ ಸಂಬಂಧಿಸಿದ್ದು ಎಂದು ಪ್ರತಿಪಾದಿಸಿ ವಿಡಿಯೋವೊಂದು ಪ್ರಸಾರವಾಗುತ್ತಿದ್ದು, ಮಹಿಳೆಯೊಬ್ಬರು ಹೊಳೆಯ ದಡದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ, ಆಕೆಯ ಬಳಿ ಹಾವೊಂದು ಕಾಣಿಸಿಕೊಳ್ಳುತ್ತದೆ,  ಮಹಿಳೆ ಹಾವನ್ನು ಎತ್ತಿಕೊಂಡು ಕುತ್ತಿಗೆಗೆ ಹಾಕಿಕೊಳ್ಳುವುದ್ನು ಕಾಣಬಹುದು.

ಈ ವಿಡಿಯೋಗೆ ಕಮೆಂಟ್ ಮಾಡಿರುವ ಜನರು ಮಹಿಳೆಯ ಶೌರ್ಯವನ್ನು ಶ್ಲಾಘಿಸಿದ್ದಾರೆ. ಧೈರ್ಯಶಾಲಿ ಮಹಿಳೆ, ಅಪಾಯಕಾರಿ ಆದರೆ ಅದ್ಭುತವಾಗಿದೆ. ಎಂದು ಕಮೆಂಟ್‌ ಮಾಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಸತ್ಯಾಸತ್ಯತೆಯನ್ನು ತಿಳಿಯಲು ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದಾಗ, Instagram ಖಾತೆಗಳು ಲಭ್ಯವಾಗಿವೆ, ಇಲ್ಲಿ ಮೂಲ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಇಷ್ಟೇ ಅಲ್ಲ, ಶಿವಾನಿ ರಿಕ್ಷಾ ಡ್ರೈವರ್ ಎಂಬ ಹೆಸರಿನ ಈ ಖಾತೆಯಲ್ಲಿ ಮಹಿಳೆಯೊಬ್ಬರು ಹಾವನ್ನು ಕುತ್ತಿಗೆಗೆ ಹಾಕಿಕೊಳ್ಳುವ ಇನ್ನೂ ಕೆಲವು ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ.

woman with snake 4

ಶಿವಾನಿ ರಿಕ್ಷಾ ಡ್ರೈವರ್ ಅಕೌಂಟ್‌ನಲ್ಲಿ 23 ಫೆಬ್ರವರಿ 2025 ರಂದು ತನ್ನ Instagram ಖಾತೆಯಲ್ಲಿ ಈ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ. ಇದರೊಂದಿಗೆ ಇನ್ನೂ ಕೆಲವು ವೀಡಿಯೋಗಳನ್ನು ಇಲ್ಲಿ ಪೋಸ್ಟ್ ಮಾಡಿದ್ದಾರೆ. ಫೆಬ್ರವರಿ 28 ರಂದು ವಿಡಿಯೋ 100 ಮಿಲಿಯನ್ ವೀವ್ಸ್‌ ಪಡೆದ ಕಾರಣ, ಅವರು ಮತ್ತೊಮ್ಮೆ ಅದೇ ವೀಡಿಯೊವನ್ನು ಅಪ್ಲೋಡ್ ಮಾಡಿ ಫಾಲೋವರ್ಸ್‌ಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಶಿವಾನಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಇನ್ನೂ ಕೆಲವು ವೀಡಿಯೊಗಳನ್ನು ಅಪ್ಲೋಡ್ ಮಾಡಿದ್ದಾರೆ.

woman with snake 5

ಶಿವಾನಿ ಯೂಟ್ಯೂಬ್ ಚಾನೆಲ್ ಅನ್ನು ಸಹ ಹೊಂದಿದ್ದು, ಅಲ್ಲಿಯೂ ಇದೇ ವಿಡಿಯೋಗಳನ್ನು ಅಪ್‌ಲೋಡ್‌ ಮಾಡಿರುವುದನ್ನು ಕಾಣಬಹುದು.  100 ಮಿಲಿಯನ್ ವೀಕ್ಷಣೆಗಳನ್ನು ದಾಟಿದ್ದಕ್ಕಾಗಿ ಮಹಿಳೆ ಧನ್ಯವಾದ ಹೇಳಿದ್ದಾರೆ.

ಮಹಿಳೆಯೊಬ್ಬರು ಪೂಜೆ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಬಂದ ಹಾವನ್ನು ಕುತ್ತಿಗೆಗೆ ಹಾಕಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋವನ್ನು ನೈಜ ಘಟನೆ ಎಂದು ತೋರಿಸಲಾಗುತ್ತಿದೆ.ಆದರೆ ಈ ವೀಡಿಯೊ ಸ್ಕ್ರಿಪ್ಟ್ ಮಾಡಿರುವುದು ಕಂಡುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಶಿವರಾತ್ರಿ ಹಬ್ಬದಂದು ಮಹಿಳೆಯೊಬ್ಬರು ಹಾವನ್ನು ಕುತ್ತಿಗೆಗೆ ಹಾಕಿಕೊಂಡು ಭಕ್ತಿಯ ಪರಾಕಾಷ್ಟೆ ಮೆರೆದಿದ್ದಾರೆ ಎಂದು ಹಂಚಿಕೊಂಡಿರುವ ವಿಡಿಯೋ ನೈಜ ಘಟನೆಯಲ್ಲ. ಸ್ಕ್ರಿಪ್ಟ್‌ ಮಾಡಿದ ವಿಡಿಯೋವನ್ನು ನೈಜ ಘಟನೆ ಎಂಬಂತೆ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಹಾಕುಂಭ ಮೇಳದಲ್ಲಿ ಶಿವರಾತ್ರಿಯ ಸಲುವಾಗಿ ಆಕಾಶದಲ್ಲಿ ತ್ರಿಶೂಲದ ಚಿತ್ತಾರವನ್ನು ರಚಿಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights